Home Mangalorean News Kannada News ನೋಟು ಅಮಾನ್ಯತೆ ವಿರುದ್ಧ ಮಿಥುನ್‌ ರೈ ನೇತೃತ್ವದಲ್ಲಿ ಮೂಲ್ಕಿಯಲ್ಲಿ ಕರಾಳ ದಿನಾಚರಣೆ

ನೋಟು ಅಮಾನ್ಯತೆ ವಿರುದ್ಧ ಮಿಥುನ್‌ ರೈ ನೇತೃತ್ವದಲ್ಲಿ ಮೂಲ್ಕಿಯಲ್ಲಿ ಕರಾಳ ದಿನಾಚರಣೆ

Spread the love

ನೋಟು ಅಮಾನ್ಯತೆ ವಿರುದ್ಧ  ಮಿಥುನ್‌ ರೈ ನೇತೃತ್ವದಲ್ಲಿ  ಮೂಲ್ಕಿಯಲ್ಲಿ ಕರಾಳ ದಿನಾಚರಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್‌ ರೈ ಹಾಗು ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು ಅವರ ನೇತ್ರತ್ವದಲ್ಲಿ ಮುಲ್ಕಿಯ ಹಳೆಯಂಗಡಿ ಜಂಕ್ಷನ್ ನಲ್ಲಿ ಬಿಜೆಪಿ ಸರ್ಕಾರದ ನೋಟು ಅಮಾನ್ಯತೆ ವೈಫ಼ಲ್ಯತೆ ವಿರುದ್ಧ  ಕರಾಳ ದಿನಾಚರಣೆಯನ್ನು ಆಚರಿಸಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಿಥುನ್ ರೈ ಅವರು ನೋಟು ಅಮಾನ್ಯಿಕರಣದಿಂದ ಜನ ಸಮಾನ್ಯರ ಮೇಲೆ ಸಮಸ್ಯೆ ಆಗಿದ್ದು ಇದರಿಂದ ಯಾರಿಗೂ ಅನುಕೂಲ ಆಗಿಲ್ಲ. ದೇಶದ ಜನತೆ  ಸಮಸ್ಯೆಯಿಂದ ನರಳುವುದರೊಂದಿಗೆ ಜಿಡಿಪಿ ರೇಟ್ ಮೇಲೆ ಪರಿಣಾಮ ಬೀರಿದೆ, ಜನ ನರಳುತ್ತಿದ್ದಾರೆ, ಬಿಜೆಪಿಯವರು ಹಬ್ಬ ಆಚರಣೆ ಮಾಡ್ತಿದ್ದಾರೆ. ಮೋದಿ ಸರಕಾರದ ಜನವಿರೋಧಿ ಆಡಳಿತದ ವಿರುದ್ದ ನಿರಂತರವಾಗಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಈ ಸಂಧರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ವಸಂತ್ ಬೆರ್ನಾಡ್ ,ಮುಲ್ಕಿ ಮಹಿಳಾ ಕಾಂಗ್ರೆಸ್ ಅದ್ಯಕ್ಶೆ ಪದ್ಮಾವತಿ ಶೆಟ್ಟಿ, ಎ.ಪಿ.ಮ್.ಸಿ ಅಧ್ಯಕ್ಷ ರಾದ ಪ್ರಮೋದ್ ಕುಮಾರ್, ಮುಲ್ಕಿ ನಗರಸಭೆ ನಾಮ ನಿರ್ದೇಶಿತ ಸದಸ್ಯರಾದ ಪುತುಬಾವ , ಅಶೋಕ್ ಪುಜಾರ್ , ಯೋಗಿಶ್ ಕೋಟ್ಯಾನ್, ಸಾಹುಲ್ ಹಮೀದ್ , ಮಯದ್ದಿ , ಹಾಗೂ ಮುಲ್ಕಿ‌ ಬ್ಲಾಕ್‌ನ ಹಲವು ಕಾಂಗ್ರೆಸ್ ಕಾರ್ಯಕರ್ತರು  ಉಪಸ್ಥಿತರಿದ್ದರು.


Spread the love

Exit mobile version