Home Mangalorean News Kannada News `ನೇಮೊದ ಬೂಳ್ಯ’ ಕರಾವಳಿಯಾದ್ಯಂತ ತೆರೆಗೆ

`ನೇಮೊದ ಬೂಳ್ಯ’ ಕರಾವಳಿಯಾದ್ಯಂತ ತೆರೆಗೆ

Spread the love

`ನೇಮೊದ ಬೂಳ್ಯ’ ಕರಾವಳಿಯಾದ್ಯಂತ ತೆರೆಗೆ

ಮಂಗಳೂರು: ತುಳು ಭಾಷಾ ಬೆಳವಣಿಗೆಯಲ್ಲಿ ತುಳು ನಾಟಕ ಹಾಗೂ ತುಳು ಸಿನಿಮಾಗಳು ಮಹತ್ತರ ಕೊಡುಗೆಯನ್ನು ನೀಡಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ.ಭಂಡಾರಿ ತಿಳಿಸಿದರು.

ಭಾರತ್‍ಮಾಲ್‍ನಲ್ಲಿರುವ ಬಿಗ್‍ಸಿನಿಮಾಸ್‍ನಲ್ಲಿ ಕುದ್ರಾಡಿಗುತ್ತು ಚಂದ್ರಶೇಖರ ಮಾಡ ನಿರ್ಮಾಣದ ಬಿ.ಕೆ.ಗಂಗಾಧರ ಕಿರೋಡಿಯನ್ ನಿರ್ದೇಶನದ `ನೇಮೊದ ಬೂಳ್ಯ’ ತುಳು ಚಲನ ಚಿತ್ರದ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತುಳು ಭಾಷಾ ಸಿನಿಮಾಗಳನ್ನು ತುಳುವರು ಮತ್ತು ತುಳುವರೇತರರು ನೋಡಿ ಪ್ರೋತ್ಸಾಹಿಸಬೇಕಾಗಿದೆ.

ಸಂದೇಶ ನೀಡುವಂತಹ ಸಿನಿಮಾಗಳಿಂದ ಸಮಾಜಕ್ಕೂ ಒಳಿತಾಗುತ್ತದೆ. ತುಳುವಿನಲ್ಲಿ ಹಾಸ್ಯದ ಜತೆಗೆ ಸದಭಿರುಚಿಯ ಸಿನಿಮಾಗಳನ್ನು ಪ್ರೇಕ್ಷಕರು ಪ್ರೋತ್ಸಾಹಿಸುವಂತಾಗಲಿ ಎಂದರು.

 ಸತ್ಯ ಘಟನೆಯನ್ನಾಧರಿಸಿದ `ನೇಮೊದ ಬೂಳ್ಯ’ ಸಿನಿಮಾ ಹೆಣ್ಣೊಬ್ಬಳ ಬದುಕಿನ ಕತೆಯನ್ನೊಳಗೊಂಡಿದೆ ಎಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು.

ಚಂದ್ರಶೇಖರ ಮಾಡರವರು ಭಕ್ತಿ ಶ್ರದ್ದೆಯಿಂದ ನಿರ್ಮಿಸಿದ `ನೇಮೊದ ಬೂಳ್ಯ’ ಸಿನಿಮಾ ಯಶಸ್ಸನ್ನು ಪಡೆಯುವಂತಾಗಲಿ ಎಂದು ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.

200 ವರ್ಷಗಳ ಹಿಂದೆ ಪುತ್ತೂರಿನ ಬೆಟ್ಟಂಪ್ಪಾಡಿಯಲ್ಲಿ ಸ್ತ್ರೀ ಶೋಷಣೆಯ ವಿರುದ್ದವಾಗಿ ಒಂದು ಪರವ ಸಮುದಾಯದ ದಿಟ್ಟ ಹೆಣ್ಣು ತಿರುಗಿ ನಿಂತು ಅನ್ಯಾಯಗಾರನಿಗೆ ಯಾವ ರೀತಿ ಶಿಕ್ಷೆ ಕೊಟ್ಟ್ಟು, ಆ ಮುಖೇನ ತಾನು ಹೇಗೆ ತನ್ನ ಮಾನವನ್ನು ಕಾಪಾಡಿ ಕೊಳ್ಳುತ್ತಾಳೆಂಬ ಕಥಾನಕ ನೇಮೊದ ಬೂಳ್ಯ ಸಿನಿಮಾದಲ್ಲಿದೆ.    ತುಳುಸಾಹಿತ್ಯ ಅಕಾಡೆಮಿಯ ಮಾಜೀ ಸದಸ್ಯ ದಯಾನಂದ ಕತ್ತಲ್‍ಸಾರ್ ತಿಳಿಸಿದರು. ಸಿನಿಮಾದ ಕಥೆ ಸತ್ಯ ಘಟನೆಯನ್ನಾಧರಿಸಿದ್ದು ಸಿನಿಮಾವನ್ನು ಪ್ರೇಕ್ಷಕರು ಪ್ರೋತ್ಸಾಹಿಸುತ್ತಾರೆಂಬ ವಿಶ್ವಾಸ ತನಗಿದೆ ಎಂದು ನಿರ್ಮಾಪಕ ಚಂದ್ರಶೇಖರ ಮಾಡ ತಿಳಿಸಿದರು.

