ಪಿಎಫ್ ಐ ಪ್ರತಿಭಟನೆ; ಮೂರು ಮಾಧ್ಯಮ ಪ್ರತಿನಿಧಿಗಳಿಗೆ ವಿದೇಶದಿಂದ ಬೆದರಿಕೆ ಕರೆ

Spread the love

ಪಿಎಫ್ ಐ ಪ್ರತಿಭಟನೆ; ಮೂರು ಮಾಧ್ಯಮ ಪ್ರತಿನಿಧಿಗಳಿಗೆ ವಿದೇಶದಿಂದ ಬೆದರಿಕೆ ಕರೆ

ಮಂಗಳೂರು: ಪಾಪ್ಯುಲರ್ ಫ್ರಂಟ್ ಇಂಡಿಯಾ ಆಯೋಜಿಸಿದ ಪ್ರತಿಭಟನೆಯಲ್ಲಿ ನಡೆದ ಲಾಠಿಚಾರ್ಜ್ ಬಳಿಕ ವಾಟ್ಸ್ ಆ್ಯಪ್ ಗ್ರೂಪ್ ಒಂದರಲ್ಲಿ ಹಾಕಿದ ಒಂದು ಪ್ರತಿಕ್ರಿಯೆಗೆ ಸಂಬಂಧಿಸಿ ಮೂರು ಮಂದಿ ಮಾಧ್ಯಮದ ವ್ಯಕ್ತಿಗಳಿಗೆ ವಿದೇಶದಿಂದ ಬೆದರಿಕೆ ಕರೆ ಬಂದಿರುವ ಘಟನೆ ವರದಿಯಾಗಿದೆ.

ಸೋಮವಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರು ಪೋಲಿಸ್ ಕಮೀಷನರ್ ಅವರ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದು, ಪೋಲಿಸರು ಸ್ಥಳದಿಂದ ಚದುರುವಂತೆ ಸೂಚಿಸಿದ್ದು, ಪ್ರತಿಭಟನಾಕಾರರು ಇದಕ್ಕೆ ನಿರಾಕರಿಸಿದ ಪರಿಣಾಮ ಪೋಲಿಸರು ಲಾಠಿ ಚಾರ್ಜ್ ನಡೆಸಿ ಪ್ರತಿಭಟನಾಕಾರರನ್ನು ಸ್ಥಳದಿಂದ ಚದುರಿಸಿದ್ದರು.

ಲಾಠಿಚಾರ್ಜ್ ನಡೆದ ಸುದ್ದಿ ಕ್ಷಣ ಮಾತ್ರದಲ್ಲಿ ವಿಶ್ವದಾದ್ಯಂತ ಹೋಗಿದ್ದು, ಘಟನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಸ್ತಾರವಾದ ಚರ್ಚೆಗಳು ಕೂಡ ನಡೆಯುತ್ತಿತ್ತು. ಅದರಂತೆ ವಾಟ್ಸಾಪ್ ಗ್ರೂಪ್ ವೊಂದರಲ್ಲಿ ಒಬ್ಬ ಮಾಧ್ಯಮ ಪ್ರತಿನಿಧಿಯೋರ್ವರು ‘ಪೋಲಿಸರ ಲೀಗ್ ಮ್ಯಾಚ್ ಆರಂಭವಾಗಿದೆ’ ಎಂಬ ಸಂದೇಶವನ್ನು ಹಾಕಿದ್ದರು. ಇದರಿಂದ ಕೋಪಗೊಂಡ ವ್ಯಕ್ತಿಯೊಬ್ಬರು ವಿದೇಶದಿಂದ ಮಾಧ್ಯಮಪ್ರತಿನಿಧಿಗೆ ಕರೆ ಮಾಡಿ ಇಂತಹ ಸಂದೇಶಗಳನ್ನು ಹಾಕದಂತೆ ಎಚ್ಚರಿಕೆ ನೀಡಿದ್ದಾರೆ.

ಮೂರು ಮಾಧ್ಯಮ ಪ್ರತಿನಿಧಿಗಳಿಗೆ ಬೆದರಿಕೆ ಕರೆಗಳು ಬೇರೆ ಬೇರೆ ನಂಬರ್ ಗಳಿಂದ ಬಂದಿದ್ದು ಈ ವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.


Spread the love