ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಖಗ್ರಾಸ ಚಂದ್ರಗ್ರಹಣ ವೀಕ್ಷಣೆ
ಮಂಗಳೂರು : ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಹವ್ಯಾಸಿ ಖಗೋಳಶಾಸ್ತ್ರಜ್ಞನರ ಸಂಘ ಮಂಗಳೂರು ಜಂಟಿಯಾಗಿ ಆಯೋಜಿಸಿದ ಖಗ್ರಾಸ ಚಂದ್ರಗ್ರಹಣದ ವೀಕ್ಷಣೆಯ ಕಾರ್ಯಕ್ರಮದಲ್ಲಿ ಶತಮಾನದ ಸುಧೀರ್ಘ ಚಂದ್ರಗ್ರಹಣವನ್ನು ಸಾರ್ವಜನಿಕರು ಕುತೂಹಲದಿಂದ ಕಣ್ತುಂಬಿಕೊಂಡರು.
ಶುಕ್ರವಾರ ರಾತ್ರಿ 11.54ಕ್ಕೆ ಗ್ರಹಣ ಸ್ಪರ್ಶವಾಗಿ 1 ಗಂಟೆಗೆ ಖಗ್ರಾಸ ಗ್ರಹಣವಾಗಿ ಮುಂಜಾನೆ 2.43ಕ್ಕೆ ಮೋಕ್ಷವಾಯಿತು. ಗ್ರಹಣದ ವೀಕ್ಷಣೆಯೊಂದಿಗೆ ಹತ್ತಿರದಲ್ಲಿ ಕಂಗೊಳಿಸುತ್ತಿದ್ದ ಮಂಗಳನ ದರ್ಶನವೂ ವೀಕ್ಷಕರಿಗೆ ಲಭಿಸಿತು.
ದೂರದರ್ಶಕ ಮತ್ತು ದುರ್ಬೀನುಗಳ ಮೂಲಕ ಈ ಅಪೂರ್ವ ವಿದ್ಯಮಾನಗಳ ವಿಕ್ಷಣೆಯ ಸಂಧರ್ಭದಲ್ಲಿ ಮೋಡಗಳ ದೆಸೆಯಿಂದ ಆಗಾಗ ಅಡಚಣೆಯುಂಟಾದರೂ ವೀಕ್ಷಕರು ತಾಳ್ಮೆಯಿಂದ ಈ ಸಮಯದಲ್ಲಿ ಹವ್ಯಾಸಿ ಖಗೋಳಶಾಸ್ತ್ರಜ್ಞ ಡಾ| ಜಯಂತ್ ಅವರು ನೀಡುತ್ತಿದ್ದ ವಿವರಣೆಗಳನ್ನು ಕೇಳಿ ಸಂಶಯಗಳನ್ನು ಪರಿಹರಿಸಿ ಕೊಂಡರು.