ಪಂಪ್ವೆಲ್ ಪ್ಲೈ ಓವರ್ ಕಳಪೆ ಕಾಮಗಾರಿ ತನಿಖೆ ನಡೆಸಿ – ಐವನ್ ಡಿಸೋಜಾ
ಮಂಗಳೂರು: ಪಂಪ್ವೆಲ್ ಫ್ಲೈ ಓವರ್ ಕಳಪೆ ಕಾಮಗಾರಿಯ ವಿರುದ್ದ ತನಿಖೆ ನಡೆಸುವುದರೊಂದಿಗೆ ಗುತ್ತಿಗೆದಾರರಿಗೆ ಹಣ ಪಾವತಿಸದಂತೆ ಲೋಕೋಪಯೋಗಿ ಇಲಾಖೆಗೆ ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿ ಸೋಜಾ ರವರು ದೂರು ನೀಡಿದ್ದಾರೆ.
ಸಂಸದ ಸದಸ್ಯರು, ಬಿಜೆಪಿ ಶಾಸಕರುಗಳು ಈ ಕಾಮಗಾರಿ ಬಗ್ಗೆ ಬಹಳ ಸಂಭ್ರಮ ಆಚರಿಸಿದರು. 10 ವಷ೯ಗಳ ಕಾಲ ತೆಗೆದು ಕೊಂಡ ಈ ಕಾಮಗಾರಿಗೆ ತಗಲಿದ ವೆಚ್ಚ ಪಾವತಿ ಮಾಡಿದ ಹಣ ಮತ್ತು ಈ ಕಳಪೆ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಕೂಡಲೇ ತನಿಖೆ ಆದೇಶಿಸಬೇಕೆಂದು ಲೋಕೋಪಯೋಗಿ ಇಲಾಖೆ ಮತ್ತು ಕೇಂದ್ರ ಹೆದ್ದಾರಿ ಇಲಾಖೆಗೆ ಆಗ್ರಹಿಸಿದರು
ಈ ಕಾಮಗಾರಿಯಲ್ಲಿ ಸರಕಾರಿ ಹಣ ಪೋಲು ಮಾಡಲಾಗಿದೆ. ಕಾಮಗಾರಿ ನಡೆಯುವಾಗ ಕೇಂದ್ರ ಮತ್ತು ರಾಜ್ಯದ ಲೋಕೋಪಯೋಗಿ ಇಲಾಖೆಗಳು ಸರಿಯಾಗಿ ಕತ೯ವ್ಯ ನಿವ೯ಹಣೆ ಮಾಡಿಲ್ಲ. 10 ವಷ೯ಗಳಿಂದ ಈ ಕಾಮಗಾರಿ ನೆನೆಗುದಿಗೆ ಬಿದ್ದು, ಈ ಕಾಮಗಾರಿಯಿಂದ ಸರಕಾರಕ್ಕೆ ಮತ್ತು ಇಲಾಖೆಗೆ ತುಂಬಾ ನಷ್ಟ ಉಂಟಾಗಿದೆ. ಈ ಜವಾಬ್ದಾರಿಯನ್ನು ನಮ್ಮ ಲೋಕಸಭಾ ಸದಸ್ಯರು ವಹಿಸಿಕೊಳ್ಳಬೇಕು ಮತ್ತು ಈ ಬಗ್ಗೆ ತನಿಖೆ ನಡೆಸಿ, ಕೂಡಲೇ ವರದಿ ಮಾಡಬೇಕು ಇಲ್ಲದಿದ್ದರೆ ಈ ಕಳಪೆ ಕಾಮಗಾರಿಗೆ ಲೋಕಸಭಾ ಸದಸ್ಯರೇ ಕಾರಣ ಕತ೯ರಾಗುತ್ತಾರೆ ಹೇಳಿದ್ದಾರೆ.
ಈ ಕಾಮಗಾರಿ ಬಗ್ಗೆ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಬೇಕು. ಕಳಪೆ ಕಾಮಗಾರಿ ನಡೆದ ಸ್ಥಳವು ತೀರಾ ಅಪಯಕಾರಿ ಅಂಚಿನಲ್ಲಿದ್ದು, ಈ ಬಗ್ಗೆ ಸುರಕ್ಷತಾ ದೃಷ್ಟಿಯಿಂದ ವಾಹನ ಸಂಚಾರಕ್ಕೆ ಅಪಾಯ ಇರುವುದರಿಂದ ಇಲಾಖೆ ಕೂಡಲೇ ತಾಂತ್ರಿಕ ವರದಿಯನ್ನು ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಯವರಿಗೆ ಐವನ್ ಡಿ ಸೋಜಾ ರವರು ವಿನಂತಿಸಿದ್ದಾರೆ. .
ಈ ವೀಕ್ಷಣೆ ಸಂದಭ೯ದಲ್ಲಿ ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿ ಸೋಜಾ ರವರ ಜೊತೆ ಅಶಿತ್ ಪಿರೇರಾ, ಜೇಮ್ಸ್ ಪ್ರವೀಣ್, ಭಾಸ್ಕರ್ ರಾವ್, ಗುರುರಾಜ್, ರಘುರಾಜ್, ಶ್ರೀಧರ ಶೆಟ್ಟಿ ಕಡೇಕರ್ , ಹಬಿಬುಲ್ಲ, ಬಾಜಿಲ್ , ಮುಂತಾದವರು ಉಪಸ್ಥಿತರಿದ್ದರು.