Home Mangalorean News Kannada News ಪತ್ರಕರ್ತ ದಿನೇಶ್ ಕಿಣಿ, ಸಮಾಜಸೇವಕ ರವಿ ಕಟಪಾಡಿ, ವಿಶು ಶೆಟ್ಟಿ ಸೇರಿ 46 ವೈಯುಕ್ತಿಕ, 6...

ಪತ್ರಕರ್ತ ದಿನೇಶ್ ಕಿಣಿ, ಸಮಾಜಸೇವಕ ರವಿ ಕಟಪಾಡಿ, ವಿಶು ಶೆಟ್ಟಿ ಸೇರಿ 46 ವೈಯುಕ್ತಿಕ, 6 ಸಂಸ್ಥೆಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Spread the love
RedditLinkedinYoutubeEmailFacebook MessengerTelegramWhatsapp

ಪತ್ರಕರ್ತ ದಿನೇಶ್ ಕಿಣಿ, ಸಮಾಜಸೇವಕ ರವಿ ಕಟಪಾಡಿ, ವಿಶು ಶೆಟ್ಟಿ ಸೇರಿ 46 ವೈಯುಕ್ತಿಕ, 6 ಸಂಸ್ಥೆಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಉಡುಪಿ2017 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 46 ಮಂದಿಗೆ  ಹಾಗೂ 6 ಸಂಘ ಸಂಸ್ಥೆಗಳಿಗೆ ಘೋಷಿಸಲಾಗಿದೆ.

 ನ.1 ರಂದು ಬೀಡಿನಗುಡ್ಡೆ ಮಹಾತ್ಮ ಗಾಂಧಿ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್  ತಿಳಿಸಿದ್ದಾರೆ.

ಮಾಧ್ಯಮ ಕ್ಷೇತ್ರದಲ್ಲಿ ಹಿರಿಯ ಪತ್ರಕರ್ತ, ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಹಿಂದಿನ ಜಿಲ್ಲಾ ವರದಿಗಾರ, ಪ್ರಸ್ತುತ ಪ್ರೈಮ್ ಟಿವಿ ಇದರ ಆಡಳಿತ ನಿರ್ದೇಶಕರಾದ ಅಲೆವೂರು ದಿನೇಶ್ ಕಿಣಿ, ಸಮಾಜ ಸೇವಕರಾದ ವಿಶು ಶೆಟ್ಟಿ, ರವಿ ಕಟಪಾಡಿ ಸೇರಿದಂತೆ ವೈಯುಕ್ತಿಕ ವಿಭಾಗದಲ್ಲಿ 46 ಮಂದಿಯನ್ನು ಜಿಲ್ಲಾಡಳಿತ ಆಯ್ಕೆ ಮಾಡಿದ್ದು, 6 ಸಂಘ ಸಂಸ್ಥೆಗಳನ್ನು ಕೂಡ ಪ್ರಶಸ್ತಿಗೆ ಗುರುತಿಸಲಾಗಿದೆ.

ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರ ವಿವರ ಇಂತಿದೆ.

ಯಕ್ಷಗಾನ ಕ್ಷೇತ್ರ: ಕೋಟ ಸುರೇಶ ಬಂಗೇರ ಮಣೂರು ಪಡುಕೆರೆ,  ಯಳ್ಳಂಪಳ್ಳಿ ಜಗನ್ನಾಥ ಆಚಾರಿ, ನೀಲಾವರ  ಹೇರಂಜಾಲು ಸುಬ್ಬಣ್ಣ ಗಾಣಿಗ ಮೂಡುಮಠ,  ಕುಂದಾಪುರ ತಾಲೂಕು,   ಕೆ.ಸದಾಶಿವ ಅಮೀನ್   ಕೊಕ್ಕರ್ಣೆ,   ಸುರೇಂದ್ರ ಪಣಿಯೂರು

ವೈದ್ಯಕೀಯ ಕ್ಷೇತ್ರ  :ಡಾI ಪದ್ಮರಾಜ ಹೆಗ್ಡೆ ಪ್ರೊಫೆಸರ್ ಮತ್ತು ಮುಖ್ಯಸ್ಥರು, ಯುರೋಲಾಜಿ ವಿಭಾಗ, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

ಶೈಕ್ಷಣಿಕ  ಕ್ಷೇತ್ರ : ಪ್ರೊ. ಡಾ. ಗೋಪಾಲ ಕೃಷ್ಣ ಪ್ರಭು. ಕೆ ನಿರ್ದೇಶಕರು, ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ, ಮಣಿಪಾಲ ಕ್ರೀಡಾ ಕ್ಷೇತ್ರ:  ಬಾಬು ಜೆ ಪೂಜಾರಿ, ಉಪ್ಪುಂದ, ಎರ್ಮಳು ಚೈತ್ರಾ ಎ ಸಾಲ್ಯಾನ್ ,ವಿಶ್ವನಾಥ ಬಿ ಕುಂದಾಪುರ , ಕೃಷ್ಣ ದೇವಾಡಿಗ , ಸಾಸ್ತಾನ, ಜಿ.ವಿ. ಅಶೋಕ, ಕೋಟ,

ಕಲೆ  : ನಟರಾಜ ಪರ್ಕಳ , ಜಯರಾಜ್ ಮಣೋಳಿಗುಜ್ಜಿ, ಮಣಿಪಾಲ, ಸುಲೋಚನಾ ವೇಣುಗೋಪಾಲ್.

