Home Mangalorean News Kannada News ಪತ್ರಕರ್ತರಿಗೆ ಸ್ಥಳದಲ್ಲೇ ರಕ್ತದೊತ್ತಡ ತಪಾಸಣೆಗೆ ಕಿಟ್ ವಿತರಣೆ  

ಪತ್ರಕರ್ತರಿಗೆ ಸ್ಥಳದಲ್ಲೇ ರಕ್ತದೊತ್ತಡ ತಪಾಸಣೆಗೆ ಕಿಟ್ ವಿತರಣೆ  

Spread the love

ಪತ್ರಕರ್ತರಿಗೆ ಸ್ಥಳದಲ್ಲೇ ರಕ್ತದೊತ್ತಡ ತಪಾಸಣೆಗೆ ಕಿಟ್ ವಿತರಣೆ  

ಮಂಗಳೂರು: ನಿತ್ಯವೂ ಕಾರ್ಯದ ಒತ್ತಡಕ್ಕೆ ಒಳಗಾಗುವ ಪತ್ರಕರ್ತರಿಗೆ ಕೆಲಸ ಮಾಡುತ್ತಿರುವ ಸ್ಥಳದಲ್ಲೇ ರಕ್ತದೊತ್ತಡ ತಪಾಸಣೆ ನಡೆಸುವ ಬಿ.ಪಿ.ತಪಾಸಣೆ ಕಿಟ್‍ನ್ನು ಮಂಗಳೂರಿನ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ಗೆ ಉಚಿತವಾಗಿ ಹಸ್ತಾಂತರಿಸಿದ್ದಾರೆ. ಇನ್ನು ಮುಂದೆ ಪತ್ರಕರ್ತರು ಪ್ರೆಸ್‍ಕ್ಲಬ್‍ಗೆ ಬಂದು ತಾವೇ ಸ್ವತಃ ಬಿ.ಪಿ. ತಪಾಸಣೆಯನ್ನು ನಡೆಸಬಹುದು.

ಮಂಗಳೂರು ಕೆಎಂಸಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಅವರು ತಮ್ಮ ಸಹೋದ್ಯೋಗಿಗಳ ಸಹಿತ ಸಮಾನ ಮನಸ್ಕರ ತಂಡ ರಚಿಸಿದ್ದು, ಆ ಮೂಲಕ ಆರೋಗ್ಯವೇ ಭಾಗ್ಯ ಎಂಬ ವಾಟ್ಸ್‍ಆಪ್ ಗ್ರೂಪ್ ರೂಪಿಸಿ, ಇಂಥ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಇದರ ಅಂಗವಾಗಿ ಎಲ್ಲ ಶಾಲೆಗಳಿಗೆ ಬಿಪಿ ತಪಾಸಣೆ ಕಿಟ್‍ನ್ನು ನೀಡುತ್ತಿದ್ದು, ಅದೇ ರೀತಿ ಪತ್ರಕರ್ತರ ಸಂಘಕ್ಕೂ ಇದನ್ನು ಕೊಡುಗೆಯಾಗಿ ನೀಡಿದ್ದಾರೆ.

ಯಾತಕ್ಕಾಗಿ ತಪಾಸಣೆ?:
ಸಾಮಾನ್ಯವಾಗಿ ಜನರು ತಲೆ ನೋವು ಅಥವಾ ಸುತ್ತುವ ಅನುಭವದಿಂದ ಆಸ್ಪತ್ರೆಗೆ ಹೋಗಿ ರಕ್ತದೊತ್ತಡ ತಪಾಸಣೆ ಮಾಡಿಕೊಳ್ಳುತ್ತಾರೆ. ಕೆಲವರಲ್ಲಿ ಬಿಪಿ ಇರಬಹುದು ಅಥವಾ ನಾರ್ಮಲ್ ಇರಬಹುದು. ಇದನ್ನು ಕ್ಲಿನಿಕಲ್ ಹೈರ್ಪ ಟೆನ್ಶನ್ ಎನ್ನಲಾಗುತ್ತದೆ. ಹೆಚ್ಚಿನವರಿಗೆ ಕೆಲಸದ ಸ್ಥಳದಲ್ಲಿ ಹೆಚ್ಚಿನ ಒತ್ತಡದಿಂದ ತಲೆ ಸುತ್ತುವಿಕೆ ಕಾಣಿಸುತ್ತದೆ. ಅಲ್ಲಿ ಬಿಪಿ ಚೆಕ್ ಮಾಡುವ ಯಂತ್ರ ಅಥವಾ ವೈದ್ಯರು ಇರುವುದಿಲ್ಲ. ಕೆಲಸ ಮಾಡುವ ಸ್ಥಳದಲ್ಲೇ ತಪಾಸಣೆ ವೇಳೆ ಕಾಣಿಸುವ ಬಿಪಿಗೆ ಮಾಸ್ಕ್‍ಡ್ ಹೈಪರ್ ಟೆನ್ಶನ್ ಎನ್ನಲಾಗುತ್ತದೆ.