ಸಮಾರಂಭದಲ್ಲಿ ತುಳು ಸಿನಿಮಾರಂಗದ ಪ್ರಮುಖರಾದ ಟಿ.ಎ.ಶ್ರೀನಿವಾಸ್ ಡಾ.ಸಂಜೀವ ದಂಡೆಕೇರಿ, ದೇವದಾಸ್ ಕಾಪಿಕಾಡ್, ವಿಜಯಕುಮಾರ್ ಕೊಡಿಯಾಲ್ ಬೈಲ್, ಕಿಶೋರ್ ಡಿ.ಶೆಟ್ಟಿ ಪ್ರಕಾಶ್ ಪಾಂಡೇಶ್ವರ, ವಿ.ಜಿ.ಪಾಲ್, ರಾಜೇಶ್ ಬ್ರಹ್ಮಾವರ, ಆರ್.ಧನರಾಜ್ , ಶಿವಾನಂದ ಕರ್ಕೇರಾ, ಭಾಸ್ಕರ ರೈ ಕುಕ್ಕುವಳ್ಳಿ, ಸೂರಜ್ ಶೆಟ್ಟಿ, ತಾರಾನಾಥ ಶೆಟ್ಟಿ ಬೋಳಾರ, ಎನ್‍ಆರ್‍ಕೆ ವಿಶ್ವನಾಥ್, ಡಾ.ಆಶಾಜ್ಯೋತಿ ರೈ, ಸಚಿನ್ ಉಪ್ಪಿನಂಗಡಿ, ರಾಜೇಶ್ ಕುಡ್ಲ ಪ್ರೇಮ್ ಶೆಟ್ಟಿ ಸುರತ್ಕಲ್, ಪ್ರದೀಪ್ ಆಳ್ವ ಕದ್ರಿ, ಸದಾನಂದ ಪೆರ್ಲ, ಸಂಗೀತ ನಿರ್ದೇಶಕ ವಿ.ಮನೋಹರ್ , ನಟಿ ರಜನಿ, ಛಾಯಾಗ್ರಹಕ ಉಮಾಪತಿ, ನಿರ್ದೇಶಕ ಗಂಗಾಧರ ಕಿರೋಡಿಯನ್, ನಿರ್ಮಾಪಕ ಕುದ್ರಾಡಿಗುತ್ತು ಚಂದ್ರಶೇಖರ ಮಾಡ, ಶಬರಿಮಾಡ, ಸುಭಾಸ್‍ಚಂದ್ರ ಮಾಡ ಉಪಸ್ಥಿತರಿದ್ದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರ್ವಹಿಸಿದರು.

ನೇಮೊದ ಬೂಳ್ಯ ಸಿನಿಮಾವು ಮಂಗಳೂರಿನಲ್ಲಿ ಬಿಗ್ ಸಿನಿಮಾಸ್, ಪಿವಿಆರ್ ಸಿನಿಪೆÇಲಿಸ್, ಉಡುಪಿಯಲ್ಲಿ ಡಯಾನಾ, ಮೂಡಬಿದ್ರೆಯಲ್ಲಿ ಅಮರಶ್ರೀ, ಪುತ್ತೂರಿನಲ್ಲಿ ಅರುಣಾ, ಕಾರ್ಕಳದಲ್ಲಿ ಪ್ಲಾನೆಟ್, ಮಣಿಪಾಲದಲ್ಲಿ ಐನಾಕ್ಸ್‍ನಲ್ಲಿ ಯಶಸ್ವೀ ಪ್ರದರ್ಶನಗಳನ್ನು ಕಾಣುತ್ತಿದೆ.


Spread the love

Exit mobile version