Home Mangalorean News Kannada News ಪಂಪು ಸೆಟ್ಟಿನ ಪುಟ್ಬಾಲ್ವ್ ದುರುಸ್ತಿಗಿಳಿದ ಮಾವ, ಅಳಿಯ ನೀರು ಪಾಲು

ಪಂಪು ಸೆಟ್ಟಿನ ಪುಟ್ಬಾಲ್ವ್ ದುರುಸ್ತಿಗಿಳಿದ ಮಾವ, ಅಳಿಯ ನೀರು ಪಾಲು

Spread the love

ಪಂಪು ಸೆಟ್ಟಿನ ಪುಟ್ಬಾಲ್ವ್ ದುರುಸ್ತಿಗಿಳಿದ ಮಾವ, ಅಳಿಯ ನೀರು ಪಾಲು

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ಸಮೀಪ ಶುಕ್ರವಾರ ಸಂಜೆ ನಡೆದ ದುರಂತದಲ್ಲಿ ಹೊಳೆಗೆ ಅಳವಡಿಸಿದ ನೀರಾವರಿ ಪಂಪ್ ಸೆಟ್ ನ ಫುಟ್ವಾಲ್ವ್ ದುರಸ್ತಿಗೆಂದು ನೀರಿಗಿಳಿದ ಮಾವ ಮತ್ತು ಅಳಿಯ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಏನೆಕಲ್ ಎಂಬಲ್ಲಿ ಘಟನೆ ಸಂಭವಿಸಿದೆ. ನಡೆದಿದೆ.

ಬಾನಡ್ಕ ನಿವಾಸಿಗಳಾದ‌ ಆನಂದ(65) ಮತ್ತು ಅವರ ಮಗಳ ಗಂಡ ಸುನಿಲ್ ಮೃತಪಟ್ಟವರು.

ಅಳಿಯ ಸುನಿಲ್  ಬೆಂಗಳೂರಿನಲ್ಲಿದ್ದು, ಮಾವನ ಮನೆಗೆ ಬಂದಿದ್ದರು. ಮಾವ, ಅಳಿಯ ಇಬ್ಬರೂ ಸಂಜೆ ತಮ್ಮ ಮನೆಯ ಸಮೀಪದ ಏನೆಕಲ್ ಹೊಳೆಗೆ ಅಳವಡಿಸಿದ ನೀರಾವರಿ ಪಂಪ್ ಸೆಟ್ ನ ಫುಟ್ವಾಲ್ವ್ ದುರಸ್ತಿಗೆಂದು ನೀರಿಗಿಳಿದಿದ್ದರು.
ಈ ವೇಳೆ ಸುನಿಲ್ ಕಾಲು ಜಾರಿ ನೀರಿಗೆ ಬಿದ್ದಿದ್ದು, ಅವರನ್ನು ರಕ್ಷಿಸಲು ಮಾವ ಧಾವಿಸಿದ ಸಂದಭ೯ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ.
ಮೃತದೇಹಗಳನ್ನು ಹೊಳೆಯಿಂದ ಮೇಲೆತ್ತಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.


Spread the love

Exit mobile version