ಇನ್ನು ಕೆಲವರಿಗೆ ವೈದ್ಯರನ್ನು ಕಂಡ ತP್ಷÀಣ ಬಿಪಿಯಲ್ಲಿ ಏರುಪೇರಾಗುತ್ತದೆ. ಇದನ್ನು ವೈಟ್ ಕೋಟ್ ಹೈಪರ್ ಟೆನ್ಶನ್ ಎನ್ನಲಾಗುತ್ತದೆ. ನಿಜವಾಗಿ ಅದು ಬಿಪಿಯಲ್ಲ. ಅಂಥ ಸಂದರ್ಭದಲ್ಲಿ ಮನೆಯಲ್ಲಿ ಇನ್ನೊಮ್ಮೆ ತಪಾಸಣೆ ಮಾಡಿಸಿಕೊಳ್ಳಬೇಕು. ಆಗ ನಾರ್ಮಲ್ ಇರುತ್ತದೆ. ಮಾಸ್ಕ್‍ಡ್ ಹೈಪರ್ ಟೆನ್ಶನ್ ಇರುವವರನ್ನು ಆಸ್ಪತ್ರೆಯಲ್ಲಿ ಚೆಕ್ ಮಾಡುವಾಗ ನಾರ್ಮಲ್ ಆಗಿಯೇ ಇರುತ್ತದೆ. ಆದರೆ, ಕೆಲಸದ ಸ್ಥಳದಲ್ಲಿ ಬಿಪಿ ಹೆಚ್ಚಿರುತ್ತದೆ. ಇದನ್ನು ಪತ್ತೆಹಚ್ಚಲು ಮೆಶಿನ್ ಇಟ್ಟುಕೊಳ್ಳಬೇಕು.

ದೇಶದಲ್ಲಿ ಶೇ.20-30 ಮಂದಿಯಲ್ಲಿ ಮಾಸ್ಕ್‍ಡ್ ಹೈಪರ್ ಟೆನ್ಶನ್ ಇರುತ್ತದೆ. ಎಲ್ಲರಿಗೂ ಚಿಕಿತ್ಸೆ ಕೊಡುವ ಅಗತ್ಯ ಇರುವುದಿಲ್ಲ. ಆದರೆ, ಆಹಾರ ಮತ್ತು ಜೀವನ ಪದ್ಧತಿಯಲ್ಲಿ ಬದಲಾವಣೆ ಮೂಲಕ ಜಾಗರೂಕರನ್ನಾಗಿ ಮಾಡಬಹುದು.

ವೈದ್ಯರು, ವಕೀಲರು, ಪತ್ರಕರ್ತರು, ಶಿಷಕರು, ಬ್ಯಾಂಕ್ ಸಿಬ್ಬಂದಿ, ಶೋರೂಮ್ ಸಿಬ್ಬಂದಿ ಸೇರಿದಂತೆ ವಿವಿಧ ವೃತ್ತಿನಿರತರಿಗೆ ಅವರ ಕೆಲಸದ ಸ್ಥಳದಲರಕ್ತದೊತ್ತಡ ತಪಾಸಣೆ ಮಾಡುತ್ತಿರಬೇಕು. ಅದಕ್ಕಾಗಿ ಬಿಪಿ ಚೆಕ್ ಮೆಶಿನ್ ಇರುವುದು ಅಗತ್ಯ ಎನ್ನುತ್ತಾರೆ ಡಾ.ಪದ್ಮನಾಭ ಕಾಮತ್.

