ಪಣಂಬೂರು ಕೋಸ್ಟ್ ಗಾರ್ಡ್ ಅಧಿಕಾರಿ ಪುತ್ರ ನಾಪತ್ತೆ
ಮಂಗಳೂರು: ಪಣಂಬೂರು ಕೋಸ್ಟ್ಗಾರ್ಡ್ ಅಧಿಕಾರಿ ಜೀವನ್ ಕುಮಾರ್ ಎಂಬವರ ಪುತ್ರ ಹಿತೇನ್ ಬದ್ರ (17) ಎಂಬವರು ಮಾರ್ಚ್ 12 ರಂದು ಕುಂಜತ್ಬೈಲ್ನಲ್ಲಿರುವ ಮನೆಯಿಂದ ಹೋದವರು ವಾಪಸ್ ಬಾರದೆ ಕಾಣೆಯಾಗಿದ್ದಾರೆ.
ಕಾಣೆಯಾದವರ ಚಹರೆ:- ಎತ್ತರ: 172 ಸೆಂ.ಮೀ, ಕಾಣೆಯಾದ ದಿನ ಬಿಳಿ ಬಣ್ಣದ ಚಪ್ಪಲಿಗಳು, ತಿಳಿ ಹಸಿರು ಬಣ್ಣದ ರೌಂಡ್ ಟಿ ಶರ್ಟ್, ನೀಲಿಬಣ್ಣದ ಟ್ರ್ಯಾಕ್ ಸೂಟ್ ಧರಿಸಿದ್ದರು. ಬಿಳಿ ಬಣ್ಣದ ಕನ್ನಡಕ ಧರಿಸಿರುತ್ತಾರೆ. ಇಂಗ್ಲೀಷ್, ಹಿಂದಿ ಓಡಿಯಾ ಭಾಷೆ ಮಾತನಾಡುತ್ತಾರೆ. ಗುರುತು ಹಣೆಯ ಮೇಲೆ ಮಧ್ಯದಲ್ಲಿ ಕಪ್ಪು ಮಚ್ಚೆ ಇರುತ್ತದೆ.
ಕಾಣೆಯಾದವರ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಕಾವೂರು ಪೆÇಲೀಸ್ ಠಾಣೆಗೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.