ಪಲಿಮಾರು ಮಠದ ವತಿಯಿಂದ ನಡೆಯುವ ವಸಂತ ಧಾರ್ಮಿಕ ಶಿಬಿರದ ಸಮಾರೋಪ
ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ, ಪರ್ಯಾಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಂದ ಪ್ರತಿ ವರ್ಷ ಪಲಿಮಾರು ಮಠದಲ್ಲಿ ನಡೆಯುವ ವಸಂತ ಧಾರ್ಮಿಕ ಶಿಬಿರದ ಸಮಾರೋಪ ಸಮಾರಂಭ ರಾಜಾಂಗಣದಲ್ಲಿ ಭಾನುವಾರ ನಡೆಯಿತು.
ಸಮಾರಂಭದಲ್ಲಿ ಪರ್ಯಾಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿ ಇಪ್ಪತ್ತೊಂದು ವರ್ಷಗಳಿಂದ ನಡೆಯುತ್ತಿರುವ ಈ ಶಿಬಿರದಿಂದ ಹಿಂದುಗಳಾದ ನಾವು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಧ್ಯಾತ್ಮ ಜ್ಞಾನದಿಂದ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರದ ಅಡಿಗಲ್ಲು ಹಾಕಿಸಿ ಮಕ್ಕಳನ್ನು ಬೆಳೆಸಬೇಕೆಂದು ತಿಳಿಸಿ ಆಶೀರ್ವಚಣ ನೀಡಿದರು.
ಸಮಾರಂಭಕ್ಕೆ ಆಗಮಿಸಿದ ಪೇಜಾವರ ಹಿರಿಯ ಶ್ರೀಗಳಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಭಾಗವಹಿಸಿ – ಅಧ್ಯಾತ್ಮವಿಲ್ಲದ ಆಧುನಿಕತೆ ಆತ್ಮವಿಲ್ಲದ ದೇಹದಂತೆ ಅಂದರೆ ಧಾರ್ಮಿಕತೆ ಇಲ್ಲದಿದ್ದರೆ ಕರೆಂಟ್ ಇಲ್ಲದ ಬಲ್ಬ್ ನಂತೆ ಎಂದು ಅನುಗ್ರಹ ಸಂದೇಶ ನೀಡಿ ಹರಸಿದರು.
ಈ ಸಂದರ್ಭದಲ್ಲಿ ಅದಮಾರು ಕಿರಿಯ ಯತಿಗಳಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಮತ್ತು ಪ್ರಯಾಗ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.
ಉತ್ತಮ ಅಂಕಗಳನ್ನು ಪಡೆದ ಶಿಬಿರದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಮಠದ ವಿದ್ವಾಂಸರಾದ ಕಲ್ಮಂಜೆ ವಾಸುದೇವ ಉಪಾಧ್ಯಾಯರು ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು.