Home Mangalorean News Kannada News ಪಲಿಮಾರು ಪರ್ಯಾಯೋತ್ಸವದ ಸ್ವಾಗತ ಸಮಿತಿ ಕಾರ್ಯಾಲಯ ಉದ್ಘಾಟನೆ

ಪಲಿಮಾರು ಪರ್ಯಾಯೋತ್ಸವದ ಸ್ವಾಗತ ಸಮಿತಿ ಕಾರ್ಯಾಲಯ ಉದ್ಘಾಟನೆ

Spread the love

ಪಲಿಮಾರು  ಪರ್ಯಾಯೋತ್ಸವದ ಸ್ವಾಗತ ಸಮಿತಿ ಕಾರ್ಯಾಲಯ ಉದ್ಘಾಟನೆ

ಉಡುಪಿ: ಇಂದು ಆಧುನಿಕತೆಯ ಪ್ರವಾಹದಲ್ಲಿ ಪ್ರಾಚೀನತೆ, ಸಂಪ್ರದಾಯ, ಸಂಸ್ಕøತಿ, ಕಲೆ ಸಾಹಿತ್ಯ, ಧರ್ಮ ಎಲ್ಲವೂ ಕೊಚ್ಚಿ ಹೋಗುತ್ತಿದೆ. ಆದ್ದರಿಂದ ಉಡುಪಿ ಪರ್ಯಾಯದಲ್ಲಿ ಪರಂಪರೆ, ಸಂಸ್ಕøತಿಯ ಮೂಲ ಮೌಲ್ಯಗಳನ್ನು ಉಳಿಸಿಕೊಂಡು ಮುನ್ನಡೆಯಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

2018 ಜನವರಿಯಲ್ಲಿ ನಡೆಯಲಿರುವ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿಯವರ ಪರ್ಯಾಯೋತ್ಸವದ ಸ್ವಾಗತ ಸಮಿತಿ ಕಾರ್ಯಾಲಯ ಪಲಿಮಾರು ಪರ್ಯಾಯ ಸ್ವಾಗತ ಸಮಿತಿಯ ವೆಬ್‍ಸೈಟ್ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಜರುಗಿತು.

ಪರ್ಯಾಯೋತ್ಸವದ ಸ್ವಾಗತ ಸಮಿತಿ ಕಾರ್ಯಾಲಯವನ್ನು ಸಮಿತಿ ಗೌರವಾಧ್ಯಕ್ಷರೂ ಆಗಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರೆ ವೆಬ್‍ಸೈಟ್ ನ್ನು ಭಾಗವಹಿಸಿದ ಮೂಡುಬಿದರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಇಂದು ಆಧುನಿಕತೆಯ ಪ್ರವಾಹದಲ್ಲಿ ಪ್ರಾಚೀನತೆ, ಸಂಪ್ರದಾಯ, ಸಂಸ್ಕøತಿ, ಕಲೆ ಸಾಹಿತ್ಯ, ಧರ್ಮ ಎಲ್ಲವೂ ಕೊಚ್ಚಿ ಹೋಗುತ್ತಿದೆ. ಆದ್ದರಿಂದ ಉಡುಪಿ ಪರ್ಯಾಯದಲ್ಲಿ ಪರಂಪರೆ, ಸಂಸ್ಕøತಿಯ ಮೂಲ ಮೌಲ್ಯಗಳನ್ನು ಉಳಿಸಿಕೊಂಡು ಮುನ್ನಡೆಯಬೇಕು ಪ್ರಸ್ತುತ ಮನಸ್ಸು ವ್ಯಾವಹಾರಿಕವಾಗಿದೆ. ಸಂಸಾರವೂ ವ್ಯವಹಾರ, ಭ್ರಷ್ಟವಾಗಿರುವ ಕಾಲ ಘಟ್ಟದಲ್ಲಿ ಯುವಜನತೆ ಆಧುನಿಕತೆಯ ಹಿಂದೆ ಓಡುತ್ತಿದ್ದಾರೆ. ಅವರಿಗೆ ಧಾರ್ಮಿಕ ವಿಚಾರಗಳನ್ನು ಬೆಳೆಸಿಕೊಂಡು ಮುನ್ನಡೆಯುವ ಅವಕಾಶಗಳನ್ನು ನೀಡಬೇಕು ಎಂದವರು ತಿಳಿಸಿದರು.

