Home Mangalorean News Kannada News ಪವರ್‌ಲಿಫ್ಟರ್ ಜಾಕ್ಸನ್ ಡಿ’ಸೋಜಾಗೆ ಹುಟ್ಟೂರ ಸನ್ಮಾನ

ಪವರ್‌ಲಿಫ್ಟರ್ ಜಾಕ್ಸನ್ ಡಿ’ಸೋಜಾಗೆ ಹುಟ್ಟೂರ ಸನ್ಮಾನ

Spread the love

ಪವರ್‌ಲಿಫ್ಟರ್ ಜಾಕ್ಸನ್ ಡಿ’ಸೋಜಾಗೆ ಹುಟ್ಟೂರ ಸನ್ಮಾನ

ಕುಂದಾಪುರ: ಜೆಮ್ಶೆಡ್ಪುರದಲ್ಲಿ ನಡೆದ ಅಂತರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಆನಗಳ್ಳಿಯ ಜಾಕ್ಸನ್ ಡಿ’ಸೋಜಾರಿಗೆ ಆನಗಳ್ಳಿಯಲ್ಲಿ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ದ್ವಿತೀಯ ಸ್ಥಾನಿಯಾಗಿ ಎರಡು ಬೆಳ್ಳಿ ಪದಕಗಳು ಮತ್ತು ಒಂದು ಕಂಚಿನ ಪದಕದೊಂದಿಗೆ ದೇಶಕ್ಕೆ ಮತ್ತು ಊರಿಗೆ ಕೀರ್ತಿ ತಂದ ಆನಗಳ್ಳಿಯ ಜಾಕ್ಸನ್ ಅವರನ್ನು ಬೈಕ್ ರ‍್ಯಾಲಿಯಲ್ಲಿ ಕುಂದಾಪುರ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮೂಲಕ ಆನಗಳ್ಳಿಗೆ ನೂರಾರು ನಾಗರಿಕರು ಭವ್ಯ ಮೆರವಣಿಗೆಯಲ್ಲಿ ಕರೆತಂದು ಅಭಿನಂದನೆ ಸಲ್ಲಿಸಿದರು.

jakshon-dsouza-felicitation

ಕ್ರೀಡೆಯಲ್ಲಿ ಎಷ್ಟು ಎತ್ತರಕ್ಕೆ ಏರಿದರೂ ಸದಾ ಕಾಲವೂ ಎಲ್ಲರೊಡನೆ ನಗುಮುಖದಿಂದ ಹಮ್ಮುಬಿಮ್ಮಿಲ್ಲದೇ ಸೌಜನ್ಯದಿಂದ ವರ್ತಿಸುವ ಜಾಕ್ಸನ್ ಅವರ ಗುಣವನ್ನು ಸನ್ಮಾನ ಪತ್ರದಲ್ಲಿ ವಿಶೇಷವಾಗಿ ಗುರುತಿಸಲಾಗಿದೆ.

