ಪಂಚರಾಜ್ಯ ಚುನಾವಣಾ ಫಲಿತಾಂಶ; ಮೋದಿ, ಶಾ ವರ್ಚಸ್ಸು ಕುಗ್ಗಿರುವುದಕ್ಕೆ ಸಾಕ್ಷಿ- ವಿಘ್ನೇಶ್ ಕಿಣಿ
ಕಾರ್ಕಳ: ಪಂಚರಾಜ್ಯ ಚುನಾವಣೆ ಫಲಿತಾಂಶ ಮೋದಿ ಹಾಗೂ ಶಾ ಜೋಡಿಯ ವರ್ಚಸ್ಸು ಕುಗ್ಗುತ್ತಿರುವುದಕ್ಕೆ ಸಾಕ್ಷಿಯಾಗಿದೆ ಹಾಗೂ ದೇಶದಲ್ಲಿ ಬದಲಾವಣೆಯ ಪರ್ವದ ಸಂಕೇತವಾಗಿದೆ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಕೆ. ವಿಘ್ನೇಶ್ ಕಿಣಿ ಹೇಳಿದ್ದಾರೆ.
ಪಂಚರಾಜ್ಯ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿರುವ ಅವರು ರಾಜಸ್ಥಾನದಲ್ಲಿ ಸುಮಾರು 100 ಶಾಸಕರನ್ನು ಕಳೆದುಕೊಂಡಿರುವ ಬಿಜೆಪಿ , ಮಧ್ಯಪ್ರದೇಶದಲ್ಲಿ ಸುಮಾರು 60 ಕ್ಕೂ ಹೆಚ್ಚು ಶಾಸಕರನ್ನು ಕಳೆದುಕೊಂಡಿದೆ ಮತ್ತು ಛತ್ತೀಸ್ಗಡದಲ್ಲಿ ಯಾವುದೇ ಬಿಜೆಪಿಯ ಶಾಸಕ 10,000 ಕ್ಕೂ ಅಧಿಕ ಅಂತರದ ಗೆಲುವು ತುಲುಪದೇ ಇರುವಂತಹದ್ದು , ಇವೆಲ್ಲವನ್ನು ನೋಡಿದರೆ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ರಾಹುಲ್ ಗಾಂಧಿಯ ನಾಯಕತ್ವಕ್ಕೆ ದೊರೆತ ಮನ್ನಣೆಯಾಗಿದೆ ಎಂದು ಹೇಳಬಹುದು.
ದೇಶದ ಸಾಮಾನ್ಯ ಜನರ ಸಮಸ್ಯೆಯನ್ನು ಮುಕ್ತ ಮಾಡುವಲ್ಲಿ ಗಮನ ಹರಿಸದೆ ಕಾಂಗ್ರೆಸ್ ಮುಕ್ತ ಮಾಡಲು ಹೊರಟ ಬಿಜೆಪಿಗೆ ಪಂಚರಾಜ್ಯದ ಮತದಾರರು ಸೂಕ್ತ ಉತ್ತರ ನೀಡಿದ್ದಾರೆ.
ದೇಶದಲ್ಲಿನ ಉನ್ನತ ತನಿಖಾ ಸಂಸ್ಥೆಗಳನ್ನು ದುರುಪಯೋಗ ಗೊಳಿಸಿ ದ್ವೇಷದ ರಾಜಕಾರಣ ಮಾಡುತ್ತಿದ್ದ ಕೇಂದ್ರ ಸರ್ಕಾರಕ್ಕೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೂಕ್ತ ಬೆಲೆ ತೆತ್ತಬೇಕಾದ ವಾತಾವರಣ ನಿರ್ಮಾಣವಾಗಿದೆ ,ಇದು ಭಾರತೀಯ ಜನತಾ ಪಕ್ಷಕ್ಕೆ ಎಚ್ಚರಿಕೆಯ ಗಂಟೆ ಎಂದು ಹೇಳಬಹುದು.
ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಹಾಗೂ ನಾಯಕತ್ವಕ್ಕೆ ಬೆಲೆ ಕೊಟ್ಟು ಮುಂಬುರುವ ಲೋಕಸಭಾ ಚುನಾವಣಾಗೆ ಆತ್ಮವಿಶ್ವಾಸ ಹಾಗು ನೈತಿಕ ಸ್ಥೈರ್ಯ ತುಂಬುವಂತೆ ಮತದಾನ ಮಾಡಿದ ಪಂಚ ರಾಜ್ಯದ ಜನತೆಗೆ ಹಾಗು ಎಲ್ಲಾ ಕಾಂಗ್ರೆಸ್ ನ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.