ಪೇಜಾವರ ಶ್ರೀಗಳ ಐತಿಹಾಸಿಕ ಪರ್ಯಾಯ ಮುಕ್ತಾಯವಾಗುತ್ತಿದೆ. ಪಲಿಮಾರು ಪರ್ಯಾಯ ಬಂದಿದೆ. ಮಠಾಧೀಶರಿಗೆ ಪರ್ಯಾಯ ಶ್ರೀಕೃಷ್ಣನ ಪೂಜಾ ಕಾರ್ಯವಾದರೂ ಇಡೀ ಊರಿಗೆ ಊರೇ ಪರ್ಯಾಯೋತ್ಸವಕ್ಕೆ ಸಜ್ಜಾಗುತ್ತದೆ. ಯಾವುದೇ ಚಿಂತನೆ, ವಿಚಾರ ಭಿನ್ನಾಭಿಪ್ರಾಯಗಳಿದ್ದರೂ ಪರ್ಯಾಯೋತ್ಸವದಲ್ಲಿ ಎಲ್ಲರೂ ಒಗ್ಗಟ್ಟಾಗುತ್ತಾರೆ. ಪಲಿಮಾರು ಶ್ರೀಗಳು ಪರ್ಯಾಯ ಪೂರ್ವ ಸಂಚಾರದಲ್ಲಿದ್ದು, ನಾವೆಲ್ಲರೂ ಯಾವುದೇ ಫಲಾಪೇಕ್ಷೆ ಇಲ್ಲದೇ ಕೆಲಸ ಮಾಡಬೇಕು ಎಂದರು.

ಡಾ. ಎಂ. ಮೋಹನ್ ಆಳ್ವ ಮಾತನಾಡಿ ಈ ಕಾಲಕ್ಕೆ ಹೇಗೆ ನಡೆಯುವುದು ಎನ್ನುವುದೇ ಸವಾಲಾಗಿದೆ. ಕಣ್ಣುಘಿ, ಕಿವಿಗಳು ಆಧುನಿಕತೆ, ವೈವಿಧ್ಯತೆಯನ್ನು ಕಾಣುತ್ತಿವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಏಕ ಚಿತ್ತದಿಂದ ಕೆಲಸ ಮಾಡಬೇಕು. ಪರ್ಯಾಯೋತ್ಸವ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ನಡೆಸಬೇಕು. ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದರು.

ಕಟೀಲು ಹರಿನಾರಾಯಣ ಆಸ್ರಣ್ಣ , ಮಠದ ದಿವಾನ ವೇದವ್ಯಾಸ ತಂತ್ರಿ, ಸಮಿತಿಯ ಕಾರ್ಯಾಧ್ಯಕ್ಷ ಬಾಲಾಜಿ ರಾಘವೇಂದ್ರ ಆಚಾರ್ಯ ಹಾಗೂ ಸಮಿತಿಯ ಪದಾಧಿಕಾರಿಗಳಾದ ಮಟ್ಟು ಲಕ್ಷ್ಮೀನಾರಾಯಣ ರಾವ್, ರಮೇಶ್ ರಾವ್ ಬೀಡು, ಪದ್ಮನಾಭ ಭಟ್, ಪ್ರಹ್ಲಾದ್ ರಾವ್ ಮೊದಲಾದವರು ಉಪಸ್ಥಿತರಿದ್ದರು. ಪ್ರೋ. ಎಂ.ಎಲ್. ಸಾಮಗ ಕಾರ್ಯಕ್ರಮ ನಿರ್ವಹಿಸಿ, ಶ್ರೀಧರ ವಂದಿಸಿದರು.


Spread the love

Exit mobile version