ಪೆಟ್ರೋಲ್, ಡಿಸೇಲ್ ಹೆಸರಿನಲ್ಲಿ ಮೋದಿ ಸರಕಾರದಿಂದ ಹಗಲು ದರೋಡೆ -ಹರೀಶ್ ಕಿಣಿ
ಉಡುಪಿ: ಅಧಿಕಾರಕ್ಕೆ ಬಂದ 4 ವರ್ಷಗಳಲ್ಲಿ 9 ಬಾರಿ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು ಏರಿಸುವುದರ ಮೂಲಕ ಕೇಂದ್ರದ ಬಿ.ಜೆ.ಪಿ. ನೇತೃತ್ವದ ಮೋದಿ ಸರಕಾರ ದೇಶದಜನರ ಹಗಲು ದರೋಡೆ ನಡೆಸುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಅಲೆವೂರು ಹರೀಶ್ ಕಿಣಿ ಆರೋಪಿಸಿದ್ದಾರೆ.
2013ರಲ್ಲಿ ಕಚ್ಚಾ ತೈಲದ ಬೆಲೆ ಪ್ರತೀ ಬ್ಯಾರೆಲ್‍ಗೆ 120ಕ್ಕೂ ಹೆಚ್ಚು ಡಾಲರ್‍ಗಳಿದ್ದಾಗ ಪ್ರತೀ ಲೀಟರ್ ಪೆಟ್ರೋಲ್ ದರ 70ರೂ. ಮತ್ತು ಡಿಸೇಲ್ ದರ 60ರೂ.ಗಳಿತ್ತು. ಅಂದು ಕಾಂಗ್ರೆಸ್ ನೇತೃತ್ವದ ಮನಮೋಹನ್ ಸಿಂಗ್ ಸರಕಾರ ದೇಶದಲ್ಲಿತ್ತು. ಆದರೆ ಇದೀಗ ಕಚ್ಚಾತೈಲದ ಬೆಲೆ ಬ್ಯಾರಲ್ 65 ಡಾಲರ್‍ಗಳಾದರೂ ಪ್ರತೀ ಲೀಟರ್ ಪೆಟೋಲ್ ಬೆಲೆ 75ರೂ. ಮತ್ತು ಡಿಸೇಲ್ ಬೆಲೆ ಪ್ರತೀ ಲೀಟರ್‍ಗೆ 65ರೂ. ಗಳಾಗಿವೆ.
ಅಂದು ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮೊದಲು ನೆರೆಯ ರಾಜ್ಯಗಳಿಗೆ ಹೋಲಿಸಿದಾಗ ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಅತೀ ಹೆಚ್ಚಾಗಿತ್ತು. 2 ಬಾರಿ ರಾಜ್ಯದ ಪೆಟ್ರೋಲ್ ಹಾಗೂ ಡಿಸೀಲ್ ಮೇಲಿನ ತೆರಿಗೆ ಕಡಿಮೆ ಮಾಡಿ ಇಂದು ನೆರೆಯ ರಾಜ್ಯಗಳಿಗೆ ಹೋಲಿಸಿದಾಗ ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಅತೀ ಕಡಿಮೆ ಇದೆ.
ಕೂಡಲೇ ಮೋದಿ ಸರಕಾರ ಹಗಲು ದರೋಡೆ ನಿಲ್ಲಿಸಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಇಳಿಸಿ ದೇಶದ ಜನರಿಗೆ ನ್ಯಾಯ ಒದಗಿಸಬೇಕು ಎಂದು ಅಲೆವೂರು ಹರೀಶ್ ಕಿಣಿ ಆಗ್ರಹಿಸಿದ್ದಾರೆ.
hi Harish Kini, since petrol price is more and people are suffering in our state, please inform congress govt in our state to provide subsidy of around 30 rupees with generosity, this will be a good move so that people will vote Congress.