Home Mangalorean News Kannada News ಪುತ್ತೂರು: ಅ.10 ರಂದು ನವೀಕೃತ ಡಾ. ಶಿವರಾಮ ಕಾರಂತ ನಿವಾಸ ಲೋಕಾರ್ಪಣೆ

ಪುತ್ತೂರು: ಅ.10 ರಂದು ನವೀಕೃತ ಡಾ. ಶಿವರಾಮ ಕಾರಂತ ನಿವಾಸ ಲೋಕಾರ್ಪಣೆ

Spread the love

ಪುತ್ತೂರು: ಅ.10 ರಂದು ನವೀಕೃತ ಡಾ. ಶಿವರಾಮ ಕಾರಂತ ನಿವಾಸ ಲೋಕಾರ್ಪಣೆ

ಮ0ಗಳೂರು : ಕನ್ನಡ ಮತ್ತು ಸಂಸ್ಕøತಿ ಇಲಾಖೆ ಡಾ. ಶಿವರಾಮ ಕಾರಂತ ಬಾಲವನ ಸಮಿತಿ ಮತ್ತು ಸಹಾಯಕ ಆಯುಕ್ತರ ಕಛೇರಿ ಪುತ್ತೂರು ಇವುಗಳ ಸಹಯೋಗದಲ್ಲಿ ಪುತ್ತೂರು ಬಾಲವನದಲ್ಲಿ ಅಕ್ಟೋಬರ್ 10 ರಂದು ಪುನಶ್ಚೇತನಗೊಂಡಿರುವ ಡಾ. ಶಿವರಾಮ ಕಾರಂತರ ನಿವಾಸದ ಲೋಕಾರ್ಪಣೆ, ಬಾಲವನ ಪ್ರಶಸ್ತಿ ಪ್ರದಾನ, ವಿಚಾರಗೋಷ್ಠಿ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸಂಸ್ಮರಣೆ ಮತ್ತು ಜ್ಯೋತಿಪ್ರಜ್ವಲನೆಯನ್ನು ದ.ಕ. ಜಿಲ್ಲೆಯ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಅವರು ನೆರವೇರಿಸಲಿವರು. ಕನ್ನಡ ಮತ್ತು ಸಂಸ್ಕøತಿ ಸಚಿವೆ ಉಮಾಶ್ರೀ ಪುನಶ್ಚೇತನಗೊಂಡಿರುವ ಶಿವರಾಮ ಕಾರಂತರ ನಿವಾಸವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಕಾರಂತರ ವಸ್ತು ಸಂಗ್ರಹಾಲಯ ಉದ್ಘಾಟಿಸುವರು. . ಈ ಸಂದರ್ಭದಲ್ಲಿ 2017ರ ಬಾಲವನ ಪ್ರಶಸ್ತಿಯನ್ನು ಖ್ಯಾತ ಲೇಖಕಿ ವೈದೇಹಿಯರಿಗೆ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕಿ ಶಕುಂತಳಾ ಟಿ. ಶೆಟ್ಟಿ ವಹಿಸುವರು.

ಅಪರಾಹ್ನ 2.30ರಿಂದ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಎಚ್. ಮಾಧವ ಭಟ್ ಇವರ ಅಧ್ಯಕ್ಷತೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಶಿವರಾಮಕಾರಂತರ ಸಾಹಿತಗಳ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಸಂಜೆ 5 ಗಂಟೆಯಿಂದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಾಧನಾ ಸಂಗೀತ ಶಾಲೆ ಕೊಂಬೆಟ್ಟು ಮತ್ತು ಗಾನ ಸರಸ್ವತಿ ಸಂಗೀತ ವಿದ್ಯಾಲಯ ನೆಹರುನಗರ ಇವರಿಂದ ಸುಗಮ ಸಂಗೀತ ಕಾರ್ಯಕ್ರಮವಿದೆ. ಅನಂತರ ಉಡುಪಿಯ ಯಕ್ಷಗಾನ ಕಲಾಕೇಂದ್ರದ ಸದಸ್ಯರಿಂದ ಚಕ್ರವ್ಯೂಹ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.


Spread the love

Exit mobile version