Home Mangalorean News Kannada News ಪಿಲಿಕುಳದಲ್ಲಿ ರಾಷ್ಟ್ರೀಯ ಕರಕುಶಲ ಮೇಳ

ಪಿಲಿಕುಳದಲ್ಲಿ ರಾಷ್ಟ್ರೀಯ ಕರಕುಶಲ ಮೇಳ

Spread the love

ಪಿಲಿಕುಳದಲ್ಲಿ ರಾಷ್ಟ್ರೀಯ ಕರಕುಶಲ ಮೇಳ

ಮಂಗಳೂರು: ಭಾರತ ಸರಕಾರದ ಜವಳಿ ಮಂತ್ರಾಲಯದ ಪ್ರಾಯೋಜಕತ್ವದಲ್ಲಿ ಪಿಲಿಕುಳದ ಅರ್ಬನ್ ಹಾಥ್‍ನಲ್ಲಿ ದಿನಾಂಕ 22.12.2016 ರಿಂದ ಪ್ರಾರಂಭಗೊಂಡ ರಾಷ್ಟ್ರೀಯ ಕರಕುಶಲ ಮೇಳವು ಅಪಾರ ಜನಮನ್ನಣೆಗೆ ಕಾರಣೀಭೂತವಾಗಿದೆ.

ವೈವಿಧ್ಯಮಯ ಉತ್ಪನ್ನಗಳೊಂದಿಗೆ ದೇಶದ ನಾನಾ ಕಡೆಗಳಿಂದ ಆಗಮಿಸಿರುವ ಕುಶಲಕರ್ಮಿಗಳು ಅವರು ಉತ್ಪಾದಿಸಿದ ಟೆರಾಕೋಟಾ, ಕೈಯಲ್ಲೇ ತಯಾರಿಸಿದ ಬ್ಯಾಗುಗಳು, ಸ್ಪಟಿಕದ ವಿವಿಧ ಆಭರಣಗಳು, ಶರ್ಟ್‍ಗಳು, ಸೀರೆಗಳು, ದೋತಿ, ಸಲ್ವಾರುಗಳು, ಮಧುಬನಿ ಪೈಂಟಿಂಗ್, ಕಲ್ಲಿನ ಉತ್ಪನ್ನ, ಚೆನ್ನಪಟ್ಟಣದ ಬೊಂಬೆಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ.

ಈ ಕರಕುಶಲ ಮೇಳವು ಡಿಸೆಂಬರ್ 31 ರವರೆಗೆ ನಡೆಯಲಿದ್ದು ಆನಂತರದಲ್ಲಿ ಪುನಃ 6.1.2017 ರಿಂದ 15.1.2017 ರವರೆಗೆ ನಡೆಯಲಿದೆ. ನಾಗರಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ಕರಕುಶಲ ಮೇಳದ ಸದುಪಯೋಗವನ್ನು ಪಡೆಯಲು ಕೋರಲಾಗಿದೆ.


Spread the love

Exit mobile version