ಪೇಸ್ ಬುಕ್ ನಕಲಿ ಖಾತೆ ಮಾಡಿದ ಹೊರ ರಾಜ್ಯದ ಆರೋಪಿ ಬಂಧನ
ಮಂಗಳೂರು: ಪೇಸ್ ಬುಕ್ ನಕಲಿ ಖಾತೆ ಸೃಷ್ಟಿಸಿ ಅಸಭ್ಯ ಭಾವಚಿತ್ರ ಹಾಗೂ ಬೇಡದ ಸಂದೇಶ ಹಾಕಿದ ವ್ಯಕ್ತಿಯನ್ನು ಕಂಕನಾಡಿ ಪೋಲಿಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಛತ್ತೀಸ್ ಘಡ ರಾಜ್ಯದ ನಂದಗಾವ್ ನಿವಾಸಿ ತೋರನ್ ಲಾಲ್ ರಾವಟೆ (23) ಎಂದು ಗುರುತಿಸಲಾಗಿದೆ.
ಆರೋಪಿ ತೋರನ್ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ ಫಿರ್ಯಾದಿದಾರರ ಭಾವಚಿತ್ರ ಹಾಗೂ ಅಸಭ್ಯ ಭಾವಚಿತ್ರ ಹಾಗೂ ಬೇಡದ ಸಂದೇಶ ಹಾಕಿದ್ದು ಈ ಕುರಿತು ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ಆರೋಪಿಯು ಯೆಯ್ಯಾಡಿಯಲ್ಲಿರುವುದಾಗಿ ಮಾಹಿತ ಬಂದಂತೆ ಪೋಲಿಸ್ ನೀರಿಕ್ಷಕ ರವಿ ನಾಯ್ಕ ತಮ್ಮ ಸಿಬಂದಿಯೊಂದಿಗೆ ತೆರಳಿ ಆತನನ್ನು ದಸ್ತಗಿರಿ ಮಾಡಿದ್ದು, ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಕಾರ್ಯಾಚರಣೆಯಲ್ಲಿ ನಗರ ಪೋಲಿಸ್ ಆಯುಕ್ತ ಟಿ ಆರ್ ಸುರೇಶ್, ಕಾನೂನು ಮತ್ತು ಸುವ್ಯವಸ್ಥೆ ಉಪ ಪೋಲಿಸ್ ಆಯಕ್ತರಾದ ಹನುಮಂತರಾಯ, ದಕ್ಷಿಣ ಉಪವಿಭಾಗದ ಸಹಾಯಕ ಪೋಲಿಸ್ ಆಯುಕ್ತ ಕೆ ರಾಮರಾವ್ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಕಂಕನಾಡಿ ನಗರ ಪೋಲಿಸ್ ನಿರೀಕ್ಷಕರಾದ ರವಿ ನಾಯ್ಕ್ ನೇತೃತ್ವದಲ್ಲಿ ಗಿಲ್ಬರ್ಟ್ ಡಿಸೋಜ, ಮದನ್, ಮೇಘರಾಜ್, ನೂತನ್ ಕುಮಾರ್, ಸಂದೀಪ್ ಕಾರ್ಯಚರಣೆಯಲ್ಲಿ ಭಾಗಿವಹಿಸಿರುತ್ತಾರೆ.