ಸಾಹಿತ್ಯ  : ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷರು, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು.

ಕಲಾವಿದರು :  ಚಂದ್ರಹಾಸ ಸುವರ್ಣ ಕಾರ್ಕಳ ,ಕೆ. ವಸಂತ ಶೆಣೈ ಸರಳೇಬೆಟ್ಟು, ಮಣಿಪಾಲ ,ಪಾಂಡುರಂಗ ಪ್ರಭು ಪರ್ಕಳ ,  ಪ್ರಸಾದ್ ಖಾರ್ವಿ, ಉಪ್ಪಿನಕುದ್ರು ,ಮರ್ವಿನ್ ಶಿರ್ವ, ಶಿರ್ವ, ಸಂದೀಪ್ ಶೆಟ್ಟಿ, ಶಿರ್ವ ,ಶ್ರೀನಿವಾಸ್ ಭಟ್ ,ಕೊಡವೂರು.

ಕೃಷಿ ಕ್ಷೇತ್ರ  :ಮಟ್ಟಿ ಲಕ್ಷ್ಮೀನಾರಾಯಣ, ಕಟಪಾಡಿ,

ಪತ್ರಿಕೋಧ್ಯಮ ಕ್ಷೇತ್ರ : ಅಲೆವೂರು ದಿನೇಶ ಕಿಣಿ

ಧಾರ್ಮಿಕ ಕ್ಷೇತ್ರ  : ರುಕ್ಮಿಣಿ ಹಂಡೆ , ಮೀಯಾರು

ಆವಿಷ್ಕಾರ  : ರಘನಾಥ್ ಮನೋಹರ್  ಪರ್ಕಳ

ಸಮಾಜ ಸೇವೆ  : ಡಾ. ಎಂ. ರವೀಂದ್ರ ಹೆಗ್ಡೆ ,ಪೆರ್ಡೂರು , ರಂಗಯ್ಯ ಶೆಟ್ಟಿ , ಹಾವಂಜೆ, ಸೀತಾನದಿ ವಿಠಲ ಶೆಟ್ಟಿ  ಹೆಬ್ರಿ, ಯು. ವಿಶ್ವನಾಥ ಶೆಣೈ, ತೆಂಕಪೇಟೆ, ಶಬ್ಬೀರ್ ಹುಸೇನ್ ಪಡುಬಿದ್ರೆ ,ಕೆ.ಎಸ್. ಜೈವಿಠಲ್ , ದಯಾನಂದ ಹೆಜ್ಮಾಡಿ  , ರವಿ ಕಟಪಾಡಿ , ಸಂತೋಷ ಜಿ ಪೂಜಾರಿ ,ವಿಶು ಶೆಟ್ಟಿ ಅಂಬಲಪಾಡಿ  .

ಜಾನಪದ  ಕಲೆ : ತುಕ್ರಪಾಣಾರ ಯಾನೆ ತುಕ್ರ ಬಂಗೇರ, ಅಲೆಯ ರಾಘವೇಂದ್ರ ಉಡುಪ, ಉಗ್ಗಪ್ಪ ಪರವ ಕೆರ್ವಾಶೆ, ಸಚಿನ್ ಸಾಲ್ಯಾನ್ ,ಅಲ್ತಾರು ಗೌತಮ ಹೆಗ್ಡೆ ಅಧ್ಯಕ್ಷರು, ಜೋಡಿ ಕಂಬಳ ಸಮಿತಿ, ಅಲ್ತಾರು, ಯಡ್ತಾಡಿ ಗ್ರಾಮ.

ಸಂಗೀತ ಕ್ಷೇತ್ರ  : ಸುಂದರ ಸೇರಿಗಾರ ,ಶಮ್ಮಿ ಗಫೂರ್

ಹೊರರಾಜ್ಯ ಕನ್ನಡಿಗರು : ದೀಪಕ್ ಶೆಟ್ಟಿ ಮಧ್ಯ ಪ್ರಾಚ್ಯ ಕತಾರ್ನ ಕರ್ನಾಟಕ ಸಂಘದ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ನಿಕಟಪೂರ್ವ ಅಧ್ಯಕ್ಷರು , ಸುಬ್ರಹ್ಮಣ್ಯ ಹೆಬ್ಬಾಗಿಲು,  ತೆಗ್ಗರ್ಸೆ , ಬೈಂದೂರು.

ಸಂಘ/ಸಂಸ್ಥೆಗಳು  : ಹನುಮಾನ್ ವಿಠೋಭ ಭಜನಾ ಮಂದಿರ (ರಿ), ಮಲ್ಪೆ ,ನಮ ತುಳುವೆರ್ ಕಲಾ ಸಂಘಟನೆ (ರಿ) ನಾಟ್ಕದೂರು, ಮುದ್ರಾಡಿ , ಚೈತನ್ಯ ಯುವ ವೃಂದ(ರಿ) ಹೆಬ್ರಿ, , ಉದ್ಯಾವರ ಫ್ರೆಂಡ್ಸ್ ಸರ್ಕಲ್  , ಮಧುರ ಯುವಕ ಮಂಡಲ (ರಿ) ಸೌಡ  ,ಮಾರುತಿ ಅರ್ಜುನ್ ಗಣಾಚಾರಿ, ಬುಡಗ ಜಂಗಮ ತಂಡ, ಉಡುಪಿ  ಕೊಡಂಕೂರು ಪಡೆದುಕೊಂಡಿವೆ.


Spread the love

Exit mobile version