Home Mangalorean News Kannada News ನೇತ್ರಾವತಿ ಸೇತುವೆಯಲ್ಲಿ ಅನಾಥವಾಗಿ ಕಾರು ಪತ್ತೆ; ಮಾಲಕ ನಾಪತ್ತೆ

ನೇತ್ರಾವತಿ ಸೇತುವೆಯಲ್ಲಿ ಅನಾಥವಾಗಿ ಕಾರು ಪತ್ತೆ; ಮಾಲಕ ನಾಪತ್ತೆ

Spread the love
RedditLinkedinYoutubeEmailFacebook MessengerTelegramWhatsapp

 ನೇತ್ರಾವತಿ ಸೇತುವೆಯಲ್ಲಿ ಅನಾಥವಾಗಿ ಕಾರು ಪತ್ತೆ; ಮಾಲಕ ನಾಪತ್ತೆ

ಕಾರೊಂದು ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದರ ಮಾಲಕ ನಾಪತ್ತೆಯಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಸಮೀಪದ ನೇತ್ರಾವತಿ ಸೇತುವೆ ಬಳಿ ಕಳೆದ ರಾತ್ರಿ ನಡೆದಿದೆ.

 

ನಾಪತ್ತೆಯಾದವರನ್ನು ಮೂಲತಃ ಸೋಮೇಶ್ವರ ಕೊಲ್ಯ ನಿವಾಸಿ ವಿಕ್ರಂ ಗಟ್ಟಿ(34) ಎಂದು ಗುರುತಿಸಲಾಗಿದೆ. ಸದ್ಯ ಕೊಣಾಜೆ ಪುಳಿಂಚಾಡಿ ಬಳಿ ಹೊಸ ಮನೆಯನ್ನು ಕಟ್ಟಿ ವಾಸವಾಗಿದ್ದ ವಿಕ್ರಂ ಗಟ್ಟಿಯವರ ಕಾರು ರಾತ್ರಿ 10:30ಕ್ಕೆ ತೊಕ್ಕೊಟ್ಟು ಕಡೆಯಿಂದ ಸೇತುವೆ ಪ್ರವೇಶಿಸುವಲ್ಲಿ ಪತ್ತೆಯಾಗಿದೆ. ಕಾರಿನ ಹೆಡ್ ಲೈಟ್ ಉರಿಯುತ್ತಿದ್ದು, ಬಾಗಿಲು ತೆರೆದ ಸ್ಥಿತಿಯಲ್ಲಿತ್ತೆನ್ನಲಾಗಿದೆ. ಈ ನಡುವೆ ವಿಕ್ರಂ ಗಟ್ಟಿ ನಾಪತ್ತೆಯಾಗಿದ್ದು, ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಕಂಕನಾಡಿ ನಗರ ಠಾಣೆ ಪೊಲೀಸರು ಆಗಮಿಸಿದ್ದು, ಶೋಧ ಮುಂದುವರಿಸಿದ್ದಾರೆ.


Spread the love

Exit mobile version