ಪತ್ರಿಕೋದ್ಯಮ ಉದ್ಯಮವಾಗುತ್ತಿರುವುದು ದುರಂತ ವೈ.ಎಸ್.ವಿ ದತ್ತ ವಿಷಾದ
ಬ್ರಹ್ಮಾವರ : ಕಾನೂನು, ರಾಜಕಾರಣ ಮತ್ತು ಆಡಳಿತ ವ್ಯವಸ್ಥೆಯನ್ನು ನಿಯಂತ್ರಿಸುವ ಪತ್ರಿಕೋದ್ಯಮ ಇಂದು ಉದ್ಯಮವಾಗುತ್ತಿರುವುದು ದೊಡ್ಡ ದುರಂತ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ವಿಷಾಧ ವ್ಯಕ್ತಪಡಿಸಿದರು.
ಬ್ರಹ್ಮಾವರದ ಬಂಟರ ಭವನದಲ್ಲಿ ಭಾನುವಾರ ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕೋದ್ಯಮ, ರಾಜಕಾರಣ ಮತ್ತು ಕಾನೂನು ಮಾಧ್ಯಮ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪತ್ರಿಕೆಗಳು ಉದ್ಯಮವಾಗುತ್ತಿರುವುದರಿಂದ ಅನೇಕ ಸತ್ಯಗಳು ಹೊರಬರುತ್ತಿಲ್ಲ. ಒಬ್ಬ ಪತ್ರಕರ್ತ ಬರಹದ ಮೂಲಕ ಜನಾಭಿಪ್ರಾಯ ಮೂಡಿಸಬಹುದು. ಸಾಮಾಜಿಕ ಕಳಕಳಿಯನ್ನು ಬಿಂಬಿಸಬಹುದು ಎನ್ನುವುದಕ್ಕೆ ವಡ್ಡರ್ಸೆ ಅವರು ನಿದರ್ಶನರಾಗಿದ್ದರು ಮತ್ತು ವಡ್ಡರ್ಸೆ ಅವರ ಬರಹಗಳು ಚಿಂತನೆಗೆ ಓರೆ ಹಚ್ಚುವ ಕೆಲಸಮಾಡುತ್ತಿದ್ದವು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪತ್ರಕರ್ತ ಹಾಗೂ ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಮ್ಮ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪುನರ್ ವ್ಯಾಖ್ಯಾನದ ಅವಶ್ಯಕತೆಯಿದೆ. ಮಾಧ್ಯಮಗಳ ಗುರಿ ಕಲ್ಯಾಣ ರಾಜ್ಯ ಸ್ಥಾಪನೆ ಆಗಿರಬೇಕು ಎಂದು ಹೇಳಿದರು.
ಉದ್ಯಮಿ ಹಾಗೂ ಸಾಹಿತಿ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ ಇಂದು ಮಾಧ್ಯಮಗಳಲ್ಲಿ ಮೌಲ್ಯUಳ ಕುಸಿತ ಕಾಣುತ್ತಿದ್ದೇವೆ. ಈ ನಿಟ್ಟನಲ್ಲಿ ನಮ್ಮ ಪೂರ್ವಜರ ಸಂಸ್ಕøತಿ, ಕಲೆಯ ಪೋಷಿಸಿ ಯುವಜನತೆಗೆ ವರ್ಗಾಯಿಸುವ ಕೆಲಸ ಆಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ, ಕಾರ್ಯದರ್ಶಿ ರಾಜೇಶ್ ಗಾಣಿಗ ಅಚ್ಲಾಡಿ ಉಪಸ್ಥಿತರಿದ್ದರು.
ಪತ್ರಕರ್ತರಾದ ಗಣೇಶ್ ಸಾಯಿಬ್ರಕಟ್ಟೆ ಸ್ವಾಗತಿಸಿದರು. ಶೇಷಗಿರಿ ಭಟ್ ವಂದಿಸಿದರು. ನಾಗರಾಜ್ ಅಲ್ತಾರ್ ಕಾರ್ಯಕ್ರಮ ನಿರೂಪಿಸಿದರು.