Home Mangalorean News Kannada News ಪರವಾನಿಗೆ ಇಲ್ಲದೆ ಗಂಧದ ಹಸಿ ಕೊರಡು ಸಾಗಾಟ – ಇಬ್ಬರ ಬಂಧನ

ಪರವಾನಿಗೆ ಇಲ್ಲದೆ ಗಂಧದ ಹಸಿ ಕೊರಡು ಸಾಗಾಟ – ಇಬ್ಬರ ಬಂಧನ

Spread the love

ಪರವಾನಿಗೆ ಇಲ್ಲದೆ ಗಂಧದ ಹಸಿ ಕೊರಡು ಸಾಗಾಟ – ಇಬ್ಬರ ಬಂಧನ

ಸುಳ್ಯ: ಪರವಾನಿಗೆ ಇಲ್ಲದೆ ಗಂಧದ ಹಸಿ ಕೊರಡುಗಳನ್ನು ಮತ್ತು ಚಕ್ಕೆಗಳನ್ನು ತುಂಬಿಸಿ ಸಾಗಾಟ ಮಾಡುತ್ತಿದ್ದ ಮೂವರನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕೊಡಗು ಜಿಲ್ಲೆಯ ಸೋಮವಾರಪೇಟೆಯ ನಿವಾಸಿಗಳಾದ ಅಶ್ರಫ್, ಉನೈಸ್ ಮತ್ತು ಶುಂಠಿಕೊಪ್ಪದ ಕೃಷ್ಣ ಕುಟ್ಟಿ ಎಂದು ಗುರುತಿಸಲಾಗಿದೆ.

ನವೆಂಬರ್ 4 ರಂದು ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಜಾಲ್ಸೂರು ಎಂಬಲ್ಲಿ ಸುಳ್ಯ ಪೊಲೀಸ್ ಠಾಣಾ ಪೊಲೀಸರು ಮಡಿಕೇರಿ ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಕೆಎ-55-ಎಂ-0314 ಮಾರುತಿ ಆಲ್ಟೋ ಕಾರಿನಲ್ಲಿ ಆರೋಪಿಗಳಾದ ಕೊಡಗು ಜಿಲ್ಲೆಯ ಸೋಮವಾರಪೇಟೆಯ ನಿವಾಸಿಗಳಾದ ಅಶ್ರಫ್ ಮತ್ತು ಉನೈಸ್ ರವರು ಯಾವುದೇ ಪರವಾನಿಗೆ ಇಲ್ಲದೆ ಶುಂಠಿಕೊಪ್ಪದ ಕೃಷ್ಣ ಕುಟ್ಟಿ ಎಂಬವರೊಂದಿಗೆ ಸೇರಿ ಎರಡು ಗೋಣಿ ಚೀಲಗಳಲ್ಲಿ ಸುಮಾರು 31.424 ಕೆಜಿ ಗಳಷ್ಟು ತೂಕದ 40 ಗಂಧದ ಹಸಿ ಕೊರಡುಗಳನ್ನು ಮತ್ತು 3 ಚಕ್ಕೆಗಳನ್ನು ತುಂಬಿಸಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದು ಸ್ವತ್ತುಗಳ ಅಂದಾಜು ಮೌಲ್ಯ 65,000/- ಮತ್ತು ಕಾರಿನ ಅಂದಾಜು ಮೌಲ್ಯ ರೂ 75,000/- ಆಗಬಹುದಾಗಿದೆ.

ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಕಲಂ : 379 ಐಪಿಸಿ, 71(ಎ), 86,87 ಕರ್ನಾಟಕ ಅರಣ್ಯ ಕಾಯ್ದೆ-1963ಯಂತೆ ಪ್ರಕರಣ ದಾಖಲಾಗಿರುತ್ತದೆ.


Spread the love

Exit mobile version