Home Mangalorean News Kannada News ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು – ಶಾಸಕ ವಿನಯ್ ಕುಮಾರ್ ಸೊರಕೆ

ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು – ಶಾಸಕ ವಿನಯ್ ಕುಮಾರ್ ಸೊರಕೆ

Spread the love

ಪಕ್ಷ  ಸಂಘಟನೆಗೆ  ಹೆಚ್ಚಿನ ಒತ್ತು  – ಶಾಸಕ ವಿನಯ್ ಕುಮಾರ್ ಸೊರಕೆ

ಕಾಪು : ಪಕ್ಷ  ಸಂಘಟನೆಯನ್ನು  ಬಲಪಡಿಸುವ ನಿಟ್ಟಿನಲ್ಲಿ  80ಬಡಗುಬೆಟ್ಟು  ಗ್ರಾಮೀಣ ಕಾಂಗ್ರೆಸ್ ಸಮಿತಿಯ ಸಭೆಯನ್ನು ಶರತ್ ಶೆಟ್ಟಿಯವರ ಮನೆಯಲ್ಲಿ ನಡೆಸಲಾಯಿತು.

 ಈ ಸಂದರ್ಭದಲ್ಲಿ ಮಾಜಿ ಸಚಿವರು ಮತ್ತು  ಕಾಪು ಕ್ಷೇತ್ರದ ಶಾಸಕ  ವಿನಯ್ ಕುಮಾರ್ ಸೊರಕೆಯವರು  ಮಾತನಾಡುತ್ತ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದ  ನಂತರದಲ್ಲಿ ಬಹಳಷ್ಟು ಬಡ  ಜನರಿಗೆ ಎಷ್ಟೋ ವರ್ಷಗಳಿಂದ  ಆಗದಂತಹ  ಕೆಲಸಗಳನ್ನು  ಮಾಡಿದೆ ಅನ್ನಭಾಗ್ಯ, ಕ್ಷೀರಭಾಗ್ಯ,ಅಕ್ರಮ-ಸಕ್ರಮ  ಕಾನೂನುಗಳನ್ನು ತಂದು  ಪ್ರತಿಯೊಬ್ಬ  ನಾಗರೀಕರಿಗೂ  ಸಹಾಯವಾಗುವಂತಹ ಕೆಲಸವನ್ನು  ಮಾಡಿರುತ್ತದೆ ಹಾಗೂ ಕಾಪು ಕ್ಷೇತ್ರದಲ್ಲಿ ಬಹಳಷ್ಟು  ಅಭಿವೃದ್ಧಿಯ ಕೆಲಸವನ್ನು ಮಾಡುವಂತಾಗಿದೆ  . 80 ಬಡಗುಬೆಟ್ಟು ಗ್ರಾಮ ಪಂಚಾಯತ್  ವ್ಯಾಪ್ತಿಯಲ್ಲಿ ಸುಮಾರು 5.ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ನಡೆಸಲಾಗುತ್ತಿದೆ.ಹಾಗೂ ಇನ್ನೂ ಕೂಡ ಬಹಳಷ್ಟು ಪ್ರಸ್ತಾವನೆಗಳು  ಬಾಕಿ  ಇದ್ದು  ಅದನ್ನು  ತ್ವರಿತ ಗತಿಯಲ್ಲಿ  ಅನುಷ್ಠಾನಗೊಳಿಸುವರೇ ಪ್ರಯತ್ನಿಸುತ್ತೇನೆ ಎಂದು  ಹೇಳಿದರು.

sorake-congress-party-meeting

ಈ ಸಂದರ್ಭದಲ್ಲಿ  ಮಹಾಬಲ ಕುಂದರ್ ಮಾಜಿ ಅಧ್ಯಕ್ಷರು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ,  ಸುಧೀರ್ ಹೆಗ್ಡೆ  ಅಧ್ಯಕ್ಷರು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಸಮಿತಿ, ಪ್ರಭಾಕರ ಶೆಟ್ಟಿ  ಅಧ್ಯಕ್ಷರು,80ಬಡಗುಬೆಟ್ಟು  ಗ್ರಾಮೀಣ ಕಾಂಗ್ರೆಸ್ ಸಮಿತಿಯ  , ಚಂದ್ರಿಕಾಕೇಲ್ಕರ್ ಜಿಲ್ಲಾ  ಪಂಚಾಯತ್ ಸದಸ್ಯೆ, ಲಕ್ಷ್ಮೀನಾರಾಯಣ ಪ್ರಭು, ಸಂಧ್ಯಾ ಶೆಟ್ಟಿ  ತಾಲ್ಲೂಕು ಪಂಚಾಯತ್ ಸದಸ್ಯರು, ವಸಂತ್ ಕುಮಾರ್, ಸುಶೀಲಾ ಪೂಜಾರಿ, ರತ್ನ ,ನಿರ್ಮಲ ಶೆಟ್ಟಿಗಾರ್  ಗ್ರಾಮ ಪಂಚಾಯತ್  ಸದಸ್ಯರು , ಕುಸುಮ  ಕುಂದರ್  ಅಧ್ಯಕ್ಷರು 80ಬಡಗುಬೆಟ್ಟು ಮಹಿಳಾ ಬೂತ್    ಗ್ರಾಮೀಣ ಕಾಂಗ್ರೆಸ್ ಸಮಿತಿ,ಹರಿಯಪ್ಪ  ನಾಯಕ್,  ಹರಿದಾಸ್ ,ರಾಜು  ಪೂಜಾರಿ, ರಮೇಶ್ ಪೂಜಾರಿ, ಸಬಿತಾ  ಶೆಟ್ಟಿ,  ವಿನೋದ್ ಕುಮಾರ್ ಹಿರಿಯಡಕ,  ಸುಧಾಕರ್  ಅಮೀನ್, ಶೀನಾ ಪೂಜಾರಿ, ಶರತ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು ಶ್ರೀಧರ್ ಶೆಟ್ಟಿ ಬೈರಂಪಳ್ಳಿ  ಅಕ್ರಮ-ಸಕ್ರಮ ಸಮಿತಿಯ  ಸದಸ್ಯರು ಇವರು  ಕಾರ್ಯಕ್ರಮವನ್ನು  ನಿರೂಪಿಸಿದರು.

 


Spread the love

Exit mobile version