ಪಿಲಿಕುಳದಲ್ಲಿ ಹಸುರೀಕರಣ ಯೋಜನೆಗಳ ಉದ್ಘಾಟನೆ ಮತ್ತು ವನ್ಯಜೀವಿ ಸಪ್ತಾಹದ ಆಚರಣೆ

Spread the love

ಪಿಲಿಕುಳದಲ್ಲಿ ಹಸುರೀಕರಣ ಯೋಜನೆಗಳ ಉದ್ಘಾಟನೆ ಮತ್ತು ವನ್ಯಜೀವಿ ಸಪ್ತಾಹದ ಆಚರಣೆ  

ಮಂಗಳೂರು: ಪಿಲಿಕುಳದಲ್ಲಿ ಭಾನುವಾರ  ಎಮ್.ಆರ್.ಪಿ.ಎಲ್.ರವರ ಪ್ರಯೋಜಕತ್ವದಲ್ಲಿ ಸಂಪೂರ್ಣ ಗೊಂಡ ಪ್ರಥಮ ಹಂತದ ಹಸುರೀಕರಣ ಯೋಜನೆಯ ಉದ್ಘಾಟನೆ ಮತ್ತು ಎರಡನೇ ಹಂತದ ಯೋಜನೆಯ ಪ್ರಾರಂಭೊತ್ಸವವು ನಡೆಯಲಿದೆ.

ಪ್ರಥಮ ಹಂತದಲ್ಲಿ ಇಪ್ಪತ್ತು ಎಕ್ರೆ ಪ್ರದೇಶದಲ್ಲಿ 2000ಕ್ಕೂ ಮಿಕ್ಕಿ ಪಶ್ಚಿಮ ಘಟ್ಟದ ವಿವಿಧ ತಳಿಯ ಸಸ್ಯಗಳನ್ನು, 1000 ಔಷಧಿಯ ಸಸ್ಯಗಳನ್ನು ನೆಡಲಾಗಿದೆ. ಜೊತೆಗೆ ಇದೇ ಪ್ರದೇಶದಲ್ಲಿ ಚಿಟ್ಟೆಗಳನ್ನು ಆಕರ್ಷಿಸುವ ಉದ್ದೇಶದಿಂದ ಸುಮಾರು 1000 ರಷ್ಟು ವಿವಿಧ ಚಿಟ್ಟೆಗಳಿಗೆ ಪ್ರಿಯವಾದ ಸಸ್ಯಗಳನ್ನು ನೆಡಲಾಗಿದೆ. ವಿವಿಧ ಜಾತಿಯ ತಾವರೆಗಳು, ಜಲ ಸಸ್ಯಗಳನ್ನು ನೆಡಲಾಗಿದೆ. ಜೈವಿಕ ಉದ್ಯಾನವನದಲ್ಲಿರುವ ಸುಮಾರು 300 ಕ್ಕೂ ಮಿಕ್ಕಿದ ಸಸ್ಯಹಾರಿ ಪ್ರಣಿಗಳಿಗೆ ತಿನಿಸಲು ನೇಪಿಯರ್ ಸಿ.ಒ.4 ಜಾತಿಯ ಮೇವನ್ನು ಬೆಳೆಸಲಾಗಿದೆ. ಮೃಗಾಲಯದ ಪ್ರಾಣಿ ಪಕ್ಷಿಗಳಿಗಾಗಿ ಬಾಳೆ, ಅನನಾಸು, ಕಬ್ಬು, ಗೆಡ್ಡೆಗೆಣಸುಗಳನ್ನು ಬೆಳೆಸಲಾಗಿದ್ದು, ಈ ಪ್ರದೇಶವು ಸಸ್ಯಶಾಸ್ತ್ರ ಅಧ್ಯಾಯನದ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ. ಪ್ರಥಮ ಹಂತದ 20 ಎಕ್ರೆ ನೆಡುತೋಪಿನ ರಚನೆಗೆ ಮೂರು ವರ್ಷಕ್ಕೆ ರೂ. 30 ಲಕ್ಷ ಮತ್ತು ಎರಡನೆ ಹಂತಕ್ಕೆ ರೂ. 40 ಲಕ್ಷ ರೂ ಯಮ್.ಆರ್.ಪಿ.ಎಲ್. ವ್ಯಯಸುತ್ತಿದೆ.

ಅದೇದಿನ ಬೆಳಗ್ಗೆ 9:30ರಿಂದ ಸಂಜೆ 4:00ರ ವರೆಗೆ ವನ್ಯಜೀವಿ ಸಪ್ತಾಹದ ಅಂಗವಾಗಿ ಸಾರ್ವಜನರಿಗೆ ವನ್ಯಜೀವಿ ಛಾಯಾಚಿತ್ರ, ವಿದ್ಯಾರ್ಥಿಗಳಿಗೆ ಛಾಯಚಿತ್ರ, ಚಿತ್ರಕಲಾ ಹಾಗೂ ಛದ್ಮವೇಷ ಸ್ಪರ್ಧೆಗಳು ನಡೆಯಲಿರುವುದು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮತ್ತು ಜನಪ್ರತಿನಿಧಿಗಳು ಆಗಮಿಸಲಿರುವರು.


Spread the love