ಪರ್ಯಾಯ ಸ್ಥಳದಲ್ಲಿನ ಮೀನು ಮಾರಾಟ ಅಧಿಕ ಜನ ಜಮಾವಣೆಯಿಂದಾಗಿ ಸ್ಥಗಿತ
ಮಂಗಳೂರು: ಕೊರೋನ ಲಾಕ್ ಡೌನ್ ನಿಂದಾಗಿ ಈ ಹಿಂದೆ ಮತ್ಸೋಧ್ಯಮಕ್ಕೆ ದ.ಕ ಜಿಲ್ಲಾಡಳಿತ ಷರತ್ತು ಭದ್ದವಾಗಿ ಬಂದರು ದಕ್ಕೆ ಹೊರಾಂಗಣದಲ್ಲಿ ಅನುಮತಿ ನೀಡಿದ್ದು ಜನಸಾಂದ್ರತೆ ಅತಿಯಾದ ಕಾರಣದಿಂದ ಸಂಘವು ಮಾರಾಟ ಸ್ಥಗಿತ ಗೊಳಿಸಿದ್ದು, ಹೊರ ರಾಜ್ಯದ ಮೀನು ವಾಹನವನ್ನು ಜಿಲ್ಲೆಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.
ಹೆಚ್ಚಿನ ಜನ ಜಮಾವಣೆ ಯಿಂದಾಗಿ ಸೋಂಕು ನಿಯಂತ್ರಣದ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಸಂಘದ ನಿರ್ಣಯದ ಮೇರೆಗೆ ಜಿಲ್ಲಾಡಳಿತ ಮೀನು ಮಾರಾಟ ಸ್ಥಗಿತ ಗೊಳಿಸಿದೆ .ಬಂದರು ಧಕ್ಕೆಯ ಹೊರಾಂಗಣವಾದ ಕಾರಣ ಖರೀದಿಗೆ ಅಧಿಕ ಜನ ಜಮಾವಣೆ ನಿಯಂತ್ರಿಸಲು ಅಸಾಧ್ಯವಾಗಿದೆ. ನಿಗದಿತ ಸಾಮಾಜಿಕ ಅಂತರ ಪಾಲಿಸಲು ಸಾರ್ವಜನಿಕರು ಸಹಕರಿಸದ ಕಾರಣಈ ಬೆಳವಣಿಗೆಯಿಂದ ಹಸಿ ಮೀನು ಮಾರಾಟಗಾರರು ಮತ್ತು ಕಮಿಷನ್ ಏಜೆಂಟ್ ಸಂಘವು ಕೆಲವು ದಿನಗಳ ಹಿಂದೆಯೇ ವ್ಯಾಪಾರ ನಿಲ್ಲಿಸಿತ್ತು. ಹಸಿ ಮೀನು ಮಾರಾಟ ಸಂಘವು ಈ ಹಿಂದೆ ಅಪೇಕ್ಷಿಸಿದ ರೀತಿಯಲ್ಲಿಯೇ ಜಿಲ್ಲೆಯ ಉಸ್ತುವಾರಿ ಸಚಿವರ ಸಲಹೆ ಮೇರೆಗೆ ಮಾರಾಟಕ್ಕೆ ಅನುವು ಮಾಡಿ ಕೊಟ್ಟಿದ್ದು ಪೊಲೀಸರ ಸಹಕಾರದ ಹೊರತಾಗಿಯೂ ಕೂಡ ,ಜನ ಜಮಾವಣೆ ನಿಯಂತ್ರಣ ವಾಗದ ಕಾರಣ, ಮೀನು ಮಾರಾಟ ಸಂಘ ಸಭೆ ಸೇರಿ ಮಾರಾಟ ಸ್ಥಗಿತ ಗೊಳಿಸುವುದಾಗಿ ನಿರ್ಣಯಿಸಲಾಗಿದೆ ಮತ್ತು ಜಿಲ್ಲೆಗೆ ಹೊರ ರಾಜ್ಯದ ಮತ್ತು ಜಿಲ್ಲೆಗಳ ಮೀನು ಸಾಗಾಟ ಸಾರಿಗೆ ಯನ್ನು ಸ್ಥಗಿತ ಗೊಳಿಸುವಂತೆ ಕೋರಲಾಗಿದೆ.
ಪ್ರಸ್ತುತ, ಮತ್ಸ್ಯ ಮಾರಾಟವನ್ನು ತಾತ್ಕಾಲಿಕವಾಗಿ ಲಾಕ್ ಡೌನ್ ಅವಧಿಯವರೆಗೆ ಸ್ಥಗಿತ ಗೊಳಿಸಲಾಗಿದ್ದು, ಮುಂದೆ ನಿಯಮಾನುಸಾರ ಬಂದರು ದಕ್ಕೆ ನಗರ ಪಾಲಿಕೆ ಮಾರುಕಟ್ಟೆಯಲ್ಲಿಯೇ ಸಂಘದ ವತಿಯಿಂದ ಮಾರಾಟ ಚಟುವಟಿಕೆ ಮುಂದುವರಿಸುವುದಾಗಿ ನಿರ್ಣಯಿಸಲಾಗಿದೆ.
ಸಿ. ಎಂ. ಮುಸ್ತಫಾ ಅಧ್ಯಕ್ಷರು. ಮೀನು ಮಾರಾಟ ಮತ್ತು ಕಮಿಷನ್ ಏಜೆಂಟ್ ರ ಸಂಘ ಮಂಗಳೂರು. ಮೀನು ಮಾರಾಟ ಸಂಘದ ಸಭೆಯಲ್ಲಿ ಇತರ ಪದಾಧಿಕಾರಿಗಳಾದ,ಕೆ.ಇ.ರಶೀದ್,ಭರತ್ ಭೂಷಣ್,ಕೆ.ಅಶ್ರಫ್ ಮಾಜಿ ಮೇಯರ್, ಪಿ.ಪಿ.ಹಾಜಿ ಇಶಾಕ್ ಕೆ.ಎಂ.ಇಬ್ರಾಹಿಂ, ಜೆ.ಬಿ.ಶಿವ,ಕೆ.ಬಿ.ಎಸ್.ಸಾಲಿ, ಕೆ.ಎ.ಬಾವ,ಕೆ.ಎಂ.ಎ.ಮುಸ್ತಫಾ,ಎಸ್.ಎ.ಅಮೀನ್,ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.