ಪೊಲೀಸ್ ಕರ್ತವ್ಯಕ್ಕೆ ಅಡ್ಡಿ – ಐವರ ಬಂಧನ
ಬಂಟ್ವಾಳ: ಬಂಟ್ವಾಳ ಟ್ರಾಫಿಕ್ ಠಾಣೆಯ ಮಹಿಳಾ ಉಪನಿರೀಕ್ಷಕಿ ಮತ್ತು ಸಿಬಂದಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಐವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮೂಡಬಿದ್ರೆ ನಿವಾಸಿ ಜಿತೇಶ್ (31), ವಿಕೇಶ (27), ಆಸ್ಟಿನ್ (23), ಅರ್ವಿನ್ (21), ಆಲ್ಟ್ರಿನ್ (18) ಎಂದು ಗುರುತಿಲಸಾಗಿದೆ.
ಭಾನುವಾರ ಬಂಟ್ವಾಳ ಟ್ರಾಫಿಕ್ ಠಾಣೆಯ ಉಪನಿರಿಕ್ಷಕರಾದ ಮಂಜುಳಾ ಮತ್ತುಅ ವರ ಸಿಬಂದಿಗಳು ಪುತ್ತೂರು ಕಡೆಯಿಂದ ಬರುತ್ತಿದ್ದ ಆರೋಪಿಗಳ ಕಾರಿನಲ್ಲಿ ಟಿಂಟೆಡ್ ಗ್ಲಾಸ್ ಇರುವುದನ್ನು ಹಾಗೂ ಸೀಟ್ ಬೆಲ್ಟ್ ಹಾಕದಿರುವುದನ್ನು ಕಂಡು ಕಾರನ್ನು ಪಿಎಸೈ ಹಾಗೂ ಸಿಬಂದಿಗಳು ತಡೆದು ಪರಿಶೀಲಿಸುತ್ತಿದ್ದಾಗ ಕಾರಿನಲ್ಲಿದ್ದ ಆರೋಪಿಗಳು ಕೀಳು ಮಟ್ಟದ ಭಾಷೆಯನ್ನು ಉಪಯೋಗಿಸಿದ್ದಲ್ಲದೆ ಬೇರೆ ವಾಹನಗಳ ತಪಾಸಣೆಗೂ ಅಡ್ಡಿಪಡಿಸಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ,
ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.