ಪಿಲಿಕುಳ ನಿಸರ್ಗಧಾಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ: ಶಾಸಕ ಜೆ.ಆರ್.ಲೋಬೊ
ಮಂಗಳೂರು: ಪಿಲಿಕುಳ ನಿಸರ್ಗಧಾಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಒಂದು ಮೃಗಾಲಯವಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.
ಅವರು ಪಿಲಿಕುಳದಲ್ಲಿ ವನ್ಯಜೀವಿ ಸಪ್ತಾಹದ ಉದ್ಘಾಟನೆ ಸಮಾರಂಭವನ್ನು ನೆರವೇರಿಸಿ ಮಾತನಾಡುತ್ತಿದ್ದರು.
ಇಲ್ಲಿರುವ ಕಾಳಿಂಗ ಸರ್ಪಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆಯನ್ನು ನಡೆಸಲಾಗಿದೆ ಎಂದ ಅವರು ಇಲ್ಲಿಯ ಪ್ರಕೃತಿಯನ್ನು ಪಶ್ಚಿಮ ಘಟ್ಟದ ಪರಿಸರಕ್ಕೆ ಅನುಗುಣವಾಗಿ ಬೆಳೆಸಿಕೊಂಡು ಬರಲು ಎಲ್ಲಾ ಪ್ರಯತ್ನವನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದರು.
ಮನುಕುಲದ ರಕ್ಷಣೆಗೆ ಪ್ರಕೃತಿಯ ಮಡಿಲ್ಲಿನಲ್ಲಿ ಬೆಳೆದು ಬಂದಿರುವ ಪ್ರಾಣಿ ಪಕ್ಷಿಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಪಿಲಿಕುಳ ಕೇವಲ ಮೃಗಾಲಯ ಮಾತ್ರವಲ್ಲ, ಮುಂದಿನ ಪೀಳಿಗೆಗೆ ಪರಿಸರದಲ್ಲಿ ಬೆಳೆದು ಬಂದಿರುವ ಸಸ್ಯ ಹಾಗೂ ಪ್ರಾಣಿಗಳ ಬಗ್ಗೆ ಅರಿವು ಮೂಡಿಸುವ ಅಧ್ಯಯನ ಕೇಂದ್ರವಾಗಬೇಕು ಎಂದು ಶಾಸಕ ಜೆ.ಆರ್.ಲೋಬೊ ನುಡಿದರು.
ಈ ಸಂದರ್ಭದಲ್ಲಿ ಶಾಸಕ ಜೆ.ಆರ್.ಲೋಬೊ ಅವರು ಪಿಲಿಕುಳಕ್ಕೆ ನೀಡಿದ ಅಪಾರ ಸೇವೆಯನ್ನು ಸ್ಮರಿಸಿದರು.
ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸಿನಿಂದ ಅರಸಿನ ಕುಂಕುಮ ಕಾರ್ಯಕ್ರಮ
ಮಂಗಳೂರು: ಮಂಗಳೂರು ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸಿನಿಂದ ಮನೆ ಮನೆಗೆ ಅರಸಿನ ಕುಂಕುಮ ವಿತರಣ ಕಾರ್ಯಕ್ರಮನ್ನು ನವರಾತ್ರಿಯ ಪರ್ವ ಕಾಲದಲ್ಲಿ ಹಮ್ಮಿಕೊಳ್ಳಲಾಯಿತು, ಇದರೊಂದಿಗೆ ಸರಕಾರದ ಕಾರ್ಯಕ್ರಮವನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಮಾಡಲಾಯಿತು. ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಡಿಯಲ್ಲಿ ಮಂಗಳಾದೇವಿಯ ಅಸುಪಾಸಿನಲ್ಲಿ ಮನೆಮನೆಗೆ ಬೇಟಿನೀಡಿ ಸರಕಾರದ ಹಾಗೂ ಪಕ್ಷದ ಸಾಧನೆಗಳ ಕಿರು ಪುಸ್ತಕವನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮವು ಬ್ಲಾಕ್ ಅಧ್ಯೆಕ್ಷೆ ಶ್ರೀಮತಿ ನಮಿತಾ ಡಿ ರಾವ್ ಇವರ ನೇತೃತ್ವ ದಲ್ಲಿ ಹಮ್ಮಿಕೊಳ್ಳಲಾಗಿತ್ತು . ಜಿಲ್ಲಾ ಮಹಿಳ ಕಾಂಗ್ರೆಸ್ ಅಧ್ಯೆಕ್ಷೆ ಶ್ರೀಮತಿ ಶಾಲೆಟ್ ಪಿಂಟೋ ಉದ್ಗಾಟಿಸಿದರು. ಕೆ ಪಿ ಸಿ ಸಿ ಮಹಿಳಾ ಕಾಂಗ್ರಸಿನ ಕಾರ್ಯದರ್ಶಿ ಕು. ಅಪ್ಪಿ, ಮಾಜಿ ಮೇಯರ್ ಶ್ರೀಮತಿ ಜೆಸಿಂತಾ ವಿಜಯ ಅಲ್ಪ್ರೆಡ್, ಡಿ.ಸಿ.ಸಿ ಸದಸ್ಯೆ ಶ್ರೀಮತಿ ಶೋಭಾ ಕೇಶವ, ಪರಿಶಿಷ್ಥ ಜಾತಿ/ ಪಂಗಡದ ಅದ್ಯಕ್ಷೆ ಶ್ರೀಮತಿ ವಿಜಯ ಲಕ್ಷ್ಮಿ, ನಗರಪಾಲಿಕಾ ಸದಸ್ಯರಾದ ಶ್ರೀಮತಿ ಆಶಾ ಡಿಸಿಲ್ವಾ, ಕೋಶಾಧಿಕಾರಿ ಶ್ರೀಮತಿ ಸರಳಾ ಕರ್ಕೇರ, ಗೀತಾ ಪ್ರವಿಣ್, ಜ್ಯೋತಿ ಬಜಾಲ್, ಸುಜಾತ ಅಹಲ್ಯ, ಕವಿತಾ ಶೆಟ್ಟಿ, ವಿಕ್ಟೋರಿಯ ಮಸ್ಕರೇನಸ್, ಗೀತಾ ಸುವರ್ಣ,ಮೇಬಲ್ ನೊರೊನ್ಹ, ಲವಿನಾ, ಮಾಲತಿ ಕುಂದರ್, ಸ್ಮೀತ, ಬೆನಡಿಕ್ಟ ಡಿ ಸೋಜ, ಪರಿಣಿತ ಕರ್ಕೇರ, ಅಮಿತಾ, ಸುರೇಖ ಕರ್ಕೇರ ಮತ್ತು ಇತರ ಮಹಿಳಾ ಕಾಂಗ್ರೆಸಿನ ಸದಸ್ಯೆಯರು ಭಾಗವಹಿಸಿದ್ದರು.
ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ : ಶಾಸಕ ಜೆ.ಆರ್.ಲೋಬೊ
ಮಂಗಳೂರು: ಶಾಸಕ ಜೆ.ಆರ್.ಲೋಬೊ ಅವರು 37 ನೇ ಮರೋಳಿ ವಾರ್ಡ್ ನ 47 ನೇ ಬೂತ್ ವತಿಯಿಂದ ನಡೆದ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪಕ್ಷದ ಸಾಧನೆಯ ಬಗ್ಗೆ ಕಾರ್ಯಕರ್ತರು ಶ್ರದ್ಧಯಿಂದ ಕೆಲಸ ಮಾಡುವಂತೆ ಕರೆ ನೀಡಿದರು.
ಕೇಂದ್ರದ ಬಿಜೆಪಿ ಸರ್ಕಾರದ ವೈಫಲ್ಯತೆಯ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವಂತೆ ತಿಳಿಸಿದರಲ್ಲದೇ ಮನೆ ಮನೆ ಭೇಟಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಯಶಸ್ವಿಯಾಗಲು ಶ್ರಮಿಸುವಂತೆ ಶಾಸಕ ಜೆ.ಆರ್.ಲೋಬೊ ಅವರು ಕರೆ ನೀಡಿದರು
ಮನೆ ಮನೆಗೆ ಕಾಂಗ್ರೆಸ್ ಯಾವ ಕರ್ಮಕ್ಕೆ? ಇವರು ಕೋಮುದ್ವೇಷ ಹರಡುವುದು ಇನ್ನು ಸಾಕು.