Home Mangalorean News Kannada News ಪೊಲೀಸರ ಮೇಲೆ  ಹಲ್ಲೆ ನಡೆದಾಗ ಅನಿವಾರ್ಯವಾಗಿ ಬಲಪ್ರಯೋಗ- ಡಾ. ಪಿ. ಎಸ್. ಹರ್ಷ

ಪೊಲೀಸರ ಮೇಲೆ  ಹಲ್ಲೆ ನಡೆದಾಗ ಅನಿವಾರ್ಯವಾಗಿ ಬಲಪ್ರಯೋಗ- ಡಾ. ಪಿ. ಎಸ್. ಹರ್ಷ

Spread the love
RedditLinkedinYoutubeEmailFacebook MessengerTelegramWhatsapp

ಪೊಲೀಸರ ಮೇಲೆ  ಹಲ್ಲೆ ನಡೆದಾಗ ಅನಿವಾರ್ಯವಾಗಿ ಬಲಪ್ರಯೋಗ- ಡಾ. ಪಿ. ಎಸ್. ಹರ್ಷ

ಮಂಗಳೂರು : ಪೊಲೀಸ್ ಠಾಣೆ ಮೆಲೆ ದಾಳಿ ನಡೆಸಿ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದಾಗ ಅನಿವಾರ್ಯವಾಗಿ ಬಲಪ್ರಯೋಗ ಮಾಡಲಾಯಿತು. ಇದರಿಂದ ಇಬ್ಬರು ತೀವ್ರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಸ್ಥಿತಿ ತಹಬದಿಗೆ ತರುವ ಉದ್ದೇಶದಿಂದ ನಗರದ ಕೇಂದ್ರ ಭಾಗದ ವ್ಯಾಪ್ತಿಯಲ್ಲಿ ನಾಳೆ ಮಧ್ಯರಾತ್ರಿಯವರೆಗೂ ಕರ್ಫ್ಯೂ ಜಾರಿಗೊಳಿಸಲಾಗಿದೆ. ಸಾರ್ವಜನಿಕರು ಮನೆಯಿಂದ ಹೊರಗೆ ಬರಬಾರದು. ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರೊಂದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನಾಕಾರರ ಹಿಂಸಾಚಾರದಿಂದ 20ಕ್ಕೂ ಅಧಿಕ ಮಂದಿ ಪೊಲೀಸರಿಗೆ ತೀವ್ರ ಗಾಯಗಳಾಗಿವೆ. ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಅವರ ಕೈಗೆ ಕಟ್‌ ಆಗಿದ್ದು, ಅಪರಾಧ ವಿಭಾಗದ ಡಿಸಿಪಿ ಅವರ ಕಾಲಿಗೆ ತೀವ್ರವಾದ ಗಾಯಗಳಾಗಿದೆ. ಪೊಲೀಸ್ ಠಾಣೆ ಮೇಲೆ ಉದ್ರಿಕ್ತ ಗುಂಪು ದಾಳಿ ನಡೆಸಿ ಅವರ ಹತ್ಯೆಗೆ ಮುಂದಾದಾಗ ಅನಿವಾರ್ಯವಾಗಿ ಪೊಲೀಸರು ಬಲಪ್ರಯೋಗ ಮಾಡಿದರು ಎಂದು ಸಮರ್ಥಿಸಿಕೊಂಡರು


Spread the love
RedditLinkedinYoutubeEmailFacebook MessengerTelegramWhatsapp

Exit mobile version