Home Mangalorean News Kannada News ನ್ಯಾಶನಲ್ ಯುವ ಕೊ-ಓಪರೇಟಿವ್ ಸೊಸೈಟಿ ಲಿಮಿಟೆಡ್ (NYCS)ನ ಓಟಗಾರರ ಆಯ್ಕೆ

ನ್ಯಾಶನಲ್ ಯುವ ಕೊ-ಓಪರೇಟಿವ್ ಸೊಸೈಟಿ ಲಿಮಿಟೆಡ್ (NYCS)ನ ಓಟಗಾರರ ಆಯ್ಕೆ

Spread the love

ನ್ಯಾಶನಲ್ ಯುವ ಕೊ-ಓಪರೇಟಿವ್ ಸೊಸೈಟಿ ಲಿಮಿಟೆಡ್ (NYCS)ನ ಓಟಗಾರರ ಆಯ್ಕೆ

ಮಂಗಳೂರು: ಭಾರತವು ಜಗತ್ತಿನಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ. ನಮ್ಮ ದೇಶದ ಯುವ ಶಕ್ತಿಯು ಜಗತ್ತಿನಲ್ಲಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ನಮ್ಮ ದೇಶವು ಇಷ್ಟು ಯುವಶಕ್ತಿಯನ್ನು ಹೊಂದಿದ್ದರೂ ಕ್ರೀಡಾ ಮನೊಭಾವನೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹಿಂದೆ ಉಳಿದಿದೆ. ಇದನ್ನು ಮನಗಂಡ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಕ್ಷೇತ್ರದ ಮೂಲಕ ಮುಂದೆ ತರಬೇಕೆಂದು ಯೋಚನೆಯನ್ನು ಮಾಡಿದ್ದಾರೆ. ಇದಕ್ಕೋಸ್ಕರ ಸಭೆ ನಡೆಸಿ ಸಲಹೆ ನೀಡಿದಾಗ ಅದನ್ನು ಪೆಟ್ರೋಲಿಯಂ ಇಲಾಖೆಯ ಭಾರತ ಅನಿಲ ಪ್ರಾಧಿಕಾರ (GAIL) ಸಂಸ್ಥೆಯು ನೆರವೇರಿಸುವ ಭರವಸೆಯನ್ನು ನೀಡಿದೆ. ಗೆಲ್‍ನ ಸಿ.ಎಸ್.ಆರ್ ನಿಧಿಯ ಒಂದು ಭಾಗವನ್ನು ವೇಗದ ಓಟಗಾರರ ಹುಡುಕಾಟಕ್ಕೆ ಬಳಸಲು ತೀರ್ಮಾನಿಸಲಾಗಿದೆ. ಇದಕ್ಕೋಸ್ಕರ ರಾಷ್ಟ್ರೀಯ ಯುವ ಸಹಕಾರಿ ಸಂಸ್ಥೆ (NYCS) ಸಮಾಜ ಕಾರ್ಯ ಸಂಸ್ಥೆಗೆ 100, 200, ಮತ್ತು 400 ಮೀಟರ್ ವೇಗದ ಓಟಗಾರರನ್ನು ಗ್ರಾಮೀಣ ಮಟ್ಟದಿಂದ ನಗರ ಮಟ್ಟದವರೆಗೆ ಹುಡುಕುವ ಜವಾಬ್ದಾರಿಯನ್ನು ಗೆಲ್ ಸಂಸ್ಥೆ ನೀಡಿದೆ.

gail

ರಾಷ್ಟ್ರೀಯ ಯುವ ಸಹಕಾರಿ ಸಂಸ್ಥೆ (NYCS)ಭಾರತ ಸರ್ಕಾರದ ಸಹಕಾರಿ ಕಾಯ್ದೆಯನ್ವಯ 1984 ರ ಪ್ರಕಾರ 1999 ರಲ್ಲಿ ನವದೆಹಲಿಯಲ್ಲಿ ಯುವಕರ ಶ್ರೇಯೋಭಿವೃದ್ಧಿಗಾಗಿ ಪ್ರಾರಂಭವಾಗಿರುವ ಸಂಸ್ಥೆ. ಈ ಸಂಸ್ಥೆಯು ದೇಶದಲ್ಲಿ ಬೇರೆ ಬೇರೆ ಕಾರ್ಯಕ್ರಮಗಳಾದ ಸೆಮಿನಾರ್, ಸಮ್ಮೇಳನ ಮತ್ತು ಕೌಶಲ್ಯ ತರಬೇತಿಗಳನ್ನು ಆಯೋಜನೆ ಮಾಡಿಕೊಂಡು ಬರುತ್ತಿದೆ. ನಮ್ಮ ದೇಶವು 125 ಕೋಟಿ ಜನಸಂಖ್ಯೆವಿರುವ ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ದೇಶ “GAIL INDIAN SPEED STAR # NYCS GAIL RAFTAAR Season – II” ನ ಮೂಲಕ ದೇಶದ 29 ರಾಜ್ಯಗಳ 660 ಜಿಲ್ಲೆಗಳನ್ನು ಸೇರಿಸಿ ಜಿಲ್ಲೆಗಳಲ್ಲಿ ಆಯ್ಕೆ ಪ್ರಕ್ರೀಯೆ ನಡೆಸಲಿದೆ. ಇದರ ಉದ್ದೇಶ 2020 ಟೋಕಿಯೊ ಒಲಂಪಿಕ್ಸ್‍ನಲ್ಲಿ ಭಾಗವಹಿಸಲು ಆಯ್ಕೆ ಆಗಿರುತ್ತದೆ.