ಸ್ವಯಂ ತಪಾಸಣೆ ವಿಧಾನ
ಸುಮಾರು 2,300 ರು. ಬೆಲೆಯ ಈ ಕಿಟ್‍ನಲ್ಲಿ ಸುಲಭವಾಗಿ ಸ್ವತಃ ತಪಾಸಣೆ ನಡೆಸಬಹುದು. ನಾವೇ ತೋಳಿಗೆ ಕಿಟ್‍ನಲ್ಲಿರುವ ಬೆಲ್ಟನ್ನು ಸುತ್ತಿದ ಬಳಿಕ ಯಂತ್ರದ ಗುಂಡಿಯನ್ನು ಆನ್ ಮಾಡಬೇಕು. ಸ್ವಲ್ಪ ಹೊತ್ತಿನಲ್ಲಿ ಸ್ವಯಂ ಆಗಿ ರಕ್ತದೊತ್ತಡದ ಪರೀಕ್ಷೆ ನಡೆಯುತ್ತದೆ. ಕೊನೆಗೆ ಮೆಶಿನ್‍ನಲ್ಲೇ ಬಿ.ಪಿ. ಪ್ರಮಾಣದ ಡಿಸ್‍ಪ್ಲೇ ಕಾಣುತ್ತದೆ. ಒಂದೆರಡು ನಿಮಿಷದಲ್ಲಿ ಬಿ.ಪಿ. ತಪಾಸಣೆಗೆ ಮುಗಿದುಹೋಗುತ್ತದೆ.

ಪತ್ರಕರ್ತರು ಪ್ರೆಸ್ ಕ್ಲಬ್‍ಗೆ ಆಗಮಿಸಿ ಸ್ವಯಂ ತಪಾಸಣೆ ನಡೆಸಬಹುದು. ಪತ್ರಕರ್ತರು ಇದರ ಪ್ರಯೋಜನ ಪಡೆಯಬೇಕು ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮತ್ತು ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು ವಿನಂತಿಸಿದ್ದಾರೆ. ಅಲ್ಲದೆ ಈ ಕೊಡುಗೆ ನೀಡಿದ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್‍ಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ

ಶಾಲೆಗಳಿಗೂ ಬಿಪಿ ಚೆಕ್ ಮಿಶಿನ್
ಈಗಾಗಲೇ ಶ್ವಾಸಕೋಶದ ಸಮಸ್ಯೆ ಇರುವ ಶಾಲಾ ಮಕ್ಕಳಿಗೆ ನೆಬ್ಯೂಲೈಸನ್ ಮೆಶಿನ್ ಕೊಡಲು 250 ಮಂದಿ ಶಿಕ್ಷಕರ ಆರೋಗ್ಯವೇ ಭಾಗ್ಯ ಗ್ರೂಪ್ ರಚಿಸಿದ್ದು, 20 ಶಾಲೆಗಳಿಗೆ ಕೊಡಲಾಗಿದೆ. ಇದರ ಮುಂದುವರಿದ ಭಾಗವಾಗಿ ಬಿಪಿ ಚೆಕ್ ಮೆಶಿನ್ ಕೊಡಲಾಗುತ್ತಿದೆ.

ಶಾಲೆಗೆ ಬಿಪಿ ಚೆಕ್ ಮೆಶಿನ್ ಕೊಡುವುದು ಮಕ್ಕಳ ತಪಾಸಣೆಗಲ್ಲ, ಶಿಕ್ಷಕರಿಗಾಗಿ. ಸೆ.29ರ ವಿಶ್ವ ಹೃದಯ ದಿನದಂದು ಮಂಗಳೂರು ಜ್ಯೋತಿ ವೃತ್ತದ ಕೆಎಂಸಿ ಆಸ್ಪತ್ರೆಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಸರಳ ಆಟೊಮ್ಯಾಟಿಕ್ ಯಂತ್ರವನ್ನು ದಾನಿಗಳ ನೆರವು ಮತ್ತು ಫಾರ್ಮಾ ಕಂಪನಿ ಸಹಾಯದಿಂದ ಸದ್ಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲಯ 50 ಶಾಲೆಗಳಿಗೆ ಯಂತ್ರ ನೀಡಲಾಗುತ್ತಿದೆ. ಇದರ ಸ್ಪಂದನ ಗಮನಿಸಿ, ರಾಜ್ಯದ ಶಾಲೆಗಳಿಗೆ ವಿಸ್ತರಿಸುವ ಯೋಜನೆ ಇದೆ ಎನ್ನುತ್ತಾರೆ ಡಾ.ಪದ್ಮನಾಭ ಕಾಮತ್.


Spread the love

Exit mobile version