Home Mangalorean News Kannada News ಪೊಲೀಸರು, ಅಧಿಕಾರಿಗಳು ಸೇರಿದಂತೆ ಕೊರೋನಾ ಪಾಸಿಟಿವ್ ಬಂದವರನ್ನು ಸಂಶಯದಿಂದ ನೋಡಬೇಡಿ – ಜಿಲ್ಲಾಧಿಕಾರಿ ಜಿ ಜಗದೀಶ್

ಪೊಲೀಸರು, ಅಧಿಕಾರಿಗಳು ಸೇರಿದಂತೆ ಕೊರೋನಾ ಪಾಸಿಟಿವ್ ಬಂದವರನ್ನು ಸಂಶಯದಿಂದ ನೋಡಬೇಡಿ – ಜಿಲ್ಲಾಧಿಕಾರಿ ಜಿ ಜಗದೀಶ್

Spread the love

ಪೊಲೀಸರು, ಅಧಿಕಾರಿಗಳು ಸೇರಿದಂತೆ ಕೊರೋನಾ ಪಾಸಿಟಿವ್ ಬಂದವರನ್ನು ಸಂಶಯದಿಂದ ನೋಡಬೇಡಿ – ಜಿಲ್ಲಾಧಿಕಾರಿ ಜಿ ಜಗದೀಶ್

ಉಡುಪಿ: ಕೆಲವೊಂದು ಪೊಲೀಸರಿಗೆ ಕೊರೋನಾ ಪಾಸಿಟಿವ್ ಬಂದ ಕೂಡಲೇ ಅವರನ್ನು ಅಶ್ಪ್ರಶ್ಯರಂತೆ ನೋಡಬಾರದು ಪೊಲೀಸರು, ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಕೊರೋನಾ ವಾರಿಯರ್ಸ್ ಗಳು ಅವರ ಬಗ್ಗೆ ಸಾರ್ವಜನಿಕರಿಗೆ ಹೆಚ್ಚು ಗೌರವ ಬರಬೇಕು ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದ್ದಾರೆ.

ಈ ಬಗ್ಗೆ ಗುರುವಾರ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 9 ಮಂದಿ ಪೊಲೀಸರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಒಂದು ಹಂತದಲ್ಲಿ ಆತಂಕವನ್ನುಂಟು ಮಾಡಿತ್ತು. ಆದರೆ ಈಗ ಎಲ್ಲಾ 9 ಮಂದಿ ಪೊಲೀಸರ ವರದಿ ನೆಗೆಟಿವ್ ಬಂದಿದ್ದು ಅವರನ್ನೆಲ್ಲಾ ಡಿಸ್ಚಾರ್ಜ್ ಮಾಡುತ್ತಿದ್ದೇವೆ ಇದು ನಮಗೆ ಅತೀವ ಸಂತಸ ತರುವ ವಿಚಾರವಾಗಿದೆ.

ಪೊಲೀಸರು, ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಕೊರೋನಾ ವಾರಿಯರ್ಸ್ ಗಳು ಗಳಾಗಿದ್ದು ಅವರಿಗೆಲ್ಲಗೂ ನಾನು ಧನ್ಯವಾದ ಸಲ್ಲಿಸುತ್ತೇನೆ. ಕೋರೋನಾ ಬಂದ ಪೊಲೀಸರು ಅಥವಾ ಸಾರ್ವಜನಿಕರನ್ನು ಯಾರೂ ಕೂಡ ಅಸ್ಪೃಶ್ಯರಂತೆ ನೋಡಬಾರದು. ಪೊಲೀಸರು ಸಾಂಕ್ರಾಮಿಕದ ವಿರುದ್ಧ ಹೋರಾಟದ ಯೋಧರು ಆದ್ದರಿಂದ ಪೊಲೀಸರ ಮೇಲೆ ಸಾರ್ವಜನಿಕರಿಗೆ ಹೆಚ್ಚು ಗೌರವ ಬರಬೇಕು ಎಂದರು.

ಉಡುಪಿ ಜಿಲ್ಲೆಯಲ್ಲಿ ಪಾಸಿಟಿವ್ ಬರುವವರ ಸಂಖ್ಯೆ ಹೆಚ್ಚಿದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ 68 ಕಂಟೈನ್ಮೆಂಟ್ ಜೋನ್ ಮಾಡಲಾಗಿದೆ. ಸರಕಾರದ ಹೊಸ ನೀತಿಯ ಹಿನ್ನಲೆಯಲ್ಲಿ ಸಣ್ಣ ವ್ಯಾಪ್ತಿಯನ್ನು ಕಂಟೈನ್ಮೆಂಟ್ ಮಾಡಲಾಗುತ್ತಿದೆ. ಕಂಟೈನ್ಮೆಂಟ್ ಝೋನ್ ವ್ಯಾಪ್ತಿಯಲ್ಲಿನ ಜನರು ಯಾವುದೇ ಕಾರಣಕ್ಕೂ ಹೊರಗಡೆ ಬರಲು ಅವಕಾಶವಿಲ್ಲ. ಕಂಟೈನ್ಮೆಂಟ್ ಗೆ ಅಗತ್ಯ ವಸ್ತುಗಳ ಪೂರೈಕೆ ಜಿಲ್ಲಾಡಳಿತ ಮಾಡಲಿದೆ ಎಂದರು.

ಸರಕಾರದ ಹೊಸ ನಿಯಮಾವಳಿಯಲ್ಲಿ ಹೊರಗಡೆಯಿಂದ ಬಂದವರು 28 ದಿನ ಮನೆಯಲ್ಲಿ ಕ್ವಾರಂಟೈನ್ ಆಗಬೇಕು. ಅಂತಹವರು ಯಾವುದೇ ಕ್ಷಣದಲ್ಲಿ ಕೊರೋನಾ ಲಕ್ಷಣ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸೆಲ್ಫ್ ರಿಪೋರ್ಟಿಂಗ್ ಅವಧಿಯನ್ನು ನಿಷ್ಠೆಯಿಂದ ಪಾಲಿಸಬೇಕು ಎಂದರು


Spread the love

Exit mobile version