Home Mangalorean News Kannada News ನ. 10-11 : ಮಾನಸ ಪುನರ್ವಸತಿ ಹಾಗೂ ತರಬೇತಿ ಕೇಂದ್ರದ ದ್ವಿ-ದಶಮಾನೋತ್ಸವ ಸಂಭ್ರಮ

ನ. 10-11 : ಮಾನಸ ಪುನರ್ವಸತಿ ಹಾಗೂ ತರಬೇತಿ ಕೇಂದ್ರದ ದ್ವಿ-ದಶಮಾನೋತ್ಸವ ಸಂಭ್ರಮ

Spread the love

ನ. 10-11 : ಮಾನಸ ಪುನರ್ವಸತಿ ಹಾಗೂ ತರಬೇತಿ ಕೇಂದ್ರದ ದ್ವಿ-ದಶಮಾನೋತ್ಸವ ಸಂಭ್ರಮ

ಉಡುಪಿ: ಉಡುಪಿ ಜಿಲ್ಲೆಯ ಪಾಂಬೂರಿನಲ್ಲಿ, ಕಥೊಲಿಕ್  ಸಭಾ ಮಂಗಳೂರು ಹಾಗೂ ಉಡುಪಿ ಪ್ರದೇಶ(ರಿ) ಇವರಿಂದ ನಡೆಸಲ್ಪಡುವ, ಕಳೆದ ಎರಡು ದಶಕಗಳಿಂದ  ಮಾನಸಿಕ ವಿಶೇಷ ಮಕ್ಕಳ ಸೇವೆಯಲ್ಲಿ  ತೊಡಗಿದ ಮಾನಸ  ಪುನರ್ವಸತಿ ಹಾಗೂ ತರಬೇತಿ ಕೇಂದ್ರವು ಇದೇ ನವೆಂಬರ್ ತಿಂಗಳ 10 ಹಾಗೂ 11 ರಂದು ದ್ವಿ-ದಶಮಾನೋತ್ಸವ ಸಂಭ್ರಮ ಆಚರಿಸುತ್ತಿದೆ.  1997 ನವೆಂಬರ್ ತಿಂಗಳಿನ 14ರಂದು ಪ್ರಾರಂಭಗೊಂಡ ಈ ಶಾಲೆಯಲ್ಲಿ ಈಗ ಎಲ್ಲಾ ಶಿಕ್ಷಣ ನೀಡಲಾಗುತ್ತಿದೆ.  68 ಮಂದಿ ವಸತಿ ಗೃಹದಲ್ಲಿ ವಾಸಿಸುತಿದ್ದಾರೆ. ಕಳೆದ 19 ವರ್ಷಗಳಲ್ಲಿ 584 ಮಕ್ಕಳಿಗೆ ತರಬೇತಿ ನೀಡಲಾಗಿದೆ. 7 ಮಂದಿ ಅಂತರಾಷ್ಟ್ರೀಯ ವಿಶೇಷ ಒಲಿಂಪಿಕ್ಸ್‍ನಲ್ಲಿ ಭಾರತವನ್ನು ಪ್ರತಿನಿಧಿಸಿ 4 ಬಂಗಾರದ, 2 ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗಳಿಸಿದ್ದಾರೆ.

ನವೆಂಬರ್ 10 ರಂದು  ವಿಶೇಶ ಮಕ್ಕಳ ಮಾನಸಿಕ ಬೆಳವಣಿಗೆ ಬಗ್ಗೆ ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಯಲಿದೆ. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ  ಮಂತ್ರಿಗಳಾದ ಶ್ರಿ ಪ್ರಮೋದ್ ಮದ್ವರಾಜ್ ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಮಂಗಳೂರಿನ ಬಿಷಪ್ ಅತೀ ವಂದನೀಯ ಆಲೋಶಿಯಸ್ ಡಿ’ಸೋಜರವರು ಅದ್ಯಕ್ಷರಾಗಿಯೂ, ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್, ಉಡುಪಿಯ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ಹಾಗೂ ಶಿಕಂದಾರಾಬಾದಿನ ವಿಶೇಸ ಸಂಸ್ಥೆಯ ಡಾ. ನಿಬೆದಿತ ಪಾಟ್ನಾಯಾಕ್ ಅತಿಥಿಗಳಗಿ ಆಗಮಿಸಲಿದ್ದಾರೆ. ವಿಶಯ ತಜ್ನರು ಪ್ರಬಂಧ ಮಂಡನೆ ಮಾಡಲಿದ್ದಾರೆ. ಸಮಾಜದಲ್ಲಿ ವಿವಿಧ ಕ್ಶೇತ್ರಗಳಲ್ಲಿ ಸೇವೆ ಮಾಡುವ ಗಣ್ಯರು ಪ್ರತಿಕ್ರಿಯೆ ನೀಡಲಿದ್ದಾರೆ.

