ಪಿಲಿಕುಳವನ್ನು ಆಧುನಿಕ ಸಂಸ್ಕೃತಿ ಗ್ರಾಮವಾಗಿ ಪರಿವರ್ತನೆ: ಜೆ.ಆರ್.ಲೋಬೊ
ಮಂಗಳೂರು: ಪಿಲಿಕುಳವನ್ನು ಆಧುನಿಕ ಸಂಸ್ಕೃತಿ ಗ್ರಾಮವಾಗಿ ಮಾಡುವ ಪ್ರಯತ್ನದ ಫಲವಾಗಿ ಕೆರೆಗುದ್ದಲಿ ಪೂಜೆಯನ್ನು ಮಾಡುತ್ತಿರುವುದಾಗಿ ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.
ಅವರು ನಿನ್ನೆ ಪಿಲಿಕುಳದಲ್ಲಿ ಕೆರೆ ಗುದ್ದಲಿ ಪೂಜೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಈ ಕೆರೆ ಗ್ರಾಮೀಣ ಭಾಗದ ಹಿಂದಿನ ವಾತಾವರಣವನ್ನು ತೋರಿಸುತ್ತಿದೆ. ದನ ಕರುಗಳಿಗೆ ನೀರು, ಬಟ್ಟೆ ಒಗೆಯುವುದಕೇ ಹೀಗೆ ಬದುಕಿನ ಎಲ್ಲಾ ಆವಶ್ಯಕತೆಗಳಿಗೆ ಈ ಕೆರೆ ಸಾಕ್ಷಿಯಾಗುತ್ತಿದೆ ಎಂದರು.
ಈ ಕೆರೆಯನ್ನು ಮತ್ತೆ ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ನಮ್ಮ ಕೆರೆಗಳು ಹೇಗಿದ್ದವು ಮತ್ತು ಹೇಗೆ ಪರ್ಯಾವಸನ ಕಂಡವು ಎನ್ನುವುದು ಕೂಡಾ ಇಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಲೋಬೊ ತಿಳಿಸಿದರು.
ಇದನ್ನು ಮೊದಲು ಈ ಕೆರೆಯನ್ನು ಪುನರುಜ್ಜೀವನಗೊಳಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕೆಲಸಗಳನ್ನು ಕೈಗೊಂಡು ಎಲ್ಲರಿಗೂ ಪ್ರಯೋಜನವಾಗುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ ಎಂದರು.
ಈ ಕಾಮಗಾರಿಯನ್ನು 4-5 ತಿಂಗಳಲ್ಲಿ ನೀರಾವರಿ ಇಲಾಖೆ ಪೂರ್ಣಗೊಳಿಸುತ್ತದೆ ಎಂದು ಶಾಸಕ ಲೋಬೊ ಹೇಳಿದರು.
ಸಮಾರಂಭದಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಎನ್.ಜಿ.ಮೋಹನ್, ಪಿಲಿಕುಳದ ಕಾರ್ಯನಿರ್ವಾಹಕ ನಿರ್ದೇಶಕ ಗಾಯತ್ರಿ ನಾಯಕ್, ವಿಜ್ನಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್, ಪ್ರಾಜೆಕ್ಟ ಇಂಜಿನಿಯರ್ ಚಂದ್ರಕಾಂತ್, ಆಡಳಿತಾಧಿಕಾರಿ ಬಾಬು ದೇವಾಡಿಗ, ಕೊರ್ಡಿನೇಟರ್ ಮಹಮ್ಮದ್ ಬ್ಯಾರಿ, ಭುವನೇಶ್ವರ, ಸಣ್ಣ ನೀರಾವರಿ ಇಲಾಖೆಯ ಶೇಷಕೃಷ್ಣ ಹಾಗೂ ಕೆ.ಎಸ್.ಆರ್.ಟಿ ನಿರ್ದೇಶಕ ಟಿ.ಕೆ.ಸುಧೀರ್ ಮುಂತಾದವರಿದ್ದರು.