ಪುತ್ತೂರು ಪೋಲಿಸರಿಂದ ದಾಖಲೆ ರಹಿತ ರೂ. 18.80 ಲಕ್ಷ ಹಣ ವಶ; ಮೂವರ ಬಂಧನ
ಮಂಗಳೂರು: ದಾಖಲೆ ರಹಿತ ಅಕ್ರಮ ಹಣ ಹೊಂದಿದ ಆರೋಪಿಗಳನ್ನು ಬಂಧಿಸುವಲ್ಲಿ ಪುತ್ತೂರು ನಗರ ಠಾಣೆಯ ಪೋಲಿಸರು ಬುಧವಾರ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಗೋಳ್ತಮಜಲು ನಿವಾಸಿ ಜಾಫರ್ ಶರೀಫ್ (29), ನಜೀರ್ (25) ಮತ್ತು ಮಹಮ್ಮದ್ ಇಕ್ಬಾಲ್ (26) ಎಂದು ಗುರುತಿಸಲಾಗಿದೆ.
ಬಂಧಿತರಿಂದ 2000 ಮುಖಬೆಲೆಯ 16.80ಲಕ್ಷ ರೂ ಗಳ ಹೊಸ ನೋಟುಗಳು, 100 ರೂ ಮುಖಬೆಲೆಯ ರೂ 1,90, 700 , ಹಾಗೂ ರೂ 50 ಮುಖಬೆಲೆಯ ರೂ 9300 ಚಾಲ್ತಿಯಲ್ಲಿರುವ ನೋಟುಗಳು ಒಟ್ಟು ಸೇರಿ ರೂ 18.80 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಬಂಧಿತರಿಂದ ರಿಡ್ಜ್ ಕಾರನ್ನೂ ಕೂಡ ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೋಲಿಸ್ ಅಧಿಕ್ಷರಾರದ ಭೂಷಣ್ ಗುಲಾಬ್ ರಾವ್ ಬೋರಸೆ ಅವರ ನಿರ್ದೇಶನದಂತೆ, ಹೆಚ್ಚುವರಿ ಎಸ್ಪಿ ಡಾ ವೇದಮೂರ್ತಿರವರ ಮಾರ್ಗದರ್ಶನದಂತೆ, ಪುತ್ತೂರು ಉಪವಿಭಾಗದ ಅಧೀಕ್ಷರಾದ ರಿಷ್ಯಂತ್ ಸಿಬಿ, ಆದೇಶದಂತೆ, ಪುತ್ತೂರು ನಗರ ಠಾಣೆಯ ಪೋಲಿಸ್ ನಿರೀಕ್ಷರಾದ ಮಹೇಶ್ ಪ್ರಸಾದ್, ಪಿಎಸ್ ಐ ಅಬ್ದುಲ್ ಖಾದರ್, ಪುತ್ತೂರು ಗ್ರಾಮಾಂತರ ಠಾಣೆಯ ಸಿಬಂದಿಗಾಳದ ಚಂದ್ರ, ವಿನಯ್ ಕುಮಾರ್, ರವೂಫ್, ನಗರಠಾಣೆಯ ಸ್ಕರೀಯ ಹೆಚ್ ಸಿ, ಪ್ರಶಾಂತ್ ರೈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.