ನವೆಂಬರ್ 10 ರಂದು ಬೆಳಿಗ್ಗೆ 11 ಗಂಟೆಗೆ ಹಳೆ ವಿದ್ಯಾರ್ಥಿಗಳ ಸಹಮಿಲನ  ಉಡುಪಿ ಧರ್ಮ ಪ್ರಾಂತ್ಯದ ಪ್ರಧಾನ ಗುರು  ಅತೀ  ವಂದನೀಯ ಬ್ಯಾಪ್ಟಿಸ್ಟ್ ಮಿನೇಜಸ್‍ರವರ ಅದ್ಯಕ್ಷತೆಯಲ್ಲಿ ನಡೆಯಲಿದೆ. ಉಡುಪಿ ಜಿಲ್ಲಾ ಪಂಚಾಯಾತ್ ಅಧ್ಯಕ್ಷರಾದ ಶ್ರೀ ದಿನಕರ ಬಾಬು, ಜಿಲ್ಲಾ ಪಂಚಾಯತ್ ಸದಶ್ಯರಾದ ವಿಲ್ಸನ್ ರೊಡ್ರಿಗಸ್ ಮೊದಲಾದ ಗಣ್ಯರು ಅಥಿತಿಗಳಾಗಿ ಬರಲಿದ್ದಾರೆ.

ಅಂದು 3 ಗಂಟೆಗೆ ಸಮಾರೋಪ ಕಾರ್ಯಕ್ರಮವು  ಉಡುಪಿಯ  ಬಿಷಪ್ ಜೆರಾಲ್ಡ್ ಐಸಾಕ್ ಲೋಬೊರವರ  ಅದ್ಯಕ್ಷತೆಯಲ್ಲಿ ನಡೆಯಲಿರುವುದು.  ಅತಿಥಿಗಳಾಗಿ ಸೋದೆ ಮಠದ ಶ್ರಿ ಶ್ರಿ ವಿಶ್ವವಲ್ಲಭ ತೀರ್ಥ ಸ್ವಾಮೀಜೀ, ಕಾಪು ಶಾಸಕರಾದ ವಿನಯಕುಮಾರ್ ಸೊರಕೆ, ಶಾಸಕರಾದ ಜೆ.ಆರ್.ಲೋಬೊ, ವಿಧಾನ ಸಭೆಯ ಮುಖ್ಯ ಸಚೇತರಾದ ಐವನ್ ಡಿ’ಸೋಜ, ಇಲಾಖೆಯ ನಿರ್ದೇಶಕರಾದ ಸಿದ್ದರಾಜು ಹಾಗೂ ಹಾಜಿ ಅಬ್ದುಲ್ ಜಲೀಲ್, ರೋಟರಿ ಕ್ಲಬ್ ನಿಯೋಜಿತ ಗವರ್ನರ್ ರೊಟೆರೀಯನ್ ಅಭಿನಂದನ್ ಶೆಟ್ಟಿ, ಕಥೊಲಿಕ್ ಸಭೆ ಮಂಗಳೂರು ಹಾಗೂ ಉಡುಪಿ ಇದರ ಅದ್ಯಕ್ಷರುಗಳಾದ ಅನಿಲ್ ಲೋಬೊ ಹಾಗೂ  ವಲೇರಿಯನ್  ಫೆರ್ನಾಂಡಿಸ್, ಅಧ್ಯಾತ್ಮಿಕ  ನಿರ್ದೇಶರುಗಳಾದ ವಂದನೀಯ ಫರ್ಡಿನಾಂಡ್ ಗೊನ್ಸಾಲ್ವಿಸ್ ಮತ್ತು ವಂದನೀಯ ಮ್ಯಾಥ್ಯೂ ವಾಸ್‍ರವರು ಆತಿಥಿಗಳಾಗಿ ಬಾಗವಹಿಸುವರು. ವಿಶೇಷ ಮಕ್ಕಳ ಸೇವೆಯಲ್ಲಿ ಸಾಧನೆಗೈದ ಸಿಸ್ಟರ್ ಮರಿಯ ಜ್ಯೋತಿ ಹಾಗೂ ಡಾ. ಪಿ. ವಿ. ಭಂಡಾರಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.

ನಂತರ ಬಲೆ ತೆಲಿಪಾಲೆ ಪಂಗಡ ಹಾಗೂ ಪ್ರತಿಷ್ಟಿತ ಕಲಾವಿದರಿಂದ ರಸಮಂಜರಿ ಮನೋರಂಜನ ಕಾರ್ಯಕ್ರಮ  ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷರಾದ ಎಲ್ರೋಯ್ ಕಿರಣ್ ಕ್ರಾಸ್ಟೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version