ಪುತ್ತೂರು | ರಬ್ಬರ್ ಟ್ಯಾಪಿಂಗ್ಗೆ ತೆರಳಿದ್ದ ವೇಳೆ ಕಾಡಾನೆ ದಾಳಿ: ಮಹಿಳೆ ಮೃತ್ಯು
ಪುತ್ತೂರು : ಇಲ್ಲಿನ ಕೊಳ್ತಿಗೆ ಗ್ರಾಮದ ಕಣಿಯಾರು ಮಲೆ ಅರ್ತಿಯಡ್ಕ ಸಿಆರ್ಸಿ ಕಾಲನಿ ಬಳಿ ಕಾಡಾನೆ ದಾಳಿಗೆ ತುತ್ತಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಪೆರ್ಲಂಪಾಡಿ ಸಮೀಪದ ಅರ್ತಿಯಡ್ಕ ಎಂಬಲ್ಲಿನ ನಿವಾಸಿ ಮೃತಪಟ್ಟ ಮಹಿಳೆ.
ಮಂಗಳವಾರ ಮುಂಜಾನೆ ಮಹಿಳೆ ಸಹಿತ ಮೂವರು ರಬ್ಬರ್ ಟ್ಯಾಪಿಂಗ್ಗೆ ಮಾಡಲು ತೆರಳಿದ್ದರು. ಈ ಸಂದರ್ಭದಲ್ಲಿ ಕಣಿಯಾರು ಮಲೆ ಎಂಬಲ್ಲಿ ಅವರನ್ನು ಆನೆ ಅಟ್ಟಿಸಿಕೊಂಡು ಬಂದಿತ್ತು. ಈ ವೇಳೆ ಉಳಿದ ಇಬ್ಬರು ಓಡಿ ತಪ್ಪಿಸಿಕೊಂಡಿದ್ದರು. ಮಹಿಳೆಯೂ ಓಡುವ ಸಂದರ್ಭದಲ್ಲಿ ಬಿದ್ದಿದ್ದರು. ಆಗ ಆನೆಯು ಅವರ ಮುಖ ಮತ್ತು ಹೊಟ್ಟೆಯ ಭಾಗಕ್ಕೆ ತುಳಿದಿತ್ತು. ಇದರಿಂದಾಗಿ ಅವರು ಸ್ಥಳ ದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಅಗಮಿಸಿ ಪರಿಶೀಲನೆ ನಡೆಸಿದ್ದಾರೆ