Home Mangalorean News Kannada News ನ.17: ಕರ್ನಾಟಕ ಸಂಘ ಶಾರ್ಜಾ ರಾಜ್ಯೋತ್ಸವ ಮಯೂರ ಪ್ರಶಸ್ತಿ ಪ್ರದಾನ

ನ.17: ಕರ್ನಾಟಕ ಸಂಘ ಶಾರ್ಜಾ ರಾಜ್ಯೋತ್ಸವ ಮಯೂರ ಪ್ರಶಸ್ತಿ ಪ್ರದಾನ

Spread the love

ನ.17: ಕರ್ನಾಟಕ ಸಂಘ ಶಾರ್ಜಾ ರಾಜ್ಯೋತ್ಸವ ಮಯೂರ ಪ್ರಶಸ್ತಿ ಪ್ರದಾನ 

ಶಾರ್ಜಾ: ಕರ್ನಾಟಕ ರಾಜ್ಯೋತ್ಸವ ಸಮಾರಂಭ ಕರ್ನಾಟಕ ಸಂಘ ಶಾರ್ಜಾ ತನ್ನ 15ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರಧಾನ ಸಮಾರಂಭ 2017 ನವೆಂಬರ್ 17ನೇ ತಾರೀಕು ಶುಕ್ರವಾರ ಸಂಜೆ 4.00 ಗಂಟೆಯಿಂದ ಶಾರ್ಜಾ ಇಂಡಿಯನ್ ಅಸೋಸಿಯೇಶನ್ ಬೃಹತ್ ಸಭಾಂಗಣದಲ್ಲಿ ಅಯೋಜಿಸಲಾಗಿದೆ.

“ಮಯೂರ ನಾಟ್ಯ ಮಂಜರಿ” ಯು.ಎ.ಇ. ಮಟ್ಟದ ಕನ್ನಡ ಸಮೂಹ ನೃತ್ಯ ಸ್ಪರ್ಧೆ
ಯು.ಎ.ಇ.ಯಲ್ಲಿ ಕಾರ್ಯಪ್ರವೃತ್ತವಾಗಿರುವ ಕರ್ನಾಟಕ ಪರ ಸಂಘಟನೆಗಳ ನೃತ್ಯ ತಂಡಗಳಿಗೆ ಯು.ಎ.ಇ. ಮಟ್ಟದಲ್ಲಿ ಕನ್ನಡ ಸಮೂಹ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ವಿಜಯಿತಂಡ “ಮಯೂರ ನಾಟ್ಯ ಮಂಜರಿ” ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳಲಿದೆ. ಸ್ಪರ್ಧೆಯಲ್ಲಿ ಕನ್ನಡ, ತುಳು, ಕೊಂಕಣಿ, ಕೊಡವ, ಬ್ಯಾರಿ ಭಾಷಿಗರು ಭಾಗವಹಿಸಲಿದ್ದು, ತಂಡದಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿ ಕನಿಷ್ಟ ಎಂಟು ಮಂದಿ ಗರಿಷ್ಠ ಹತ್ತು ಮಂದಿ ಭಾಗವಹಿಸಬಹುದಾಗಿದೆ. ಐದರಿಂದ ಏಳು ನಿಮಿಷದ ಅವಧಿಯ ಕನ್ನಡ ಸಮೂಹ ನೃತ್ಯಗಳಿಗೆ ಮಾತ್ರ ಅವಕಾಶವಿದ್ದು ಶಾಸ್ತ್ರೀಯ, ಅರೆಶಾಸ್ತ್ರೀಯ, ಜಾನಪದ, ಪಾಶ್ಚಾತ್ಯ, ಸಿನಿಮ್ಯಾಟಿಕ್ ಸಮೂಹ ನೃತ್ಯದ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

ಪ್ರತಿಷ್ಠಿತ “ಮಯೂರ ಪ್ರಶಸ್ತಿ” ಪ್ರಧಾನ ಸಮಾರಂಭ
ಅಹ್ವಾನಿತ ಅತಿಥಿಗಳು, ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಕರ್ನಾಟಕ ಸಂಘ ಶಾಜಾ ಪ್ರತಿವರ್ಷ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಸಾಧನೆ ಮಾಡಿರುವ ಕನ್ನಡಿಗರನ್ನು ಗುರುತಿಸಿ ನೀಡಲಾಗುತಿರುವ ಪ್ರತಿಷ್ಠಿತ “ಮಯೂರ ಪ್ರಶಸ್ತಿ” ಪ್ರಧಾನ ಸಮಾರಂಭ ಸಂಜೆ ನಡೆಯುವ ವರ್ಣರಂಜಿತ ಕಾರ್ಯಕ್ರಮದಲ್ಲಿ ನಡೆಯಲಿದೆ.

ಕಿರುಯಕ್ಷಗಾನ ಪ್ರದರ್ಶನ ಮತ್ತು ಹಾಸ್ಯ, ಪ್ರಹಸನಗಳೊಂದಿಗೆ ನಡೆಯಲಿರುª ಕನ್ನಡ ಹಬ್ಬಕ್ಕೆ ಸಮಸ್ಥ ಅನಿವಾಸಿ ಕನ್ನಡಿಗರಿಗೆ ಸರ್ವ ಸದಸ್ಯರ ಪರವಾಗಿ ಕರ್ನಾಟಕ ಸಂಘ ಶಾರ್ಜಾ ಅಧ್ಯಕ್ಷರಾದ ಸುಗಂಧರಾಜ್ ಬೇಕಲ್ ಆಹ್ವಾನಿಸಿದ್ದಾರೆ.


Spread the love

Exit mobile version