ಪಡುಬಿದ್ರೆಯ ಪಿ.ಎ.ಮೊಯ್ದಿನ್ ಅವರಿಗೆ ಬಿಎಸ್ಎಫ್ ಸಹಾಯಕ ಕಮಾಂಡೆಂಟ್ ಆಗಿ ಭಡ್ತಿ
ಪಡುಬಿದ್ರೆ: ಬಿಎಸ್ಎಫ್ ಪಡೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ಪಡುಬಿದ್ರೆಯ ಪಿ.ಎ.ಮೊಯ್ದಿನ್ ಅವರು ಸಹಾಯಕ ಕಮಾಂಡೆಂಟ್ ಭಡ್ತಿ ಹೊಂದಿದ್ದಾರೆ.
ಪಿ ಎ ಮೊಯ್ದಿನ್ ಮೂಲತಃ ಉಡುಪಿ ಜಿಲ್ಲೆಯ ಪಡುಬಿದ್ರೆಯವರಾಗಿದ್ದು, ಅರಬಿ ಅಬ್ದುಲ್ ಖಾದರ್ ಮತ್ತು ಆಯೇಶಾ ದಂಪತಿಗಳ ಸುಪತ್ರರಾಗಿದ್ದಾರೆ. ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನುಉರ್ದು ಶಾಲೆಯಲ್ಲಿ ಮುಗಿಸಿ, ಪಡುಬಿದ್ರೆ ಸರಕಾರಿ ಫಿಶರಿಸ್ ಕಾಲೇಜಿನಲ್ಲಿ, ಮತ್ತು ವಿಜಯ ಕಾಲೇಜು ಮೂಲ್ಕಿಯಲ್ಲಿ ಪಿಯುಸಿ ಮತ್ತು ಡಿ್ಗ್ರಿ ಪದವಿಯನ್ನು ಹೊಂದಿದರು.
ಖಾಸಗಿ ಕಂಪೆನಿಯೊಂದರಲ್ಲಿ ತನ್ನ ವೃತ್ತಿ ಜೀವನವನ್ನು ಚಿಕ್ಕಮಗಳೂರಿನಲ್ಲಿ ಆರಂಭಿಸಿದ ಮೊಯ್ದಿನ್ ಅವರು ಬಳಿಕ ಬಿ ಕಾಮ್ ಪದವಿಯನ್ನು ಪಡೆದರು. ದೇಶಕ್ಕಾಗಿ ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಎಂಬ ಮಹದಾಶೆಯನ್ನು ಹೊಂದಿದ್ದ ಅವರು ಬಿಎಸ್ ಎಫ್ ನಲ್ಲಿ ಸಹಾಯಕ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಪತ್ರಿಕೆಯೊಂದರಲ್ಲಿ ಬಂದ ಜಾಹೀರಾತನ್ನು ನೋಡಿ ಅರ್ಜಿ ಸಲ್ಲಿಸಿದರು. ಅದರಂತೆ ಅವರಿಗೆ ಸಂದರ್ಶನಕ್ಕಾಗಿ ಬೆಂಗಳೂರಿನಿಂದ ಕರೆ ಬಂದಿದ್ದು ಎಲ್ಲಾ ರೀತಿಯ ಪರೀಕ್ಷಗಳನ್ನು ಉತ್ತೀರ್ಣಗೊಂಡು ಬಿಎಸ್ ಎಫ್ ಸೇವೆಗೆ ಆಯ್ಕೆಯಾದರು.
ಮೊದಲು ಅವರಿಗೆ ರಾಜಸ್ಥಾನದಲ್ಲಿ ಸೇವೆಗೆ ನಿಯೋಜಿಸಿದ್ದು, ಅಲ್ಲಿಯ ಜೋಧ್ಪುರದಲ್ಲಿ ತರಬೇತಿಯನ್ನು ಪೋರೈಸಿ ಬಿಎಸ್ ಎಫ್ ನ ಮುಖ್ಯ ಕಚೇರಿಗೆ ನಿಯೋಜಿಲಾಯಿತು. ಅಲ್ಲಿಯೇ ಸುಮಾರು 30 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸರು.
ಸುಮಾರು 30 ವರ್ಷಗಳಿಂದ ಅಸ್ಸಾಂ, ಕಾಶ್ಮೀರ, ಪಂಜಾಬ್, ದಿಲ್ಲಿ, ಗುವಾಹಟಿ ಮುಂತಾದೆಡೆಗಳಲ್ಲಿ ಸೇವೆ ಸಲ್ಲಿಸಿರುವ ಪಿ.ಎ.ಮೊಯ್ದಿನ್ ಅವರು ಸಹಾಯಕ ಕಮಾಂಡೆಂಟ್ ಆಯ್ಕೆ ಭಡ್ತಿ ಹೊಂದಿ ಬೆಂಗಳೂರಿಗೆ ವರ್ಗಾವಣೆಯಾಗಿದ್ದಾರೆ.