Home Mangalorean News Kannada News ಪರೀಕ್ಷೆ ಕಷ್ಟ ಎಂದು ಪತ್ರ ಬರೆದಿಟ್ಟು ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ

ಪರೀಕ್ಷೆ ಕಷ್ಟ ಎಂದು ಪತ್ರ ಬರೆದಿಟ್ಟು ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ

Spread the love
RedditLinkedinYoutubeEmailFacebook MessengerTelegramWhatsapp

ಪರೀಕ್ಷೆ ಕಷ್ಟ ಎಂದು ಪತ್ರ ಬರೆದಿಟ್ಟು ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ

ಬಂಟ್ವಾಳ: ಪ್ರಶ್ನೆ ಪತ್ರಿಕೆ ಕಷ್ಟ ಇತ್ತು ಎಂದು ಪತ್ರ ಬರೆದಿಟ್ಟು ದ್ವಿತಿಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಗ್ಗ ಕಾರಿಂಜಕೋಡಿ ನಿವಾಸಿ ಅರವಿಂದ ರಾವ್ ಎಂಬವರ ಪುತ್ರ ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನ ವಿಜ್ಞಾನ ವಿಭಾಗದ ನಂದನ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಎಸೆಸೆಲ್ಸಿಯಲ್ಲಿ 94 ಶೇಕಡಾ ಅಂಕ ಪಡೆದಿದ್ದ ನಂದನ್ ಪಿಯುಸಿಯಲ್ಲೂ ಅಷ್ಟೇ ಪ್ರತಿಭಾವಂತ ನಾಗಿದ್ದ. ಪ್ರಸಕ್ತ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು ಭೌತಶಾಸ್ತ್ರ ಪ್ರಶ್ನೆ ಪತ್ರಿಕೆ ಕಷ್ವವಿತ್ತು. ನಾನು ನಿರೀಕ್ಷೆ ಮಾಡಿದ ಅಂಕಗಳು ಸಿಗುವುದು ಕಷ್ಟ ಎಂದು ಪತ್ರ ಬರೆದಿಟ್ಟು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

 ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಎಸ್ಸೈ ಪ್ರಸನ್ನ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love

Exit mobile version