Home Mangalorean News Kannada News ಪಂಪ್ ವೆಲ್ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಪಂಪ್ ವೆಲ್ ಅಪರಿಚಿತ ವ್ಯಕ್ತಿಯ ಶವ ಪತ್ತೆ

Spread the love

ಪಂಪ್ ವೆಲ್ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಮಂಗಳೂರು: ನಗರದ ಪಂಪುವೆಲ್ ಬಳಿಯ ದೀಪಕ್ ಎಲೆಕ್ಟ್ರಾನಿಕ್ ಅಂಗಡಿ ಮುಂದೆ ಜಗಲಿಯಲ್ಲಿ ಒರ್ವ ವ್ಯಕ್ತಿ ಮಲಗಿದಲ್ಲಿಯೇ ಮೃತಪಟ್ಟಿದ್ದು ಅವರ ವಿಳಾಸ ಪತ್ತೆಗೆ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.

ಮೃತ ವ್ಯಕ್ತಿ 35-40 ವರ್ಷದವನಾಗಿದ್ದು ಬಿಳಿ ಮೈಬಣ್ಣ ಹೊಂದಿದ್ದಾನೆ. ಅಂದಾಜು 5.5 ಅಡಿ ಎತ್ತರವಿದ್ದು ಬೂದು ಬಣ್ಣದ ರೌಡ್ ಕಾಲರಿನ ತುಂಬು ತೋಳಿನ ಟೀಶರ್ಟ್ ಧರಿಸಿದ್ದು, ಶರ್ಟಿನ ತೋಳು ಕಪ್ಪು ಬಣ್ಣದ್ದಾಗಿರುತ್ತದೆ. ಕಪ್ಪು ಬಣ್ಣದ ಟ್ರಾಕ್ ಪ್ಯಾಂಟ್ ಕೇಸರಿ ಸೈಡ್ ಪಟ್ಟಿ ಇರುತ್ತದೆ. ಮೃತನ ಎಡ ಕೈ ಮುಂಗೈಯಲ್ಲಿ ನಾಗನ ಚಿತ್ರವಿರುವ ಹಚ್ಚೆ, ಇಂಗ್ಲಿಷ್ ನಲ್ಲಿ ಆಟಿನ್ ಚಿಹ್ನೆಯ ಒಳಗಡೆ ಇಂಗ್ಲಿಷ್ ಅಕ್ಷರದಲ್ಲಿ V.P ಎಂದು ಬರೆದಿರುವುದು ಕಂಡು ಬರುತ್ತದೆ. ಅಲ್ಲದೆ ಎದೆಯ ಎಡ ಭಾಗದಲ್ಲಿ ಪುಟ್ಟಿ ಎಂದು ಬರೆದಿರುವ ಹಚ್ಚೆ ಇರುತ್ತದೆ. ಕಿವಿಯಲ್ಲಿ ಒಂದು ಟಿಕ್ಕಿ ಇರುತ್ತದೆ. ಮೃತಹೇಹವನ್ನು ವೆನ್ಲಾಕ್ ಶವಗಾರದಲ್ಲಿ ಇರಿಸಲಾಗಿದೆ.

ಈ ಚಹರೆಯನ್ನು ಹೋಲುವ ವ್ಯಕ್ತಿಯ ಬಗ್ಗೆ ಮಾಹಿತಿ ಇದಲ್ಲಿ ಕಂಕನಾಡಿ ನಗರ ಠಾಣೆಗೆ (9480805354, 0824-2220529) ಅಥವಾ ಕಂಟ್ರೋಲ್ ರೂಮ್ (0824-222800) ಕರೆ ಮಾಡಿ ತಿಳಿಸಲು ಕೋರಿದೆ


Spread the love

Exit mobile version