ಈ ಮೂಲಕ ಜಿಲ್ಲಾ ಮಟ್ಟದಲ್ಲಿ ಆಯ್ಕೆ ಮಾಡಿ ವಲಯ ಮಟ್ಟಕ್ಕೆ ಕಳುಹಿಸಲಾಗುವುದು. ಅಲ್ಲಿ ಆಯ್ಕೆಯಾದವರನ್ನು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ಮುಂದೆ ಅವರನ್ನು 2020 ಟೋಕಿಯೋ ಒಲಂಪಿಕ್ಸ್‍ಗೆ ಆಯ್ಕೆ ಮಾಡಲಾಗುವುದು. ಸಂಪೂರ್ಣವಾಗಿ ಪಾರದರ್ಶಕತೆ ಹಾಗೂ ಉಚಿತ ಆಯ್ಕೆಯಾಗಿರುತ್ತದೆ. ಯಾವುದೇ ಖರ್ಚಿಯಿಲ್ಲದೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಮುಂದಿನ 4 ವರ್ಷ ಉಚಿತ ತರಬೇತಿ ನೀಡಲಾಗುವುದು.

ಕರ್ನಾಟಕದಲ್ಲಿ ಮಂಗಳೂರು, ಬೆಳಗಾವಿ, ಗುಲ್ಬರ್ಗ, ಬೆಂಗಳೂರು ಮತ್ತು ಕೊಡಗು ವಿಭಾಗ :
ಕರ್ನಾಟಕದಲ್ಲಿ ಮಂಗಳೂರು ವಿಭಾಗವನ್ನು ಜಿಲ್ಲಾ ಆಯ್ಕೆಗೆ ಆಯ್ಕೆ ಮಾಡಲಾಗಿದೆ. ಮಂಗಳೂರು ವಿಭಾಗದಲ್ಲಿ (ಮಂಗಳೂರು, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳು) ಭಾಗವಹಿಸುತ್ತವೆ. ಮಂಗಳೂರಿನಲ್ಲಿ ಮಂಗಳಾ ಕ್ರೀಡಾಂಗಣದಲ್ಲಿ ದಿನಾಂಕ 18-12-2016 ರಂದು ಬೆಳಿಗ್ಗೆ 08.30ಕ್ಕೆ ಓಟ ಪ್ರಾರಂಭವಾಗಲಿದೆ. ಜಿಲ್ಲೆಯ ನಿಗದಿತ ವಯೋಮಿತಿಯ ಯಾವ ವ್ಯಕ್ತಿಯು ಭಾಗವಹಿಸಬಹುದು. ಜನನ ಪ್ರಮಾಣ ಪತ್ರದ ಪ್ರತಿ ಹಾಗೂ ಶಾಲೆಯಿಂದ ನೀಡಿರುವ ದಾಖಲೆ ಪ್ರತಿ ಹಾಗೂ ಪೋಟೋ ಕಡ್ಡಾಯವಾಗಿರುತ್ತದೆ. ಅರ್ಜಿಯನ್ನು ಪ್ರತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಅಥವಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ.ಕ ಪ್ರಾಚಾರ್ಯ ಸಂಘದ ವೆಬ್‍ಸೈಟ್‍ನಿಂದ ಪಡೆದು ದಿನಾಂಕ 14–12–2016ರ ಸಂಜೆ 04.30ರ ಒಳಗಡೆ ಆಯಾ BEO ಕಛೇರಿ ಅಥವಾ MIFT College ಅತ್ತಾವರ KMC ಆಸ್ಪತ್ರೆ ಎದುರಿನ ಕಾಲೇಜು ಕಛೇರಿಯಲ್ಲಿ ನೀಡಬಹುದು.

ಸಂಪರ್ಕಿಸುವ ಮೊಬೈಲ್ ಸಂಖ್ಯೆ : ಯತೀಶ್ ಕುಮಾರ್ ಪಿ – 9916040445 ಸುದಿತ್ ಶೆಟ್ಟಿ – 9620648299

Email Id : 1985rameshk@gmail.com
Website : www.nycsindia.com
Online Registration : http://nycsindia.com/sports


Spread the love

Exit mobile version