ನ.30: ಸಾಲಿಹಾತ್ ಕಾಲೇಜಿನಲ್ಲಿ ‘ಉಜ್ವಲ ಭವಿಷ್ಯದೆಡೆಗೆ’ ಸಾಮುದಾಯಿಕ ಸಮಾವೇಶ

Spread the love

ನ.30: ಸಾಲಿಹಾತ್ ಕಾಲೇಜಿನಲ್ಲಿ ‘ಉಜ್ವಲ ಭವಿಷ್ಯದೆಡೆಗೆ’ ಸಾಮುದಾಯಿಕ ಸಮಾವೇಶ

ಉಡುಪಿ: ಹೂಡೆ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧೀನ ಸಂಸ್ಥೆಯಾಗಿರುವ ಸಾಲಿಹಾತ್ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ ಮತ್ತು ‘ಉಜ್ವಲ ಭವಿಷ್ಯದೆಡೆಗೆ’ ಎಂಬ ಸಾಮುದಾಯಿಕ ಸಮಾವೇಶವನ್ನು ನ.30ರಂದು ಸಂಜೆ 6 ಗಂಟೆಗೆ ಹೂಡೆ ಸಾಲಿಹಾತ್ ಮೈದಾನದಲ್ಲಿ ಆಯೋಜಿಸಲಾಗಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಇದ್ರೀಸ್ ಹೂಡೆ, ಕಾಲೇಜಿನ ನೂತನ ಕಟ್ಟಡವನ್ನು ಜಮಾಅತೆ ಇಸ್ಲಾಮಿ ಹಿಂದ್ ಇದರ ಅಖಿಲ ಭಾರತ ಅಧ್ಯಕ್ಷ ಸೈಯದ್ ಸಾದತುಲ್ಲಾ ಹುಸೈನಿ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯೀಲ್ ಸಾಹೇಬ್ ವಹಿಸಲಿರುವರು ಎಂದರು.

ಕಾಲೇಜು ಕಟ್ಟಡದ ಉದ್ಘಾಟನಾ ಕಾರ್ಯಕ್ರಮದ ನಂತರ ವೈವಿಧ್ಯಮಯ, ಸೌಹಾರ್ದಯುತ, ಶಾಂತಿ ಮತ್ತು ಪ್ರಗತಿಯ ಭಾರತಕ್ಕಾಗಿ ವಿಶ್ವಾಸ, ಪರಸ್ಪರ ನಂಬಿಕೆಯ ಹಾಗೂ ಮೌಲ್ಯಗಳಿಂದ ಸಂಪನ್ನ ವಿಶಾಲ ದೃಷ್ಟಿಕೋನದ ಬೆಳೆಸುವ ಮೂಲಕ ಸಾಮಾಜಿಕ ಪರಿವರ್ತನೆಯತ್ತ ಸಾಗುವ ಉದ್ದೇಶದಿಂದ ಈ ಸಾಮುದಾಯಿಕ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಜಮಾಅತೆ ಇಸ್ಲಾಮಿ ಹಿಂದ್ ಇದರ ಅಖಿಲ ಭಾರತ ಅಧ್ಯಕ್ಷ ಸೈಯದ್ ಸದಾತುಲ್ಲಾ ಹುಸೈನಿ, ಜಮಾಅತೆ ಇಸ್ಲಾಮಿ ಹಿಂದ್ನ ಅಖಿಲ ಭಾರತ ಉಪಾಧ್ಯಕ್ಷ ಮಲಿಕ್ ಮೊಹ್ತಸೀಮ್ ಖಾನ್, ಎಸ್ಐಓ ರಾಷ್ಟ್ರೀಯ ಅಧ್ಯಕ್ಷರಾದ ಸಹೋದರ ರಮೀಝ್ ಇ.ಕೆ., ಜಮಾಅತೆ ಇಸ್ಲಾಮಿ ಹಿಂದ್ನ ರಾಜ್ಯ ಅಧ್ಯಕ್ಷ ಡಾ.ಬೆಳಗಾಮಿ ಮುಹಮ್ಮದ್ ಸಾದ್, ಎಸ್ಐಓ ರಾಜ್ಯ ಅಧ್ಯಕ್ಷ ಝೀಶಾನ್ ಅಖಿಲ್ ಸಿದ್ದೀಕಿ, ಶಾಂತಿ ಪ್ರಕಾಶನದ ನಿರ್ದೇಶಕ ಮುಹಮ್ಮದ್ ಕುಂಞಿ, ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯೀಲ್ ಸಾಹೇಬ್ ಭಾಗವಹಿಸಲಿರುವರು ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಮುಹಮ್ಮದ್ ಅಸ್ಲಮ್ ಹೈಕಾಡಿ, ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ವರ್ತುಲ ಅಧ್ಯಕ್ಷ ನಿಸಾರ್ ಅಹ್ಮದ್ ಉಪ್ಪಿನಕೋಟೆ, ಕಾಪು ವರ್ತುಲ ಅಧ್ಯಕ್ಷ ಅನ್ವರ್ ಅಲಿ ಕಾಪು, ಎಸ್ಐಓ ಜಿಲ್ಲಾ ಕಾರ್ಯದರ್ಶಿ ಸಮೀರ್ ತೀರ್ಥಹಳ್ಳಿ ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments