Home Mangalorean News Kannada News ಪೊಲೀಸ್ ಕಾನ್ ಸ್ಟೇಬಲ್ ಪರೀಕ್ಷೆಗೆ ನೋಂದಾಯಿತ ಅಭ್ಯರ್ಥಿ ಬದಲು ಇನ್ನೊಬ್ಬ ಹಾಜರ್ – ಪ್ರಕರಣ ದಾಖಲು

ಪೊಲೀಸ್ ಕಾನ್ ಸ್ಟೇಬಲ್ ಪರೀಕ್ಷೆಗೆ ನೋಂದಾಯಿತ ಅಭ್ಯರ್ಥಿ ಬದಲು ಇನ್ನೊಬ್ಬ ಹಾಜರ್ – ಪ್ರಕರಣ ದಾಖಲು

Spread the love

ಪೊಲೀಸ್ ಕಾನ್ ಸ್ಟೇಬಲ್ ಪರೀಕ್ಷೆಗೆ ನೋಂದಾಯಿತ ಅಭ್ಯರ್ಥಿ ಬದಲು ಇನ್ನೊಬ್ಬ ಹಾಜರ್ – ಪ್ರಕರಣ ದಾಖಲು

ಬೆಂಗಳೂರು: ನಾಗರೀಕ ಪೊಲೀಸ್ ಕಾನ್ಸ್ಟೇಬಲ್ (ಪರುಷ/ ಮಹಿಳೆ) ಪರೀಕ್ಷೆ ನೊಂದಾಯಿತ ಅಭ್ಯರ್ಥಿಯ ಬದಲು ಬೇರೊಬ್ಬ ವ್ಯಕ್ತಿ ಪರೀಕ್ಷೆ ಬರೆಯಲು ಪ್ರಯತ್ನಸಿದ ಘಟನೆ ನೆಲಮಂಗಲದಲ್ಲಿ ಭಾನುವಾರ ನಡೆದಿದೆ

ಸಪ್ಟೆಂಬರ್ 20ರಂದು ನಾಗರೀಕ ಪೊಲೀಸ್ ಕಾನ್ಸ್ಟೇಬಲ್ (ಪರುಷ/ ಮಹಿಳೆ) ಲಿಖಿತ ಪರೀಕ್ಷೆಯನ್ನು ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀ ಬಸವೇಶ್ವರ ಕಾಲೇಜ್ ಮತ್ತು ಶ್ರೀ ಸಿದ್ದಗಂಗಾ ಕಾಲೇಜ್ ನಲ್ಲಿ ಎರಡು ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಸಿದ್ದಗಂಗಾ ಕಾಲೇಜ್ನಲ್ಲಿ ಪರೀಕ್ಷಾ ವೇಳೆಯಲ್ಲಿ ಕೊಠಡಿ ಸಂಖ್ಯೆ 02ರಲ್ಲಿ 20ಜನ ಅಭ್ಯರ್ಥಿಗಳ ಪೈಕಿ 1 ಅಭ್ಯರ್ಥಿಗಳು ಹಾಜರಾಗಿದ್ದರು,

ಇದರಲ್ಲಿ ನೋಂದಣಿ ಸಂಖ್ಯೆ 5526131 ಅಭ್ಯರ್ಥಿ ಮಂಜುನಾಥ ಎಂ ಬಿನ್ ಮುನಿಯಪ್ಪ, ಗೋನಕನಹಳ್ಳಿ, ಜಡಿಗೇನಹಳ್ಳಿ ಪೋಸ್ಟ್, ಹೊಸಕೋಟೆ ತಾಲ್ಲೂಕಿನ ಈತನ ಬದಲಿಗೆ ಬೇರೊಬ್ಬ ಅಭ್ಯರ್ಥಿ ಪರೀಕ್ಷೆಗೆ ಹಾಜರಾಗುವುದಾಗಿ ಆತನು ತಂದಿದ್ದ ಪ್ರವೇಶ ಪತ್ರದ ಭಾವಚಿತ್ರ ಹಾಗೂ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಯ ತಾಳೆಯಾಗದ ಇದು ಜೊತೆಗೆ ಆತನ ಸಹಿ ಮತ್ತು ಜನ್ಮದಿನಾಂಕದ ಸಹ ತಾಳೆಯಾಗದಿರುವುದಿಲ್ಲ,

ಸದರಿ ವಿಚಾರವನ್ನು ಕಾಲೇಜ್ ಪರೀಕ್ಷಾ ಮೇಲ್ವಿಚಾರಕರ ಶ್ರೀ ಶಿವಣ್ಣ, ಸಿಪಿಐ ನೆಲಮಂಗಲ ಅವರಿಗೆ ತಿಳಿಸಿ, ಪರೀಕ್ಷೆಗೆ ಬಂದಿದ್ದ ಅಭ್ಯರ್ಥಿಯನ್ನು ವಿಚಾರ ಮಾಡಲಾಗಿ ನನ್ನ ಹೆಸರು ಶಿವಪ್ರಸಾದ್ ಬಿನ್ ನಾರಾಯಣಸ್ವಾಮಿ, ತೇನೇನಹಳ್ಳಿ, ಶ್ರೀನಿವಾಸಪುರ ತಾಲ್ಲೂಕು, ಕೋಲಾರ ಜಿಲ್ಲಾ ಎಂದು ತಿಳಿಸುತ್ತಾನೆ.

ಈ ಸಂಬಂಧವಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೊಠಡಿ ಮೇಲ್ವಿಚಾರಕರಾದ ಇನ್ನಿಟಿಲೇಟರ್) ಶ್ರೀ ಸಿದ್ದಲಿಂಗಸ್ವಾಮಿ, ಶಿಕ್ಷಕರು, ಬೆಟ್ಟಹಳ್ಳಿ ಪಾಳ್ಯ ಸರ್ಕಾರಿ ಶಾಲೆ ಅವರು ನೀಡಿದ ದೂರಿನ ಸಹಿತ ನೀಡಿದ ದಾಖಲೆಗಳನ್ನು ಮತ್ತು ಆರೋಪಿ ಶಿವಪ್ರಸಾದ್ ನನ್ನು ವಶಕ್ಕೆ ನೀಡಿದ ಮೇರೆಗೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love

Exit mobile version