ಪೋಲಿಸ್ ಕಮೀಷನರ್ ನೇರ ಫೋನ್ ಇನ್ ಉತ್ತಮ ಪ್ರತಿಕ್ರಿಯೆ: ಒಂದು ಗಂಟೆಯಲ್ಲಿ 18 ಕರೆ
ಮಂಗಳೂರು: ಮಂಗಳೂರು ಪೋಲಿಸ್ ಕಮೀಷನರ್ ಅವರು ವಾರದ ಸಾರ್ವಜನಿಕರ ನೇರ ಫೋನ್ ಇನ್ ಕಾರ್ಯಕ್ರಮಕ್ಕೆ ಶುಕ್ರವಾರ ಕೇವಲ ಒಂದು ಗಂಟೆಯ ಅವದಿಯಲ್ಲಿ 18 ಕರೆಗಳು ಬಂದಿವೆ.
ಕಳೆದ ಅಗೋಸ್ತ್ ನಲ್ಲಿ ಕಮೀಷನರ್ ಚಂದ್ರಶೇಖರ್ ಅವರು ಆರಂಭಿಸಿ ನೇರ ಫೋನ್ ಇನ್ ಕಾರ್ಯಕ್ರಮ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದು ಶುಕ್ರವಾರ 18 ಮಂದಿ ವಿವಿಧ ಸಮಸ್ಯೆಗಳನ್ನು ಪರಿಹಾರ ಕೋರಿ ಕರೆ ಮಾಡಿದ್ದಾರೆ.
ಬಂದ ಹೆಚ್ಚಿನ ಕರೆಗಳು ನಗರದ ಟ್ರಾಫಿಕ್ ಸಮಸ್ಯೆಗಳಿಗೆ ಸಂಬಂಧಿಸಿದ್ದು, ಉರ್ವಾದಲ್ಲಿ ವಾಹನ ದಟ್ಟಣೆ ಸಮಸ್ಯೆಗೆ ಸಂಬಂಧಿಸಿದ ಕರೆಗೆ ಡಿಸಿಪಿ ಸಂಜೀವ್ ಪಾಟೀಲ್ ಅವರಿಗೆ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಆಶ್ವಾಸನೆ ನೀಡಿದರು.
ಬೆಂದೂರು ನಂತೂರು ರಸ್ತೆಯಲ್ಲಿನ ಟ್ರಾಫಿಕ್ ಸಮಸ್ಯೆ, ಸಿಟಿ ಬಸ್ಸುಗಳು ಬಸ್ಸು ಸ್ಟ್ಯಾಂಡಿನಲ್ಲಿ ಗಂಟೆಗಟ್ಟಲೆ ನಿಲ್ಲುವುದರಿಂದ ನಡೆಯುವ ಸಮಸ್ಯೆ, ದ್ವಿಚಕ್ರ ವಾಹನ ಸವಾರರು ಸರಿಯಾಗಿ ರಸ್ತೆ ನಿಯಮ ಪಾಲಿಸದೆ ಇರುವ ಕುರಿತು, ಸೈಡ್ ಮಿರರ್ ಉಪಯೋಗಿಸದ ಕುರಿತು ಕೂಡ ಸಾರ್ವಜನಿಕರು ಕರೆ ಮಾಡಿ ಸಮಸ್ಯೆಗಳನ್ನು ತೋಡಿಕೊಂಡರು.
ಸುರತ್ಕಲ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾಣೆ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಎಂದು ಕೇಳಿದ ಕರೆ ಕೂಡ ಸ್ವೀಕರಿಸಲಾಯಿತು. ಮೀನು ಸಾಗಾಟದ ಲಾರಿಗಳು ರಸ್ತೆಯ ಮೇಲೆ ಮೀನಿನ ನೀರನ್ನು ಚೆಲ್ಲಿಕೊಂಡು ಹೋಗುವುದನ್ನು ನಿಲ್ಲಿಸಬೇಕು ಎಂದು ಸಾರ್ವಜನಿಕರು ಕೋರಿದರು.
ಮಂಗಳೂರು ಹಿಲ್ಸ್ ಬಳಿ ಪ್ರತಿ ವಾರ ವಾರಾಂತ್ಯದ ಪಾರ್ಟಿಗಳು ನಡೆಯುತ್ತಿದ್ದು ಈ ವೇಳೆ ಕರ್ಕಶವಾದ ಸಂಗೀತವನ್ನು ಹಾಕಿ ಸಾರ್ವಜನಿಕರಿಗೆ ಸಮಸ್ಯೆ ಉಂಟು ಮಾಡಲಾಗುತ್ತದೆ ಎಂದು ದೂರಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಸಂಜೀವ್ ಪಾಟೀಲ್ ಭರವಸೆ ನೀಡಿದರು.
ಬೈಕಂಪಾಡಿಯಲ್ಲಿ ಕ್ಲಬ್ ವೊಂದರಿಂದ ಜೂಜಾಟ ನಡೆಯುತ್ತಿದ್ದು ಯಾವುದೇ ಕ್ರಮ ಇಲಾಖೆ ಕೈಗೊಳ್ಳುತ್ತಿಲ್ಲ, ಬಸ್ಸುಗಳಲ್ಲಿ ಹಿರಿಯ ನಾಗರಿಕರಿಗೆ ಇರುವ ಪ್ರತ್ಯೇಕ ಆಸನ ವ್ಯವಸ್ಥೆಯಲ್ಲಿ ಬೇರೆ ಪ್ರಯಾಣಿಕರು ಕುಳಿತು ಕೊಳ್ಳುತ್ತಿದ್ದು ಹಿರಿಯ ನಾಗರಿಕರಿಗೆ ವ್ಯವಸ್ಥೆ ಮಾಡಿಕೊಡುವಂತೆ ಕೋರಿದರು.
ಕೆಎಸ್ ಆರ್ ಟಿ ಬಸ್ ನಿಲ್ದಾಣದ ಮುಂಬಾಗದಲ್ಲಿ ಕುಡಕರು ಹಾಗೂ ವಲಸೆ ಕಾರ್ಮಿಕರಿಂದ ಪ್ರಯಾಣಿಕರಿಗೆ ತೊಂದರೆಯ ಬಗ್ಗೆ, ಕೊಟ್ಟಾರ ಸೈಂಟ್ ಮೇರಿಸ್ ಶಾಲೆಯ ಬಳಿ ನಿಯಮ ಉಲ್ಲಂಘಿಸಿ ಆರಂಭಿಸಿರುವ ಮದ್ಯ ಅಂಗಡಿಯ ವಿರುದ್ದ ಕ್ರಮಕ್ಕೆ ಒತ್ತಾಯ ಮಾಡಿಲಾಯಿತು.
ಎಲ್ಲಾ ಕರೆಗಳಿಗೆ ಸಮಾಧನಾದಿಂದ ಉತ್ತರಿಸಿದಿ ಡಿಸಿಪಿ ಸಂಜೀವ್ ಪಾಟೀಲ್ ಕರೆಗಳಿಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಅಲ್ಲದೆ ಬಸ್ಸುಗಳಲ್ಲಿ ಹಿರಿಯ ನಾಗರಿಕರಿಗೆ ಬಸ್ಸುಗಳಲ್ಲಿ ಸಮಸ್ಯೆ ಉಂಟಾದಲ್ಲಿ ಕೂಡಲೇ 100 ಕ್ಕೆ ಕರೆ ಮಾಡುವಂತೆ ಸೂಚಿಸಿದರು.