Home Mangalorean News Kannada News ನ್ಯೂ ಮೀಡಿಯಾ ಕಾರ್ಯಾಗಾರ

ನ್ಯೂ ಮೀಡಿಯಾ ಕಾರ್ಯಾಗಾರ

Spread the love

‘ನ್ಯೂ ಮೀಡಿಯಾ’ ಕಾರ್ಯಾಗಾರ

ಮೂಡಬಿದಿರೆ: ನಮ್ಮ ಆಲೋಚನೆಗಳನ್ನು ಎಂದಿಗೂ ಯಾವುದೋ ಒಂದು ಚೌಕಟ್ಟಿಗೆ ಸೀಮಿತಗೊಳಿಸಬಾರದು.  ನಮ್ಮ ಗುರಿಯನ್ನು ತಲುಪವವರೆಗೂ ವಿವಿಧ ಆಯಾಮಗಳಲ್ಲಿ ಪ್ರಯತ್ನಿಸಬೇಕು ಎಂದು ಬೆಂಗಳೂರಿನ ಇನ್‍ಡೂಡಲ್ ಮೀಡಿಯಾದ ಸುದೀಪ್ ಶೆಣೈ ಹೇಳಿದರು.

ಆಳ್ವಾಸ್ ಕಾಲೇಜಿನ ಸ್ನಾತಕೋತರ ಪ್ರತಿಕೋದ್ಯಮ ವಿಭಾಗದಲ್ಲಿ ಆಯೋಜಿಸಿದ್ದ `ನ್ಯೂ ಮೀಡಿಯಾ’ ಕಾರ್ಯಾಗಾರದಲ್ಲಿ ಇವರು ಮಾತನಾಡಿದರು.

ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೇ ವಿಭಿನ್ನವಾದ ಕೌಶಲ್ಯವನ್ನು ಬೆಳೆಸಿಕೊಂಡು ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಗಾರದಲ್ಲಿ ನ್ಯೂ ಮೀಡಿಯಾದಲ್ಲಿರುವ ಅವಕಾಶಗಳ ಬಗ್ಗೆ ತಿಳಿಸುತ್ತಾ, ಸಾಮಾಜಿಕ ಜಾಲತಾಣದ ನಿರ್ವಹಣೆ, ಜಾಹಿರಾತು ಸಂಸ್ಥೆ, ಬ್ಲಾಗ್, ವೆಬ್‍ಸೈಟ್, ಸಂದರ್ಶನ ಮತ್ತು ಕಂಟೆಂಟ್ ರೈಟಿಂಗ್ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾರ್ಯಗಾರದಲ್ಲಿ ಪದವಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಮತ್ತು ಸ್ನಾತಕೋತರ ಪತ್ರಿಕೋದ್ಯಮದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಗಾರದಲ್ಲಿ ಸ್ನಾತಕೋತರ ವಿಭಾಗದ ಮುಖ್ಯಸ್ಥೆ ಡಾ.ಮೌಲ್ಯಜೀವನ್‍ರಾಮ್, ಉಪನ್ಯಾಸಕ ಡಾ.ಶ್ರೀನಿವಾಸ ಹೊಡೆಯಾಲ, ಉಪನ್ಯಾಸಕಿ ಶ್ರೀಗೌರಿ ಜೋಶಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದೇವಿಶ್ರೀ ಶೆಟ್ಟಿ ಸ್ವಾಗತಿಸಿ, ಪ್ರಸಾದ್ ಶೆಟ್ಟಿ ವಂದಿಸಿದರು.

“ಗುಂಪು ಆಪ್ತ ಸಮಾಲೋಚನೆ”

ಮೂಡಬಿದಿರೆ: “ನಮಗೆ ಜೀವನದಲ್ಲಿ ಯಾವುದೇ ಸಮಸ್ಯೆ ಬಂದರೂ ಅದಕ್ಕೆ ಪರಿಹಾರವನ್ನು ನಾವು ಕಂಡುಕೊಳ್ಳಬಹುದು. ಎಲ್ಲಾ ಸಮಸ್ಯೆಗಳು ವಿಭಿನ್ನವಾಗಿರುವುದರಿಂದ ಪರಿಹಾರಗಳೂ ವಿಭಿನ್ನವಾಗಿರುತ್ತವೆ” ಎಂದು ಮಂಗಳೂರು ರೋಶಿನಿ ನಿಲಯ ಕಾಲೇಜಿನ ಉಪನ್ಯಾಸಕಿ ಡಾ. ಆಡ್ರಿ ಪಿಂಟೋ ಹೇಳಿದರು.

ಆಳ್ವಾಸ್ ಕಾಲೇಜಿನ ಮನಃಶಾಸ್ತ್ರ ವಿಭಾಗವು ಆಯೋಜಿಸಿದ್ದ “ಗುಂಪು ಆಪ್ತ ಸಮಾಲೋಚನೆ” ಎಂಬ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಇವರು ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು “ಗುಂಪು ಆಪ್ತ ಸಮಾಲೋಚನೆಯಿಂದ ನಮ್ಮಲ್ಲಿರುವ ಶಕ್ತಿಯನ್ನು ನಾವು ಹೇಗೆ ಹೆಚ್ಚಿಸಿಕೊಳ್ಳಬಹುವುದು, ನಮ್ಮ ಭಾವನೆಯನ್ನು ಹೇಗೆ ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸುವುದು ಎನ್ನುವುದನ್ನು ತಿಳಿಯಬಹುದು. ಸಮಸ್ಯೆಯನ್ನು ಬಗೆಹರಿಸಲು ಇರುವ ಇತರ ದಾರಿಗಳನ್ನು ಹುಡುಕಲು ಹಾಗೂ ನಮ್ಮಲ್ಲಿರುವ ಅರಿವು ಹಾಗೂ ಜ್ಞಾನವನ್ನು ಹೆಚ್ಚಿಸಲು ಗುಂಪು ಆಪ್ತ ಸಮಾಲೋಚನೆಯು ಸಹಾಯ ಮಾಡುತ್ತದೆ” ಎಂದರು.

ಕಾರ್ಯಕ್ರಮದಲ್ಲಿ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ದೀಪಾ ಕೊಠಾರಿ ಹಾಗೂ ವಿಭಾಗದ ಇತರ ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಸಾರಾ ವಿಜಿ ನಿರೂಪಿಸಿ, ಆಗ್ನೇಸ್ ರಾಣಿ ವಂದಿಸಿದರು.


Spread the love

Exit mobile version