ಪತ್ರಕರ್ತ ಶಶಿಧರ್ ಮಾಸ್ತಿಬೈಲ್, ನಝೀರ್ ಪೋಲ್ಯರಿಗೆ ಭೀಮರತ್ನ ಅಂಬೇಡ್ಕರ್ ಪ್ರಶಸ್ತಿ ಪ್ರದಾನ
ಉಡುಪಿ: ವಿಶ್ವದ 200 ದೇಶಗಳ ಪೈಕಿ ಭಾರತಕ್ಕೆ ಅತ್ಯುತ್ತಮ ಸಂವಿಧಾನವನ್ನು ನೀಡಿದ ಬಿ ಆಂಬೇಡ್ಕರ್ ಹುಟ್ಟಿದ ದೇಶದಲ್ಲಿ ಇಂದಿಗೂ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದು ಕಳವಳಕಾರಿ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ನಗರದ ಬೋರ್ಡ್ ಕಾಲೇಜಿನ ಆವರಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ) ವತಿಯಿಂದ ಆಯೋಜಿಸಿದ ಡಾ ಬಿ ಆರ್ ಅಂಬೇಡ್ಕರ್ ಜನ್ಮದಿನಾಚರಣೆ ಹಾಗೂ ಸಾಧಕರಿಗೆ ಭೀಮರತ್ನ ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತ ದೇಶದ 25% ದಲಿತ ಸಮುದಾಯದ ಜನರು ತಲೆ ಎತ್ತಿ ನಿಲ್ಲಲು ಸಂವಿಧಾನದ ಮೂಲಕ ಸಮಾನತೆಯ ಸಂದೇಶವನ್ನು ಸಾರಿದವರು ಅಂಬೇಡ್ಕರ್. ಅಂಬೇಡ್ಕರ್ ಅವರು ದಲಿತ ವರ್ಗದ ಏಳಿಗೆಗೆ ಮಾತ್ರ ಶ್ರಮಿಸಿದ್ದಾರೆ ಎಂಬಂತೆ ಬಿಂಬಿಸಲಾಗುತ್ತಿದೆ, ಆದರೆ ಅವರು ದಲಿತರು ಸೇರಿದಂತೆ, ಶೋಷಿತರು, ದುರ್ಬಲ ವರ್ಗದವರು, ಮಹಿಳಎಯರು, ಕಾಮಿಕರು ಎಲ್ಲರ ಏಳಿಗೆಗಾಗಿ ಶ್ರಮಿಸಿದ್ದರು, ಮೀಸಲಾತಿಯ ಮೂಲಕ ಸಮಾಜದಲ್ಲಿನ ಬಡ ಮತ್ತು ದುರ್ಬಲರ ಅಭಿವೃದಿಗಾಗಿ ಸಂವಿಧಾನ ರಚೆನೆಯಲ್ಲಿ ಅವಕಾಶ ನೀಡಿದ್ದರು, ಆದರೆ ಅಂಬೇಡ್ಕರ್ ಅವರು ರೂಪಿಸಿದ ಕಾರ್ಯಕ್ರಮಗಳ ಯೋಜನೆಗಳು ಕೆಲವೇ ಕುಟುಂಬಗಳಿಗೆ ಮಾತ್ರ ತಲುಪುತ್ತಿದ್ದು, ಅದನ್ನು ಅರ್ಹರಿಗೆ ತಲುಪಿಸುವಲ್ಲಿ ಸರಕಾರ ಮತ್ತು ಸಂಘಟನೆಗಳು , ಜನಪ್ರತಿನಿಧಿಗಳು ಪ್ರಯತ್ನಿಸಬೇಕಿದೆ ಎಂದು ಪ್ರಮೋದ್ ತಿಳಿಸಿದರು.
ರಾಜ್ಯದ ಜನಸಂಖ್ಯೆಯ ಶೇ.24 ರಷ್ಟು ಎಸ್.ಸಿ ಮತ್ತು ಎಸ್ಟಿ ಸಮುದಾಯದ ಅಬಿವೃದ್ದಿಗಾಗಿ ರಾಜ್ಯ ಸರ್ಕಾರ ಕಳೆಸ ಸಾಲಿನಲ್ಲಿ 18000 ಕೋಟಿ ರೂ ಗಳನ್ನು ಮೀಸಲಿಟ್ಟಿದ್ದು, ಈ ವರ್ಷ 27000 ಕೋಟಿ ಗಳನ್ನು ಮೀಸಲಿಟ್ಟಿದೆ , ಎಲ್ಲಾ ಇಲಾಖೆಗಳಲ್ಲಿ ಈ ಸಮುದಾಯದ ಅಭಿವೃದ್ದಿಗೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕ ದೇವರಾಜ್, ಸುವರ್ಣ ನ್ಯೂಸ್ ವರದಿಗಾರ ಶಶಿಧರ್ ಮಾಸ್ತಿಬೈಲ್, ದಲಿತ ಮುಖಂಡ ಶೇಖರ ಪೆರ್ಡೂರು, ವಾರ್ತಾಭಾರತಿ ಪತ್ರಿಕೆಯ ಜಿಲ್ಲಾ ವರದಿಗಾರ ನಝೀರ್ ಪೊಲ್ಯ ಅವರುಗಳಿಗೆ ಈ ಸಂದರ್ಭದಲ್ಲಿ ಭೀಮರತ್ನ ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹೇಳವ ಸಮಾಜದ ನಾಗರಾಜ್, ರಾಜ್ಯ ಸಂಚಾಲಕ ಉದಯ್ ತಲ್ಲೂರು, ಜಿಪಂ ಅಧ್ಯಕ್ಷ ದಿನಕರ ಬಾಬು, ರಾಜ್ಯ ಸಂಘಟನಾ ಸಂಚಾಲಕ ಬಿ ಎನ್ ನಾರಾಯಣ ಸ್ವಾಮಿ, ಚಂದ್ರಮ ತಲ್ಲೂರು ಹಾಗೂ ಇತರರು ಉಪಸ್ಥಿತರಿದ್ದರು.