ಆನಗಳ್ಳಿಯ ಜೋಸೆಫ್ ಮತ್ತು ಕಾರ್ಮಿನ್ ಡಿ’ ಸೋಜಾ ದಂಪತಿಯ ಪುತ್ರನಾದ ಜಾಕ್ಸನ್ ಡಿಸೋಜಾ ಅವರು ತನ್ನ ಸಾಧನೆಗೆ ಬೆಂಗಾವಲಾಗಿ ನಿಂತ ಸಹೋದರ ಜೊಯ್ಸನ್ ಡಿ’ಸೋಜಾ ಅವರ ಸಹಕಾರದಿಂದ ಕುಂದಾಪುರದ ನ್ಯೂ ಹರ್ಕುಲೆಸ್ ಜಿಮ್ ತರಬೇತುದಾರ ಸತೀಶ್ ಖಾರ್ವಿ ಅವರ ಮಾರ್ಗದರ್ಶನದಲ್ಲಿ ದೇಶವೇ ಗುರುತಿಸುವಂಥ ಮಹತ್ವದ ಸಾಧನೆಗೈದಿರುವುದಕ್ಕೆ ಊರಿನ ನಾಗರಿಕ ಮುಖಂಡರು ಅವರ ಗುಣಗಾನ ಮಾಡಿದರು. ಸ್ಥಳೀಯರಾದ ವೇದಮೂರ್ತಿ ಚನ್ನಕೇಶವ ಭಟ್ ಅವರು ಜಾಕ್ಸನ್ ಅವರನ್ನು ಹತ್ತು ಸಾವಿರ ರೂ. ನೀಡಿ ಪ್ರೋತ್ಸಾಹಿಸಿದರು.
ಆನಗಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮರಿಯಾ ಡಿ’ಸೋಜಾ, ಬಸ್ರೂರು ಚರ್ಚ್ ಧರ್ಮಗುರು ವಂದನೀಯ ಫಾ. ವಿಶಾಲ್ ಲೋಬೊ, ಜಾಕ್ಸನ್ ಅವರ ಕ್ರೀಡಾ ಪ್ರೀತಿಯನ್ನು ಪ್ರೋತ್ಸಾಹಿಸಿದ ಬಸ್ರೂರು ಶಾರದಾ ಕಾಲೇಜು ಪ್ರಾಂಶುಪಾಲರಾದ ಪ್ರೊ. ರಾಧಾಕೃಷ್ಣ ಶೆಟ್ಟಿ, ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್, ಬಸ್ರೂರು ಶಾರದಾ ಕಾಲೇಜು ಪ್ರಾಧ್ಯಾಪಕ, ಚಿಂತಕ ಡಾ. ದಿನೇಶ್ ಹೆಗ್ಡೆ, ಜಾಕ್ಸನ್ ಅವರ ಸಾಧನೆಯಲ್ಲಿ ವಿಶೇಷ ಶ್ರಮ ವಹಿಸಿದ ಕುಂದಾಪುರದ ನ್ಯೂ ಹರ್ಕುಲೆಸ್ ಜಿಮ್ ತರಬೇತುದಾರ ಸತೀಶ್ ಖಾರ್ವಿ, ಬಸ್ರೂರು ಕಾಲೇಜಿನ ದೈಹಿಕ ನಿರ್ದೇಶಕ ಸೂರಜ್ ಶೆಟ್ಟಿ ಮತ್ತಿತರರು ನಾಗರಿಕ ಸನ್ಮಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಆನಗಳ್ಳಿ ಗ್ರಾಮ ಪಂಚಾಯತ್ ಸದಸ್ಯ ಎಚ್. ಗಂಗಾಧರ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕುಂದಾಪುರ ನಗರದಲ್ಲಿ ಸಾರ್ವಜನಿಕ ಮೆರವಣಿಗೆ – ನ್ಯೂ ಹರ್ಕುಲೆಸ್ ಜಿಮ್ ಸನ್ಮಾನ ಸಮಾರಂಭದ ಬಳಿಕ ಜಾಕ್ಸನ್ ಅವರು ಆನಗಳ್ಳಿ ತಲುಪುವಾಗ ರಾತ್ರಿ ವೇಳೆ ಮೀರಿದ್ದರೂ ಆನಗಳ್ಳಿಯ ಗ್ರಾಮಸ್ಥರು ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ಯುವಕರ ತಂಡ ಅವರ ಆಗಮನಕ್ಕಾಗಿ ಕಿಂಚಿತ್ ಸಹನೆ ಕಳೆದುಕೊಳ್ಳದೇ ಕಾದು ನಿಂತಿದ್ದು, ಊರಿನ ಪ್ರೀತಿಯ ಮತ್ತು ಹೆಮ್ಮೆಯ ಕುವರನ ಸಂಭ್ರಮದಲ್ಲಿ ತಾವಿದ್ದೇವೆ ಎಂದು ಗುರುತಿಸಿಕೊಂಡು ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದು ಗಮನಾರ್ಹವಾಗಿತ್ತು.

ಜಾಕ್ಸನ್ ಅವರ ಸಾಧನೆಯ ಮೆಟ್ಟಿಲುಗಳು

2014 ರಲ್ಲಿ ಉಡುಪಿಯಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ.2014 ರಲ್ಲಿ ಮಂಗಳೂರಿನ ಕೂಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ. 2016 ರಲ್ಲಿ ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ನಡೆದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ. 2015 ರಲ್ಲಿ ಉಡುಪಿಯ ಅಜ್ಜರಕಾಡು ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ. 2015 ರಲ್ಲಿ ಕುಂದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ. 2016 ರಲ್ಲಿ ಸುರತ್ಕಲ್ನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಕಂಚಿನ ಪದಕ. 2016 ರಲ್ಲಿ ವಿಟ್ಲದಲ್ಲಿ ನಡೆದ ರಾಜ್ಯ ಮಟ್ಟದ ಸೀನಿಯರ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ. 2016 ರಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ 74 ಕೆ.ಜಿ ವಿಭಾಗದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ. ಆಂಧ್ರ ಪ್ರದೇಶದ ಗುಂಟೂರಿನಲ್ಲಿ ನಡೆದ ಅಂತರ್ ವಿಶ್ವವಿದ್ಯಾಲಯ ಸ್ಪರ್ಧೆಗೆ ಮಂಗಳೂರು ವಿಶ್ವವಿದ್ಯಾಲಯ ತಂಡದಿಂದ ಆಯ್ಕೆ. 4 ಬಾರಿ ಕರ್ನಾಟಕ ರಾಜ್ಯ ತಂಡದಿಂದ ಆಯ್ಕೆ. ಕಪತರ್ುಲ್ಲಾದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ 4ನೇ ಸ್ಥಾನ. ಪಂಜಾಬ್ನ ಜೆಮ್ಶೆಡ್ಪುರದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕಂಚಿನ ಪದಕಗಳನ್ನು ಪಡೆದುಕೊಂಡಿರುವ ಜಾಕ್ಸನ್ ಅವರ ಪದಕಗಳ ಪಟ್ಟಿ ಇನ್ನೂ ದೊಡ್ಡದಿದೆ.


Spread the love

Exit mobile version