Home Mangalorean News Kannada News ಪಡುಬಿದ್ರಿ : ಸೀಲ್ ಡೌನ್ ನಿಯಮ ಉಲ್ಲಂಘನೆ ; ಗುಜರಾತ್ ಮೂಲದ ಕಂಪೆನಿ ವಿರುದ್ಧ ಪ್ರಕರಣ...

ಪಡುಬಿದ್ರಿ : ಸೀಲ್ ಡೌನ್ ನಿಯಮ ಉಲ್ಲಂಘನೆ ; ಗುಜರಾತ್ ಮೂಲದ ಕಂಪೆನಿ ವಿರುದ್ಧ ಪ್ರಕರಣ ದಾಖಲು

Spread the love

ಪಡುಬಿದ್ರಿ : ಸೀಲ್ ಡೌನ್ ನಿಯಮ ಉಲ್ಲಂಘನೆ ; ಗುಜರಾತ್ ಮೂಲದ ಕಂಪೆನಿ ವಿರುದ್ಧ ಪ್ರಕರಣ ದಾಖಲು

ಪಡುಬಿದ್ರಿ : ಕೋವಿಡ್-19 ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸದೆ, ಸೀಲ್ಡೌನ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಇನ್ನಾ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುಜರಾತಿ ಮೂಲದ ಕಂಪೆನಿಯೊಂದರ 13 ಮಂದಿ ವಿರುದ್ಧ ಶನಿವಾರ ಪಡುಬಿದ್ರಿ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.

ಕಾರ್ಕಳ ತಾಲೂಕಿನ ಇನ್ನಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಜರಕಟ್ಟೆಯಲ್ಲಿ ಹೊರದೇಶಗಳಿಗೆ ರಫ್ತಾಗುವ ಪ್ಲಾಸ್ಟಿಖ್ ಬ್ಯಾಗ್ಗಳನ್ನು ತಯಾರಿಸುವ ಬ್ರೈಟ್ ಪ್ಲೆಕ್ಸ್ ಇಂಟರ್ ನ್ಯಾಷನಲ್ ಎಂಬ ಕಂಪೆನಿಯ ಕೆಲ ನೌಕರರಿಗೆ ಕೋವಿಡ್ ಸೋಂಕು ದೃಢಪಟ್ಟ ಕಾರಣ ಕಂಪೆನಿಯನ್ನು ಜು. 21 ರಂದು ಸೀಲ್ಡೌನ್ ಮಾಡಲಾಗಿತ್ತು. ಆದರೆ ಕಂಪೆನಿಯ ಕೆಲವರು ಸೀಲ್ಡೌನ್ ನಿಯಮಗಳನ್ನು ಉಲ್ಲಂಘಿಸಿ ಬೇರೆಡೆ ತೆರಳಲು ಆಸ್ಪದ ನೀಡಿದ ಬಗ್ಗೆ ಇನ್ನ ಗ್ರಾಮ ಪಂಚಾಯಿತಿಗೆ ಬಂದ ದೂರಿನಂತೆ 24ರಂದು ಕಂಪೆನಿಗೆ ನೋಟಿಸ್ ನೀಡಲಾಗಿತ್ತು. ಅದೇ ದಿನ ಕೆಲವು ಕಾರ್ಮಿಕರನ್ನು ಕೋವಿಡ್ -19 ಪರೀಕ್ಷೆಗೂ ಒಳಪಡಿಸಲಾಗಿದ್ದು, 36 ಮಂದಿಗೆ ಸೋಂಕು ದೃಢಪಟ್ಟಿತ್ತು.

ನಿಯಮ ಉಲ್ಲಂಘಿಸಿ ಸೋಂಕು ಹರಡಲು ಕಂಪೆನಿಯ ಎ.ಕೆ ಬನ್ಸಾಲ್, ಅಂಕಿತ್ಕುಮಾರ್ ಬನ್ಸಾಲ್, ಅಭಿನವ್ ಕುಮಾರ್ ಬನ್ಸಾಲ್, ಮಹೇಂದ್ರ ಗಾಂಧಿ, ಟಿ.ಎ ಸ್ ಗುಪ್ತ, ಗಣೇಶ್ ಪೈ, ಅನಿಲ್ ಪಾಲನ್, ದುದೆರ್ ಶರ್, ಮುನ್ನಕುಮಾರ್, ಪ್ರತಾಪ್ ನ್ಯಾಯ್ಕ್, ಸಚಿನ್ ಕುಮಾರ, ಸಿಕಂದರ್ ರಾಯ್, ಬಬನ್ ನ್ಯಾಯ್ಕಾ ಕಾರಣವಾಗಿದ್ದಾರೆ ಎಂದು ಆರೋಪಿಸಿ ಕಾರ್ಕಳ ತಾಲೂಕು ಗ್ರಾಮೀಣ ಕೋವಿಡ್-19 ಜಾಗೃತ ದಳ ಅಧಿಕಾರಿ ಡಾ.ಹೆಚ್. ಸುಬ್ರಮಣ್ಯ ಪ್ರಸಾದ್ ಇಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಅದರಲ್ಲೂ ದುದೆರ್ಶರ್, ಮುನ್ನಕುಮಾರ್, ಪ್ರತಾಪ್ ನ್ಯಾಯ್ಕ್, ಸಚಿನ್ ಕುಮಾರ, ಶಿಕಂದರ್ ರಾಯ್, ಬಬ್ಬನ್ ನ್ಯಾಯ್ಕ್ ಕಂಪೆನಿ ಆವರಣದಿಂದ ನಾಪತ್ತೆಯಾಗಿದ್ದು ಅವರೆಲ್ಲರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.


Spread the love

Exit mobile version