Home Mangalorean News Kannada News ಪಿಲಿಕುಳ ಮೃಗಾಲಯಕ್ಕೆ ಹೊಸ ವನ್ಯ ಜೀವಿಗಳ ಆಗಮನ

ಪಿಲಿಕುಳ ಮೃಗಾಲಯಕ್ಕೆ ಹೊಸ ವನ್ಯ ಜೀವಿಗಳ ಆಗಮನ

Spread the love

ಪಿಲಿಕುಳ ಮೃಗಾಲಯಕ್ಕೆ ಹೊಸ ವನ್ಯ ಜೀವಿಗಳ ಆಗಮನ

ಮಂಗಳೂರು: ಕೇಂದ್ರ ಮೃಗಾಲಯ ಪ್ರಾಧಿಕಾರದ ಪ್ರಾಣಿ ವಿನಿಮಯ ಯೋಜನೆಯಂತೆ ಪಿಲಿಕುಳ ಮತ್ತು ಮೈಸೂರು ಮೃಗಾಲಯಗಳ ಒಡಂಬಡಿಕೆ ಪ್ರಕಾರ ತಮ್ಮಲ್ಲಿರುವ ಹೆಚ್ಚುವರಿ ಮೃಗಗಳನ್ನು ವಿನಿಮಯ ಮಾಡಿಕೊಂಡಿವೆ.

ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಮೈಸೂರಿಂದ ಅಪರೂಪದ ನಾಲ್ಕು ಕಪ್ಪು ಹಂಸಗಳು, ಎರಡು ಪಟ್ಟೆ ಹೈನಗಳು ಮತ್ತು ಎರಡು ಕಾಡು ಕೋಣ ಮರಿಗಳು ಆಗಮಿಸಿದೆ. ಪಿಲಿಕುಳದಲ್ಲಿ ಕಾಡುಕೋಣಗಳ ಸಂಖ್ಯೆ ನಾಲ್ಕಕ್ಕೆ ಹೆಚ್ಚಿದೆ.

ಪಿಲಿಕುಳದಿಂದ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಎರಡು 3 ವರ್ಷ ಪ್ರಾಯದ ರಾಯಲ್ ಬೆಂಗಾಲ್ ಹುಲಿ, ನಾಲ್ಕು ಕಾಳಿಂಗ ಸರ್ಪ ಮತ್ತು ಎರಡು ಕಾಡು ಬಾತುಗಳನ್ನು ನೀಡಲಾಗಿದೆ.

ಕಪ್ಪು ಹಂಸಗಳು ಈಗಾಗಲೇ ವಿಕ್ಷಣೆಗೆ ಲಭ್ಯವಿದೆ. ಹೈನಗಳು ಒಂದು ವಾರದ ನಂತರ ಸಂದರ್ಶಕರಿಗೆ ವೀಕ್ಷಣೆಗೆ ಲಭ್ಯವಾಗಲಿದೆ.

ಶ್ರೀಘ್ರದಲ್ಲಿ ದೇಶದ ವಿವಿಧ ಮೃಗಾಲಯಗಳಿಂದ ಬಿಳಿ ಮತ್ತು ಕಂದ್ದು ರಿಯಾ ಪಕ್ಷಿಗಳು, ಎರಡು ಸ್ವೇಂಪ್ ಡೀರ್‍ಗಳು, ಒರ್‍ಯಂಟಾಲ್ ಡಾರ್ಟಾರ್ ಪಕ್ಷಿಗಳು, ಬಿಳಿ ಹುಲಿಗಳು ಆಗಮಿಸಲಿವೆ ಎಂದು ಮಂಗಳೂರು ಪಿಲಿಕುಳ ಜೈವಿಕ ಉದ್ಯಾವನ ನಿರ್ದೇಶಕ ಹೆಚ್.ಜೆ.ಭಂಡಾರಿ ಅವರ ಪ್ರಕಟಣೆ ತಿಳಿಸಿದೆ.


Spread the love

Exit mobile version