Home Mangalorean News Kannada News ಪವಿತ್ರ ಹಜ್ ಯಾತ್ರೆಗೆ ತೆರಳಿದ ಕಾಸರಗೋಡಿನ ವ್ಯಕ್ತಿ ನಿಧನ

ಪವಿತ್ರ ಹಜ್ ಯಾತ್ರೆಗೆ ತೆರಳಿದ ಕಾಸರಗೋಡಿನ ವ್ಯಕ್ತಿ ನಿಧನ

Spread the love

ಪವಿತ್ರ ಹಜ್ ಯಾತ್ರೆಗೆ ತೆರಳಿದ ಕಾಸರಗೋಡಿನ ವ್ಯಕ್ತಿ ನಿಧನ

ಕಾಸರಗೋಡು: ಪವಿತ್ರ ಹಜ್ ಯಾತ್ರೆಗೆ ಆಗಮಿಸಿದ ಯಾತ್ರಿಕರೊಬ್ಬರು ಶುಕ್ರವಾರ ರಾತ್ರಿ ಮಕ್ಕಾದ ಕಿಂಗ್ ಅಬ್ದುಲ್ ಅಝೀಝ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತರನ್ನು ಸುಳ್ಯ ಆರಂತೋಡು ನಿವಾಸಿ ಅಬೂಬಕ್ಕರ್ (73) (ಈಗ ಕುಂಬ್ಳೆ ಕಾಸರಗೋಡಿನಲ್ಲಿ ವಾಸ) ಎಂದು ಗುರುತಿಸಲಾಗಿದೆ.

haj-piligrimage-death

ರಂಝಾನ್ ನಲ್ಲಿ  ಡಯಾಲಿಸಿಸ್’ ಮಾಡಲಾಗಿದ್ದು, ಅಸೌಖ್ಯದೊಂದಿಗೆ ಹಜ್ ತೆರಳಬೇಡಿ ಕುಟುಂಬಸ್ಥರು ಹೇಳಿದ್ದರು. ಆದ್ರೆ ತಾನು ಕೂಡ ಹಜ್’ಗೆ ಆಗಮಿಸಿದ ತಂದೆಯಂತೆ , ಇಲ್ಲೇ ಮರಣ ಹೊಂದಬೇಕು ಎಂದು, ಪತ್ನಿ ಸಮೇತ ಹಜ್ಜ್ ನಿರ್ವಹಿಸಲು ಪುಣ್ಯ ಮಕ್ಕಾ ಮದೀನಾ ಆಗಮಿಸಿದ್ದಾರೆ.

ಕರ್ನಾಟಕದ ಮೊದಲ ಹಜ್ಜ್ ವಿಮಾನದಲ್ಲಿ ಆಗಸ್ಟ್ 4 ರಂದು ಆಗಮಿಸಿದ ಇವರು ಪವಿತ್ರ ಮದೀನಾದಲ್ಲಿ ೮ ದಿನಗಳ ಕಾಲ ತಂಗಿದ್ದು, ಮದೀನಾ ಝಿಯಾರತ್ ನಡೆಸಿದ್ದಾರೆ. ಆ ಬಳಿಕ ಅಸ್ವಸ್ಥ ರಾಗಿದ್ದ ಇವರನ್ನು ಆಂಬುಲೆನ್ಸ್ ಮೂಲಕ ಮಕ್ಕಾದ  ಕಿಂಗ್ ಅಬ್ದುಲ್ ಅಝೀಝ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದ್ದು ಬಳಿಕ ಸ್ವಲ್ಪ ಚೇತರಿಸಿಕೊಂಡಿದ್ದರು. ಕಳೆದ ಶುಕ್ರವಾರ ದಂದು ತೀವ್ರ ಅಸ್ವಸ್ಥರಾದ ಇವರನ್ನು ಮತ್ತೇ ಕಿಂಗ್ ಅಬ್ದುಲ್ ಅಝೀಝ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.

ಮೃತರ ಹಿರಿಯ ಮಗ ಅಬ್ದುಲ್ ಹಕೀಂ ಮದೀನಾದಲ್ಲಿ ಉದ್ಯೋಗದಲ್ಲಿದ್ದು, ತಂದೆಯ ಅಸೌಖ್ಯ ಕಾರಣ ಮಕ್ಕಾದಲ್ಲಿ ಅವರ ಜತೆಗಿದ್ದು ಸಹಕರಿಸುತ್ತಿದ್ದರು. ಮೃತರು ಪತ್ನಿ, ನಾಲ್ಕು ಪುತ್ರರು ಹಾಗೂ ಓರ್ವ ಪುತ್ರಿಯನ್ನು  ಅಗಲಿದ್ದಾರೆ. ಆಸ್ಪತ್ರೆಗೆ KCF ಹಜ್ ಕಾರ್ಯಕರ್ತರು, ಉಮ್ಮರ್ ಸಖಾಫಿ ದಾರುಲ್ ಇರ್ಷಾದ್  ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿ ಪ್ರಾರ್ಥನೆ ನಡೆಸಿದ್ದಾರೆ.


Spread the love

Exit mobile version