ಪುತ್ತೂರು : ಬಸ್ಸಿಗೆ ಕಲ್ಲು ತೂರಾಟ – ಐವರ ಬಂಧನ
ಮಂಗಳೂರು: ಖಾಸಗಿ ಬಸ್ಸು ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದ ಸಮಯದಲ್ಲಿ ಕಿಡಿಗೇಡಿಗಳು ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಪ್ರಕರಣದಲ್ಲಿ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಸಿಧ್ದೀಕ್ (33 ವರ್ಷ), ಕೆ ಹಂಝ (38 ವರ್ಷ), ಅಭೀಬ್ ಫೈಸಲ್ ( 29 ವರ್ಷ) ಅಬ್ದುಲ್ ಸಮೀರ್ (30ವರ್ಷ) ಹಾಗೂ ಪುತ್ತೂರು ಕೊಡಿಪ್ಪಾಡಿ ನಿವಾಸಿ 5.ಇಸ್ಮಾಯಿಲ್ (23ವರ್ಷ) ಎಂದು ಗುರುತಿಸಲಾಗಿದೆ.
ಸೋಮವಾರ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಬಕ ಗ್ರಾಮದ ಪೋಳ್ಯ ಖಾಸಗೀ ಬಸ್ ಮತ್ತು ಕಾರಿನ ಮಧ್ಯೆ ಅಫಘಾತ ಸಂಭವಿಸಿದ್ದು ಈ ಅಫಘಾತದಲ್ಲಿ ಕಾರು ಚಾಲಕ ಅಬ್ದುಲ್ ಹಕೀಂ ಎಂಬವರು ಮೃತಪಟ್ಟಿರುತ್ತಾರೆ. ಇದರಿಂದ ಕೋಪಗೊಂಡ ಆರೋಪಿಗಳು ಬಸ್ಸಿಗೆ ಕಲ್ಲು ತೂರಾಟ ನಡೆಸಿದ್ದು ಅದರ ಪರಿಣಾಮ ಬಸ್ಸಿನ ಹಿಂದಿನ ಮುಂದಿನ ಹಾಗೂ ಎರಡೂ ಬದಿಯ ಎಲ್ಲಾ ಗ್ಲಾಸ್ ಗಳನ್ನು ಪುಡಿ ಮಾಡಿರುತ್ತಾರೆ ಹಾಗೂ ಬಸ್ ನ ಬಾಡಿಯನ್ನು ಹಾನಿಗೊಳಿಸಿರುತ್ತಾರೆ. ಇದರಿಂದ ಬಸ್ಸಿಗೆ ಅಂದಾಜು 60,000/- ರೂ ಮೌಲ್ಯದ ನಷ್ಟ ಉಂಟಾಗಿರುತ್ತದೆ.
ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ.