ಬೆಂಗಳೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆಲಸ ಕಾರ್ಯಗಳಲ್ಲಿ ದಕ ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ಭಾಗಿಯಾಗಬಾರದು ಎಂದು ರಾಜ್ಯ ಹೈಕೋರ್ಟಿನ ವಿಭಾಗೀಯ ಪೀಠ ಬುಧವಾರ ಮಹತ್ವದ ತೀರ್ಪು ನೀಡಿದೆ.
ದೇವಸ್ಥಾನದ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಹಿಂದುಯೇತರ ವ್ಯಕ್ತಿಯಾಗಿರುವ ಜಿಲ್ಲಾಧಿಕಾರಿಯವರು ಮಹೋತ್ಸವಕ್ಕೆ ಆಹ್ವಾನ ನೀಡಿರುವುದನ್ನು ವಿರೋಧಿಸಿ ಹಲವು ದಿನಗಳಿಂದ ಹಿಂದು ಸಂಘಟನೆಯಗಳು ಹಾಗೂ ಭಕ್ತಾದಿಗಳು ಪ್ರತಿಭಟಿಸುತ್ತಿದ್ದು, ಈ ಕುರಿತು ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಮುರು ಮುದ್ರಿಸಬೇಕು ಎಂದು ಸಾರ್ವಜನಿಕ ಹಿತಸಾಕ್ತಿಯ ಅರ್ಜಿಯನ್ನು ಹೈಕೋರ್ಟಿನಲ್ಲಿ ದಾಖಲಿಸಿದ್ದು, ಅದರ ವಿಚಾರಣೆ ನಡೆಸಿದ ಹೈಕೋರ್ಟಿನ ವಿಭಾಗೀಯ ಪೀಠ ಬುಧವಾರ ನೀಡಿರುವ ತೀರ್ಪಿನಲ್ಲಿ ದಕ ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ಅವರಿಗೆ ದೇವಸ್ಥಾನದ ಕೆಲಸಗಳಲ್ಲಿ ಭಾಗಿಯಾಗಿರುವುದಕ್ಕೆ ನಿರ್ಭಂಧ ವಿಧಿಸಿ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಇದೇ ವೇಳೆ ಆಮಂತ್ರಣ ಪತ್ರಿಕೆಯಯನ್ನು ಮರುಮುದ್ರಣ ಮಾಡಲು ನ್ಯಾಯಾಲಯ ಆದೇಶದ ನೀಡಿದೆ
Why is state involved in religious business? This is such a mess!! This issue wouldn’t have happened had we separated state from religion. Starting from temple management, revenue collection to printing invitation letter are controlled by state!! What a sad situation!