‘ಪವಿತ್ರಾತ್ಮ ಅಭಿಶೆಕೋತ್ಸವ 2017’  – ಸಮಾರೋಪ ಕಾರ್ಯಕ್ರಮ

Spread the love

‘ಪವಿತ್ರಾತ್ಮ ಅಭಿಶೆಕೋತ್ಸವ 2017’  – ಸಮಾರೋಪ ಕಾರ್ಯಕ್ರಮ

ಮಂಗಳೂರು : ‘ಪವಿತ್ರಾತ್ಮ ಅಭಿಶೆಕೋತ್ಸವ 2017’ ಧ್ಯಾನಕೂಟದ ಸಮಾರೋಪ ಭಾನುವಾರ ಜರುಗಿತು.

ಅ. ವಂ. ಡಾ. ಬರ್ನಾರ್ಡ್ ಮೊರಾಸ್ ಬೆಂಗಳೂರು ಮಹಾ ಧರ್ಮಪ್ರಾಂತ್ಯದ ಮಹಾ-ಧರ್ಮಾಧ್ಯಕ್ಷರು ಸಮಾರೋಪ ಕಾರ್ಯಕ್ರಮದಲ್ಲಿ ಕಥೋಲಿಕ ಧರ್ಮ-ಸಭೆಯಲ್ಲಿ ಕ್ಯಾರಿಜ್ಮ್ಯಾಟಿಕ್ ನವೀಕರಣದ ಸ್ವರ್ಣಮಹೋತ್ಸದ ಸವಿ ನೆನಪಿಗಾಗಿ ಐವತ್ತು ಬಲೂನ್ ಗಳನ್ನು ಗಾಳಿಯಲ್ಲಿ ತೇಲಿ ಬಿಟ್ಟರು ಮತ್ತು ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.

ನಂತರ ಮಹಾ-ಧರ್ಮಾಧ್ಯಕ್ಷರು ಪೂಜ್ಯ ಬಿಶಪರಾದ ಎಲೋಶಿಯಸ್ ಡಿ’ಸೋಜ ಮಂಗಳೂರು ಧರ್ಮಪ್ರಾಂತ್ಯ, ಬಿಶಪ್ ಲಾರೆನ್ಸ್ ಬೆಳ್ತಂಗಡಿ ಧರ್ಮಪ್ರಾಂತ್ಯ,  ಬಿಶಪ್ ಜೆರಾಲ್ಡ್ ಲೋಬೊ ಉಡುಪಿ ಧರ್ಮಪ್ರಾಂತ್ಯ,  ಮತ್ತು 110 ಧರ್ಮಗುರುಗಳೊಂದಿಗೆ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು.

ಮಹಾ-ಧರ್ಮಾಧ್ಯಕ್ಷರು ತಮ್ಮ ಪ್ರವಚನದಲ್ಲಿ, ಕ್ಯಾರಿಜ್ಮ್ಯಾಟಿಕ್ ನವೀಕರಣದಿಂದಾಗಿ ಧರ್ಮಸಭೆಯಲ್ಲಿ ಅಪಾರ ಒಳಿತಾಗಿದೆ. ಧರ್ಮಗುರುಗಳು, ಕನ್ಯಾಸ್ತ್ರಿಯರು ಮತ್ತು ಶ್ರೀಸಾಮಾನ್ಯ ಭಕ್ತಾಧಿಗಳು ತಮ್ಮ ಆಧ್ಯಾತ್ಮಿಕ ಜೀವನದ ಅರ್ಥವನ್ನು ಕಂಡುಕೊಂಡಿದ್ದಾರೆ ಮತ್ತು ತಮ್ಮ ಜೀವನದಲ್ಲಿ ಅದನ್ನು ಅಳವಡಿಸಿ ಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ದೇವರ ಅಪಾರ ಆಶೀರ್ವಾದಗಳನ್ನು ಪಡೆದುಕೊಳ್ಳಲು ಸಹಕಾರಿಯಾದ ಈ ನವೀಕರಣ್ಣಕ್ಕಾಗಿ ನಾವು ದೇವರಿಗೆ ಕೃತಜ್ಞರಾಗಿದ್ದೇವೆ ಎಂದರು.

ಬಿಶಪ್ ಲಾರೆನ್ಸ್ ಮುಕ್ಕುಳಿಯವರು ಪವಿತ್ರಾತ್ಮರ ಅದ್ಬುತ ಶಕ್ತಿಯ ಬಗ್ಗೆ ಪ್ರವಚನ ಮಾಡಿದರು. ಫಾ. ಫ್ರಾಂಕ್ಲಿನ್ ಡಿ’ಸೋಜರವರು ಮಾತೆ ಮರಿಯಮ್ಮನವರು ನಮಗೆಲ್ಲರಿಗೆ ಯೇಸು ಸ್ವಾಮಿಯನ್ನು ಹಿಂಬಾಲಿಸುವಲ್ಲಿ ಆದರ್ಶರಾಗಿದ್ದಾರೆ ಎಂದರು. ಫಾ. ಜೋಸ್ ವೆಟ್ಟಿಯಾಂಕಲ್‍ರವರು ಆರಾಧನೆಯನ್ನು ನಡೆಸಿಕೊಟ್ಟರು.

ಈ ಕೊನೆಯ ದಿನದ ಧ್ಯಾನಕೂಟದಲ್ಲಿ 25,000 ಜನರು ಪಾಲ್ಗೊಂಡಿದ್ದರು. ಸಮ್ಮೇಳನದ ಸಂಚಾಲಕ ಫಾ. ಓನಿಲ್ ಡಿ’ಸೋಜರವರು ಕಾರ್ಯಕ್ರಮ ನಡೆಸಿಕೊಟ್ಟರು. ಫಾ. ಮೆಲ್ವಿನ್ ನೊರೊನ್ಹಾ ವಂದನಾರ್ಪಣೆ ಗೈದರು.

 


Spread the love