ಪಲಿಮಾರು ಕೋಳಿ ಅಂಕ ಅಡ್ಡೆಗೆ ಎಎಸ್ಪಿ ಕೃಷ್ಣಕಾಂತ್ ತಂಡ ದಾಳಿ; 18 ಮಂದಿ ಬಂಧನ- 68 ಕೋಳಿ ವಶ
ಉಡುಪಿ: ಕೋಳಿ ಅಂಕದ ಅಡ್ಡೆಗೆ ಪೊಲೀಸರು ದಾಳಿ ನಡೆಸಿ 68 ಅಂಕದ ಹುಂಜಗಳನ್ನು ವಶಪಡಿಸಿಕೊಂಡು, 18 ಮಂದಿಯನ್ನು ಬಂಧಿಸಿದ ಘಟನೆ ಪಡುಬಿದ್ರೆ ಸಮೀಪದ ಪಲಿಮಾರಿನಲ್ಲಿ ನಡೆದಿದೆ.
ಬಂಧಿತರನ್ನು ದಿನೇಶ್ ಪಲಿಮಾರು, ಗಣೇಶ್ ಪಲಿಮಾರು, ರಾಕೇಶ್ ಕಾರ್ಕಳ, ದಾಮೋದರ ಕವತ್ತಾರು, ರಫೀಕ್ ಪಲಿಮಾರು, ಉಮೇಶ್ ಕವತ್ತಾರು, ದಿನೇಶ್ ಏಳಿಂಜೆ, ಭರತ್ ಶೆಟ್ಟಿ ಕಲ್ಲಂಡ್ಕೂರು, ವೇಣುಗೋಪಾಲ್ ಹೆಜಮಾಡಿ, ಹೇಮರಾಜ್ ಹೆಜಮಾಡಿ, ಪ್ರಸಾದ್ ಕಾರ್ಕಳ, ಭಾಸ್ಕರ್ ಕಾರ್ಕಳ, ಗಣೇಶ್ ಕೀಲ್ಪಾಡಿ, ನಾಸೀರ್ ಅಹ್ಮದ್ ಕಾರ್ನಾಡ್, ಸುಧಾಕರ್ ಶೆಟ್ಟಿ ಮುಂಡ್ಕೂರು, ಅಶ್ವಿತ್ ಮುಕ್ಕ, ಮೋಹನ್ ಪಲಿಮಾರು ಮತ್ತು ಸತೀಶ್ ಹೆಜಮಾಡಿ ಎಂದು ಗುರುತಿಸಲಾಗಿದೆ.
ಭಾನುವಾರ ಪಡುಬಿದ್ರೆ ಠಾಣಾ ಸರಹದ್ದಿನ ಪಲಿಮಾರು ಗುಂಡಿ ಎಂಬಲ್ಲಿ ಕೋಳಿ ಅಂಕ ನಡೆಯುತ್ತಿದ್ದ ಬಗ್ಗೆ ಸತೀಶ್ ಎಮ್.ಪಿ, ಪೊಲೀಸ್ ಉಪನಿರೀಕ್ಷಕರು ಪಡುಬಿದ್ರಿ ಪೊಲೀಸ್ ಠಾಣೆ ಇವರಿಗೆ ಬಂದ ಮಾಹಿತಿಯಂತೆ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಪಿ.ಕೃಷ್ಣಕಾಂತ್ ಐ.ಪಿ.ಎಸ್ ರವರ ನೇತೃತ್ವದಲ್ಲಿ ಫಲಿಮಾರು ಗ್ರಾಮದ ಗುಂಡಿ ಎಂಬಲ್ಲಿನ ಸುಬ್ರಹ್ಮಣ್ಯ ಮಠದ ಬಳಿ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಜೂಜಾಟ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ಕೃತ್ಯಕ್ಕೆ ಬಳಸಿದ್ದ ಬಿಳಿ ಬಣ್ಣದ ಹುಂಜಗಳು- 8, ಕಪ್ಪು ಮಿಶ್ರಿತ ಬಿಳಿ ಬಣ್ಣದ ಹುಂಜಗಳು-26. ಕೆಂಪು ಮಿಶ್ರಿತ ಕಪ್ಪು ಬಣ್ಣದ ಹುಂಜಗಳು-34 ಒಟ್ಟು 68 ಹುಂಜಗಳು 34,000/- ರೂಪಾಯಿ ಮೌಲ್ಯ ಬೆಲೆ ಬಾಳುತ್ತವೆ. ಸತ್ತ ಕೋಳಿ ಹುಂಜಗಳು- 19 ಮತ್ತು ಸ್ಥಳದಲ್ಲಿ 2 ಕೋಳಿಯ ಕಾಲಿಗೆ ಕಟ್ಟಲು ಉಪಯೋಗಿಸುವ ಸಣ್ಣ ಕತ್ತಿ (ಬಾಳು) -4 ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಕುರಿತು ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.