ಪೊಲೀಸ್ ದೌರ್ಜನ್ಯ ಖಂಡಿಸಿ ಶನಿವಾರ ಕಡಬ ಬಂದ್
ಮಂಗಳೂರು: ವಾಟ್ಸಾಪ್ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವ್ಯಕ್ತಿ ಪೋಲಿಸರಿಗೆ ಶರಣಾಗಿದ್ದರೂ ಹಿಂದೂ ಕಾರ್ಯಕರ್ತರನ್ನು ಪೊಲೀಸರು ಪ್ರಕರಣದಲ್ಲಿ ಸಿಲುಕಿಸಿ ದಬ್ಬದಾಳಿಗೆ ನಡೆಸುತ್ತಿದ್ದು, ಇದರ ವಿರುದ್ದ ಅಕ್ಟೋಬರ್ 28 ರಂದು ಕಡಬ ಬಂದ್ ಮಾಡಿ ಪ್ರತಿಭಟನೆ ನಡೆಸಲು ಹಿಂದೂ ಪರ ಸಂಘಟನೆಗಳು ನಿರ್ಧರಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘಟಕರು ಹಿಂದೂ ಶಕ್ತಿ ಮೇಲೆ ನಿರಂತರ ದಬ್ಬಾಳಿಕೆ ನಾವು ಸಹಿಸುವುದಿಲ್ಲ. ವಾಟ್ಸಾಪ್ ಪ್ರಕರಣದಲ್ಲಿ ಆರೋಪಿ ಯುವಕನ್ನನ್ನು ಸಂಘಟನೆ ಪ್ರಮುಖರೇ ಪೊಲೀಸರಿಗೆ ಒಪ್ಪಿಸಿ ಪ್ರಕರಣವನ್ನು ಸೌಹಾರ್ದಯುತವಾಗಿ ಮುಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಆದರೆ ಪ್ರಕರಣದಲ್ಲಿ ಅಮಾಯಕ ಹಿಂದೂ ಯುವಕನನ್ನು ಸಿಲುಕಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರಿಗೆ ನಾವು ಇಷ್ಟೊಂದು ಸಹಕಾರ ನೀಡುತ್ತರುವಾಗ ಪ್ರಕರಣಕ್ಕೆ ಸಂಬಂಧಪಡದ ಯುವಕನೊಬ್ಬನನ್ನು ಪ್ರಕರಣದಲ್ಲಿ ಹೆಚ್ಚುವರಿಯಾಗಿ ಸೇರ್ಪಡೆ ಮಾಡಿ ಪೋಲಿಸರು ಹಿಂದೂಗಳ ಮೇಲೆ ಸವಾರಿ ಮಾಡುತ್ತಿದ್ದು, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನು ಪ್ರತಿಭಟಿಸಿ ಶನಿವಾರ ಕಡಬ ಹಾಗೂ ಸುಬ್ರಹ್ಮಣ್ಯದಲ್ಲಿ ಬಂದ್ ಹಾಗೂ ಪ್ರತಿಭಟನೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿಲಾಗಿದೆ.