ವಿಟ್ಲ: ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಫಾತಿಮಾ ಮಾತೆಯ ಚರ್ಚ್ ನ ನೂತನ ಧರ್ಮಗುರುಗಳಾಗಿ ವಂದನೀಯ ಫಾ.ವಿನೋದ್ ಲೋಬೊ ಅಧಿಕಾರ ಸ್ವೀಕರಿಸಿದ್ದಾರೆ.
ನೂತನ ಧರ್ಮಗುರುಗಳಾದ ಫಾ.ವಿನೋದ್ ಲೋಬೊರನ್ನು ಚರ್ಚ್ ಗೆ ಊರ ಭಕ್ತರು ಮತ್ತು ಚರ್ಚ್ ಆಡಳಿತದ ಪರವಾಗಿ ಗೌರವಪೂರ್ವಕವಾಗಿ ಸ್ವಾಗತಿಸಲಾಯಿತು. ಈ ವೇಳೆ ಭಕ್ತರು ಧರ್ಮಗುರುಗಳಿಗೆ ಹೂವಿನ ಹಾರ ಹಾಕಿ ಬರಮಾಡಿಕೊಂಡರು. ಈ ಬಳಿಕ ಪ್ರಾರ್ಥನ ವಿಧಿ ನೆರವೇರಿಸಿ ಅಧಿಕೃತವಾಗಿ ಅಧಿಕಾರವನ್ನು ಹಸ್ತಾಂತರಿಸಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಫಾ.ವಿನೋದ್ ಲೋಬೋ, ಫಾತಿಮಾ ಮಾತೆಯ ನೂತನ ಧರ್ಮಗುರುವಾಗಿ ಅಧಿಕಾರ ಸ್ವೀಕರಿಸಿದ್ದು ಅತೀವ ಸಂತೋಷ ತಂದಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಮುಂದೆ ಈ ದೇವಾಲಯದಲ್ಲಿ ಕಾರ್ಯನಿರ್ವಹಿಸಲು ದೇವರ ಅನುಗ್ರಹ ಬೇಡುತ್ತೇನೆ ಎಂದು ತಿಳಿಸಿದರು.
ಉಳಿದಂತೆ ಈ ಅದ್ದೂರಿ ಕಾರ್ಯಕ್ರಮದಲ್ಲಿ ವಿವಿಧ ಚರ್ಚ್ ನ ಧರ್ಮಗುರುಗಳು, ಸಾವಿರಾರು ಭಕ್ತರು, ಇತರೆ ಚರ್ಚ್ ಗಳ ಅನುಯಾಯಿಗಳು ಪಾಲ್ಗೊಂಡಿದ್ದರು. ಫಾ.ಅಂಡ್ರೋ ಡಿ’ಕೋಸ್ತಾ, ಫಾ.ಆಲ್ಫ್ರೆಡ್ ಪಿಂಟೋ, ಮಾರ್ಕ್ ಕ್ಯಾಸ್ಟಲಿನೋ, ಚರ್ಚಿನ ಉಪಾಧ್ಯಕ್ಷರಾದ ವಿಕ್ಟರ್, ಕಾರ್ಯದರ್ಶಿ ಪ್ರವೀಣ್ ಕುಟಿನ್ಹೋ ಉಪಸ್ಥಿತರಿದ್ದರು.
by Wilfy Dsouza